ಕೊಡಗಿನಲ್ಲಿ ಕೊರೊನಾ ಸ್ವಲ್ಪ ಮಟ್ಟಿಗೆ ತಹಬದಿಗೆ ಬಂದಿದೆ. ಹಾಗೆಂದು ಮನಸೋಯಿಚ್ಛೆ ಓಡಾಡಬಾರದು. ನಿರ್ಲಕ್ಷö್ಯ ಮಾಡಿದರೆ ಮುಂದೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅಭಿಪ್ರಾಯಿಸಿದ್ದಾರೆ.

‘ಪ್ರಾರಂಭದಲ್ಲಿ ಸೋಂಕಿತರ ಸಾವು ಮತ್ತು ಪಾಸಿಟಿವ್ ಪ್ರಮಾಣದಿಂದಾಗಿ ಜಿಲ್ಲಾಡಳಿತದೊಂದಿಗೆ ನಾವುಗಳೂ ಹೆದರಿದ್ದೆವು. ಲಾಕ್‌ಡೌನ್ ಮಾಡಿದ್ದರಿಂದ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಮುಂದಿನ ೧೫ ದಿನಗಳು ಇನ್ನಷ್ಟು ಎಚ್ಚರಿಕೆ ಬೇಕು. ಅನ್‌ಲಾಕ್ ಬದಲು ಇನ್ನೂ ೧೫ ದಿನ ಲಾಕ್‌ಡೌನ್ ಮುಂದುವರೆಸುವುದು ಉತ್ತಮ’

‘ಕೊರೊನಾಕ್ಕೆ ಹೆದರಿಯೇ ಹಲವು ಮಂದಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಬಿಸಿನೀರು ಸೇವಿಸಬೇಕು. ಮಾರ್ಗಸೂಚಿ ಪಾಲಿಸಿದರೆ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ಮುಂದಿನ ೩ ತಿಂಗಳು ಯಾವುದೇ ಸಮಾರಂಭಗಳಿಗೂ ಅವಕಾಶ ನೀಡಬಾರದು’

‘ಶಾಸಕರುಗಳು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ಅನ್‌ಲಾಕ್ ಬಗ್ಗೆ ಯೋಚಿಸಬೇಕು. ಈ ಬಗ್ಗೆ ಸಚಿವರ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಜಿಲ್ಲಾಧಿಕಾರಿಗಳೂ ಹೆಚ್ಚು ಓಡಾಟ ಮಾಡುತ್ತಿದ್ದಾರೆ. ತಾನು ವೀರಾಜಪೇಟೆ ಹಾಗೂ ಮಡಿಕೇರಿಯ ಎಲ್ಲಾ ಗ್ರಾ.ಪಂ. ಭೇಟಿ ಮಾಡಿದ್ದೇನೆ. ಸೋಮವಾರಪೇಟೆಯ ಕೆಲವು ಪಂಚಾಯಿತಿಗಳು ಬಾಕಿಯಾಗಿವೆ. ಮುಂದಿನ ದಿನಗಳಲ್ಲಿ ಭೇಟಿ ಮಾಡುತ್ತೇನೆ. ಕೇರ್‌ಸೆಂಟರ್, ಸೀಲ್‌ಡೌನ್, ಕಂಟೈನ್‌ಮೆAಟ್ ಜೋನ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ’

‘ಕೊರೊನಾ ನಡುವೆಯೂ ನಮ್ಮ ಓಡಾಟ ಕಂಡು ಮನೆಯವರೂ ಆತಂಕಕ್ಕೆ ಒಳಗಾಗುತ್ತಿರುತ್ತಾರೆ. ನಾವು ಜನಪ್ರತಿನಿಧಿಯಾಗಿ ಹಿಂದೆ ಬೀಳದೆ ಜನರ ಸೇವೆ ಮಾಡಲೇಬೇಕು. ನನ್ನ ಮಗಳು ಡಾಕ್ಟರ್; ಅವಳೂ ೧ ವರ್ಷ ಕೋವಿಡ್ ಕೆಲಸ ಮಾಡಿದ್ದಾಳೆ. ಪಿಪಿಇ ಕಿಟ್ ಧರಿಸಿ ಎಚ್ಚರಿಕೆಯಿಂದ ಹೋಗಿ ಬನ್ನಿ ಎಂದು ಸಲಹೆ ನೀಡಿದ್ದಾಳೆ. ಅದರಂತೆ ಕೇರ್‌ಸೆಂಟರ್‌ಗೆ ಭೇಟಿ ನೀಡುತ್ತಿದ್ದೇನೆ. ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಸುನಿಲ್ ಸುಬ್ರಮಣಿ ಶ್ಲಾಘಿಸಿದ್ದಾರೆ.