ಶನಿವಾರಸಂತೆ, ಜೂ. ೯: ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ಕರೆಯಲಾಗಿತ್ತು. ಕಾನೂನು ಉಲ್ಲಂಘಿಸಿದ ಹಾಗೂ ಕೊರೊನಾ ಪರೀಕ್ಷೆ ಮಾಡಿಸದ ಅಂಗಡಿಗಳನ್ನು ಗ್ರಾ.ಪಂ.ಯಿAದ ಮುಚ್ಚಿಸಲಾಯಿತು. ಅದರಂತೆ ವರ್ತಕರ ಸಂಘದ ಅಧ್ಯಕ್ಷರು - ಕಾರ್ಯದರ್ಶಿಯವರನ್ನು ಕರೆಸಲಾಗಿ, ವರ್ತಕರು ಕೋವಿಡ್-೧೯ರ ನಿಯಮ ಉಲ್ಲಂಘಿಸದAತೆ ತಿಳಿಸಲಾಯಿತು. ಪಿ.ಡಿ.ಓ. ಬಿ.ಜೆ. ಮೇದಪ್ಪ ಮಾತನಾಡಿ, ಕೋವಿಡ್-೧೯ರ ನಿಯಮವನ್ನು ಉಲ್ಲಂಘಿಸದೆ ಸರಕಾರದ ಮಾರ್ಗಸೂಚಿ ಯಂತೆ ವರ್ತಕರು ವ್ಯಾಪಾರ ನಡೆಸುವಂತೆ ತಿಳಿಸಿದರು. ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಸರಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷೆ ಸರೋಜ ಶೇಖರ್, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ರಘು, ಎಸ್.ಎನ್. ಶರತ್ ಶೇಖರ್, ಆದಿತ್ಯ ಮತ್ತು ಪಂಚಾಯಿತಿ ಸಿಬ್ಬಂದಿಗಳಾದ ವಸಂತ್ ಕುಮಾರ್, ಡಾಟಾ ಆಪರೇಟರ್ಗಳಾದ ಫೌಜಿಯಾ ಬಾನು, ಲೀಲಾ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಅಹಮ್ಮದ್, ಕಾರ್ಯದರ್ಶಿ ನಾರಾಯಣ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.