ಕೊಡ್ಲಿಪೇಟೆ, ಜೂ. ೯: ಕೊಡ್ಲಿಪೇಟೆ ಗಾಮ ಪಂಚಾಯಿತಿ ವತಿಯಿಂದ ಕೋವಿಡ್-೧೯ ನಿಯಂತ್ರಿಸುವ ನಿಟ್ಟಿನಲ್ಲಿ ಜನ ಸಂದಣಿ ಹೆಚ್ಚಾಗಿರುವಂತಹ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡಲಾಯಿತು. ಲಾಕ್‌ಡೌನ್ ಸಮಯದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್‌ಗಳು, ಕ್ಲಿನಿಕ್, ಮೆಡಿಕಲ್ ಸ್ಟೋರ್ ಮತ್ತು ನ್ಯಾಯಬೆಲೆ ಅಂಗಡಿಗಳ ಆವರಣದಲ್ಲಿ ಸ್ಯಾನಿ ಟೈಸಿಂಗ್ ಮಾಡು ತ್ತಿದ್ದು, ಗ್ರಾ.ಪಂ. ವ್ಯಾಪ್ತಿಯ ಜನವಸತಿ ಪ್ರದೇಶ ಹಾಗೂ ಕೊರೊನಾ ಸೋಂಕಿತರ ಮನೆಗಳಿಗೂ ಔಷಧಿ ಸಿಂಪಡಿಸಲಾಗುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಹೇಳಿದರು.

ಗ್ರಾ.ಪಂ. ಸದಸ್ಯರಾದ ವಹಾಬ್, ಪ್ರಸನ್ನ, ನಂದೀಶ್, ಮಂಜುನಾಥ್, ಗ್ರಾ.ಪಂ. ಸಿಬ್ಬಂದಿಗಳಾದ ಅಣ್ಣಪ್ಪ, ಕಾಂತರಾಜು, ರಾಜು ಉಪಸ್ಥಿತರಿದ್ದರು.