ಶನಿವಾರಸಂತೆ, ಜೂ. ೯: ಗೋಪಾಲಪುರ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಜೆ.ವಿ. ಸಹದೇವ (೫೬) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಹದೇವ್ ಪ್ರತ್ಯೇಕವಾಗಿ ವಾಸವಿದ್ದು, ತಾ. ೭ ರಂದು ಮನೆಯಿಂದ ತೆರಳಿದವರು ತಾ. ೮ ರಂದು ಚಿಕ್ಕಕೊಳತ್ತೂರು ಗ್ರಾಮದ ಮತ್ತೂರು ಮಹೇಶ್ ಅವರ ತೋಟದ ಲೈನ್ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.