ಕುಶಾಲನಗರ, ಜೂ. ೯: ಕುಶಾಲನಗರ ಸಮೀಪದ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ಗಿರಿಜನ ಹಾಡಿಗಳ ನಿವಾಸಿಗಳಿಗೆ ಕೋವಿಡ್ ಲಸಿಕೆ ನೀಡುವ ಶಿಬಿರಕ್ಕೆ ಚಾಲನೆ ನೀಡಲಾಯಿತು. ಮಡಿಕೇರಿ ಕ್ಷೇತ್ರ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿದರು

ಗುಡ್ಡೆಹೊಸೂರು, ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜನ ಹಾಡಿಗಳ ನಿವಾಸಿಗಳಿಗೆ ಕೋವಿಡ್ ಲಸಿಕೆ ನೀಡುವ ಸಂಬAಧ ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘ ಆವರಣದಲ್ಲಿ ವಿಶೇಷ ಶಿಬಿರ ಏರ್ಪಡಿಸಲಾಗಿದೆ ಎಂದು ರಂಜನ್ ತಿಳಿಸಿದರು.ಲಸಿಕೆ ಪಡೆದುಕೊಳ್ಳುವ ಉದ್ದೇಶದ ಬಗ್ಗೆ ನಿವಾಸಿಗಳಲ್ಲಿ ಅರಿವು ಮೂಡಿಸಲಾಯಿತು. ಕಬ್ಬಿನ ಗದ್ದೆ, ಮೀನುಕೊಲ್ಲಿ, ಬಸವನಹಳ್ಳಿ, ಮಾವಿನಹಳ್ಳ, ಹೊಸಕಾಡು ವ್ಯಾಪ್ತಿಯ ಹಾಡಿಗಳ ನೂರಾರು ನಿವಾಸಿಗಳು ಲಸಿಕೆ ಪಡೆದುಕೊಂಡರು. ೧೮ ರ ವಯೋಮಾನ ಮೇಲ್ಪಟ್ಟ ನಿವಾಸಿಗಳಿಗೆ ಲಸಿಕೆ ನೀಡಲಾಯಿತು. ಡಾ. ಚೇತನ್, ಡಾ.ಸಚಿನ್ ನೇತೃತ್ವದ ವೈದ್ಯಕೀಯ ತಂಡ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಸೋಮವಾರ ಪೇಟೆ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ, ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ ಅಧಿಕಾರಿ ಶಿವಕುಮಾರ್, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಆರ್.ಕೆ. ಚಂದ್ರ, ಉಪಾಧ್ಯಕ್ಷ ಮನು, ಬಿ.ಕೆ. ಮೋಹನ್ ಮತ್ತಿತರು ಇದ್ದರು.