ಕುಶಾಲನಗರ, ಜೂ. ೯: ಕುಶಾಲನಗರ ಪಟ್ಟಣ ವ್ಯಾಪ್ತಿಯ ಕಾವೇರಿ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಕಾಡುಪಾಲಾಗಿದ್ದ ಕ್ರೀಡಾಂಗಣಕ್ಕೆ ಲಾಕ್‌ಡೌನ್ ನಡುವೆ ಸ್ಥಳೀಯ ಸಂಘವೊAದರ ಕಾರ್ಯಕರ್ತರು ಕಾಯಕಲ್ಪ ಕಲ್ಪಿಸಲು ಮುಂದಾಗಿದ್ದಾರೆ. ಕಳೆದ ಹಲವು ದಶಕದ ಅವಧಿಯಲ್ಲಿ ಹಾರಂಗಿ ಅಣೆಕಟ್ಟು ಯೋಜನೆ ಸಂದರ್ಭದಲ್ಲಿ ನಿರ್ಮಾಣಗೊಂಡಿದ್ದ ಕ್ರೀಡಾಂಗಣ ನಿರ್ವಹಣೆಯ ಕೊರತೆಯಿಂದ ಕಾಡುಪಾಲಾದ ಸ್ಥಿತಿಯನ್ನು ಎದುರಿಸುತ್ತಿರುವುದನ್ನು ಮನಗಂಡು ಅಲ್ಲಿನ ಅಳಿಲು ಸೇವಾ ತಂಡದ ಸದಸ್ಯರು ಸ್ವಚ್ಛ ಮಾಡಿ ಕ್ರೀಡಾಂಗಣಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾಗಿದ್ದಾರೆ. ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ ಮನು ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ಶ್ರಮದಾನ ನಡೆಸಿ ಸ್ವಚ್ಛತಾ ಕಾರ್ಯ ನಡೆದಿದೆ. ಅಳಿಲು ಸೇವಾ ತಂಡದ ಶಿವಾಜಿ, ಪ್ರಶಾಂತ್ ಮತ್ತಿತರರು ಈ ಕಾಯಕದಲ್ಲಿ ತೊಡಗಿದ್ದಾರೆ. ಶಾಸಕ ರಂಜನ್ ಸ್ಥಳಕ್ಕೆ ಭೇಟಿ ನೀಡಿ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.