ಸೋಮವಾರಪೇಟೆ, ಜೂ. ೮: ಕೂಲಿ ಕೆಲಸ ಮಾಡಿಕೊಂಡು ತನ್ನ ಮೂವರು ಪುತ್ರಿಯರನ್ನು ಸಲಹಿದ ಮಹಿಳೆಯೋರ್ವರು ಇದೀಗ ಮೂಳೆ ಕ್ಯಾನ್ಸರ್‌ಗೆ ಒಳಗಾಗಿ ಹಾಸಿಗೆ ಹಿಡಿದಿದ್ದು, ಇವರ ಶಸ್ತç ಚಿಕಿತ್ಸೆಗೆ ಸಹೃದಯ ದಾನಿಗಳಿಂದ ನೆರವಿನ ಹಸ್ತ ಬಯಸುತ್ತಿದ್ದಾರೆ.

ಸಮೀಪದ ಹಾನಗಲ್ಲುಬಾಣೆಯ ನಿವಾಸಿ ಲೀಲಾವತಿ (೬೦) ಎಂಬವರೇ ಕ್ಯಾನ್ಸರ್‌ಗೆ ಒಳಗಾಗಿ ಹಾಸಿಗೆ ಹಿಡಿದಿರುವವರು, ಕಳೆದ ೧೫ ವರ್ಷಗಳ ಹಿಂದೆಯೇ ಪತಿ ನಿಧನರಾಗಿದ್ದು, ಕೂಲಿ ಕೆಲಸ ಮಾಡಿ ಮೂವರು ಪುತ್ರಿಯರನ್ನು ವಿವಾಹ ಮಾಡಿಕೊಟ್ಟ ಲೀಲಾವತಿ ಅವರಿಗೆ ಕಳೆದ ಮೂರು ವರ್ಷಗಳ ಹಿಂದೆ ಮೂಳೆ ಕ್ಯಾನ್ಸರ್ ತಗುಲಿದ್ದು, ಅವರಿವರಲ್ಲಿ ಸಾಲ ಮಾಡಿ ಒಂದಿಷ್ಟು ಚಿಕಿತ್ಸೆ ಪಡೆದಿದ್ದಾರೆ.

ಕಳೆದ ೧ ತಿಂಗಳಿನಿAದ ಮೂಳೆ ಕ್ಯಾನ್ಸರ್ ಹೆಚ್ಚಾಗಿ ಹಾಸಿಗೆ ಹಿಡಿದಿದ್ದಾರೆ. ಮೇಲೇಳಲೂ ಆಗದ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಇವರಿಗೆ ಇದೀಗ ಬೆನ್ನು ಮತ್ತು ಸೊಂಟದ ಭಾಗದಲ್ಲಿ ಶಸ್ತç ಚಿಕಿತ್ಸೆ ಮಾಡಬೇಕಿದ್ದು, ಕೈಯಲ್ಲಿ ಹಣವಿಲ್ಲದೇ ಪರಡಾಡುತ್ತಿದ್ದಾರೆ.

ಮೂವರು ಪುತ್ರಿಯರೂ ಸಹ ತಮ್ಮ ಕೈಲಾದಷ್ಟು ಹಣವನ್ನು ಸಾಲ ಮಾಡಿ ಚಿಕಿತ್ಸೆಗೆ ವಿನಿಯೋಗಿಸಿದ್ದು, ಇತ್ತ ಮಾಡಿದ ಸಾಲ ತೀರಿಸಲೂ ಆಗದೇ, ಅತ್ತ ಅಮ್ಮನ ಚಿಕಿತ್ಸೆಯನ್ನು ಮಾಡಿಸಲೂ ಆಗದೇ ಪರಿತಪಿಸುತ್ತಿದ್ದಾರೆ.

ಬೆನ್ನು ಮತ್ತು ಸೊಂಟದ ಭಾಗದಲ್ಲಿ ಶಸ್ತç ಚಿಕಿತ್ಸೆ ಮಾಡಿದರೆ ಎದ್ದು ಓಡಾಡಿಕೊಂಡಿರಬಹುದು ಎಂದು ವೈದ್ಯರು ಅಭಿಪ್ರಾಯಿಸಿದ್ದು, ಶಸ್ತç ಚಿಕಿತ್ಸೆಯೇ ಪರಿಹಾರ ಎಂದು ತಿಳಿಸಿದ್ದಾರೆ. ಇದಕ್ಕೆ ರೂ. ೧ ಲಕ್ಷಕ್ಕೂ ಅಧಿಕ ಹಣ ತಗುಲಬಹುದು ಎಂದು ಆಸ್ಪತ್ರೆಯಿಂದ ತಿಳಿಸಿದ್ದಾರೆ.

ಕೈಯಲ್ಲಿ ಹಣವಿಲ್ಲದೆ ತೀರಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈ ಮೊತ್ತ ಭರಿಸುವುದು ಕಷ್ಟಸಾಧ್ಯ. ಈ ನಡುವೆ ಕೊರೊನಾ ಸೋಂಕು ತಗುಲಿ ಮನೆಯೂ ಸೀಲ್‌ಡೌನ್ ಆಗಿದ್ದು, ಹೊರಗಡೆ ಓಡಾಡಲೂ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಮ್ಮನ ಚಿಕಿತ್ಸೆಯ ಹೊಣೆಯೂ ಹೆಗಲ ಮೇಲಿದೆ. ಏನು ಮಾಡಬೇಕೆಂದೇ ತೋಚುತ್ತಿಲ್ಲ ಎಂದು ಪುತ್ರಿ ಮಂಜುಳಾ ಅಳಲು ತೋಡಿಕೊಂಡಿದ್ದಾರೆ.

ಚಿಕಿತ್ಸೆಗೆ ಎದುರು ನೋಡುತ್ತಿರುವ ಲೀಲಾವತಿ ಅವರು ಪ್ರಸ್ತುತ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಶಸ್ತç ಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ. ಈ ಹಿನ್ನೆಲೆ ಸಹೃದಯ ದಾನಿಗಳು ಒಂದಿಷ್ಟು ನೆರವಿನ ಹಸ್ತ ಚಾಚಿದರೆ ಅಮ್ಮನ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಮಕ್ಕಳು ಮನವಿ ಮಾಡಿದ್ದಾರೆ.

ಲೀಲಾವತಿ ಅವರಿಗೆ ತಗುಲಿರುವ ಕ್ಯಾನ್ಸರ್ ರೋಗದಿಂದ ಚೇತರಿಸಿಕೊಳ್ಳಲು ಶಸ್ತç ಚಿಕಿತ್ಸೆ ಅನಿವಾರ್ಯವೂ ಆಗಿದೆ. ಇವರ ಶಸ್ತç ಚಿಕಿತ್ಸೆಗೆ ನೆರವು ನೀಡುವವರು ಸೋಮವಾರಪೇಟೆಯ ಬ್ಯಾಂಕ್ ಆಫ್ ಬರೋಡ ಶಾಖೆ, ಖಾತೆ ಸಂಖ್ಯೆ ೬೪೧೭೦೧೦೦೦೦೨೮೭೫, ಐಎಫ್‌ಎಸ್‌ಸಿ: ಬಿಎಆರ್‌ಬಿ೦ವಿಜೆಎನ್‌ಎಜಿಆರ್ ಖಾತೆಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ೯೪೮೩೪೭೨೪೩೪ ಸಂಖ್ಯೆಯನ್ನು ಸಂಪರ್ಕಿಸಬಹುದು.