ಮಡಿಕೇರಿ ಜೂ.೮ : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿವೆ. ಈ ಪೈಕಿ ಪ್ರಮುಖವಾಗಿ ಬೆಟ್ಟ ಗುಡ್ಡಗಳಿಂದ ಕೂಡಿರುವ, ಹಿಂದುಳಿದ ಬಡಾವಣೆಗಳಾದ ಪುಟಾಣಿನಗರ, ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಹಾಗೂ ಮಲ್ಲಿಕಾರ್ಜುನ ನಗರಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬೀದಿ ದೀಪ ಅಳವಡಿಕೆ, ಚರಂಡಿ ಹಾಗೂ ತೋಡುಗಳ ದುರಸ್ತಿ, ಕಾಡು ಕಡಿಯುವದು ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸಲಾಗಿದೆ. ಇಂದಿರಾನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ೨೦೧೮ರಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರೊಂದಿಗೆ ವಾರ್ಡ್ನ ಸದಸ್ಯರುಗಳು ಕೊರೊನಾ ದಿಂದಾಗಿ ಸಂಕಷ್ಟಕ್ಕೀಡಾ ಗಿರುವವರಿಗೆ ಹಾಗೂ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ಕೂಡ ವಿತರಣೆ ಮಾಡಿದ್ದಾರೆ.

ಪುಟಾಣಿನಗರದಲ್ಲಿ ಮಂಜುಳಾ, ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರಗಳಲ್ಲಿ ಶ್ವೇತಾ ಹಾಗೂ ಸಬಿತಾ, ಮಲ್ಲಿಕಾರ್ಜುನ ನಗರದಲ್ಲಿ ಕಲಾವತಿ ಅವರುಗಳು ತಮ್ಮ ತಮ್ಮ ವಾರ್ಡ್ಗಳ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.