ವೀರಾಜಪೇಟೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಂಚಾಯಿತಿಯಿAದ ಗ್ರಾಮದ ವಿವಿಧ ಸ್ಥಳಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ಗ್ರಾಮದ ವಾಲ್ಮೀಕಿ ಭವನದ ಆವರಣದಲ್ಲಿ ಮತ್ತು ನಕ್ಸಲ್ ನಿಗ್ರಹ ದಳದ ಕೇಂದ್ರದ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಪಿಡಿಓ ಬಿ. ಮಣಿ, ಅರಣ್ಯ ಇಲಾಖೆಯ ಶಿವರಾಮ್, ಮಧು, ಮತ್ತು ಮಂಜುನಾಥ್, ನಕ್ಸಲ್ ನಿಗ್ರಹ ದಳ ಕೇಂದ್ರದ ಅಧಿಕಾರಿಗಳಾದ ರಂಗನಾಥ್, ಇಲಾಖೆಯ ಸಿಬ್ಬಂದಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷೆÀ ಹೆಚ್.ಬಿ. ಪಾರ್ವತಿ, ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಹಾಗೂ ಸದಸ್ಯರು ಹಾಜರಿದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ

ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಮತ್ತು ಸದಸ್ಯ ಅನೂಪ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಪರಿಸರ ದಿನ ಆಚರಿಸಿದರು. ಪರಿಸರ ದಿನದ ಅಂಗವಾಗಿ ವಿವಿಧ ಜಾತಿಯ ತರಕಾರಿ, ಕಾಡುಜಾತಿಯ ಸಸಿಗಳು, ಹಣ್ಣು ಹಂಪಲು ಸೇರಿದಂತೆ ಸುಮಾರು ೩೦ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದರು.ಶನಿವಾರಸಂತೆ: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಒಂದೊAದು ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಟ್ಟು ಅವುಗಳ ಫೋಟೋಗಳನ್ನು ಹಾಕಿ ಅವುಗಳ ಮಹತ್ವವನ್ನು ವಿವರಿಸುವ ವೀಡಿಯೋವನ್ನು ಅಪ್ಲೋಡ್ ಮಾಡುವ ಸವಾಲು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ವಿದ್ಯಾರ್ಥಿಗಳು ಮಾವು, ಹಲಸು, ಸೀಬೆ, ಬಟರ್ ಫ್ರೂಟ್, ನಿಂಬೆ, ನೆಲ್ಲಿಕಾಯಿ, ಸಪೋಟ, ನೇರಳೆ ಹೀಗೆ ಹಲವು ಗಿಡಗಳನ್ನು ನೆಟ್ಟು ಫೋಟೋ ಮತ್ತು ವೀಡಿಯೋ ಅಪ್ಲೋಡ್ ಮಾಡುವುದರ ಮೂಲಕ ಪರಿಸರ ಪ್ರಜ್ಞೆ ಮೂಡಿಸುವುದರಲ್ಲಿ ಸಫಲರಾದರು.ಗುಡ್ಡೆಹೊಸೂರು: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಉಪ ಆರೋಗ್ಯ ಕೇಂದ್ರದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ನಂದಿನಿ ಪಿ.ಡಿ.ಓ. ಶ್ಯಾಂ ತಮ್ಮಯ್ಯ, ಸದಸ್ಯರಾದ ನಿತ್ಯ ಕುಡೆಕ್ಕಲ್, ಬಿ.ಎಂ. ಪ್ರದಿ ಮುಂತಾದವರು ಹಾಜರಿದ್ದರು.ನಾಪೋಕ್ಲು: ನಾಪೋಕ್ಲು ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ಮತ್ತು ವಿಶ್ವ ಪರಿಸರ ದಿನದ ಅಂಗವಾಗಿ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವಳವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಸಂಯೋಜಕಿ ಬಾಳೆಯಡ ದಿವ್ಯಾ ಮಂದಪ್ಪ, ಕಾಳೆಯಂಡ ಸಾಬಾ ತಿಮ್ಮಯ್ಯ, ಅನಿಲ್ ತಮ್ಮಯ್ಯ, ಹರ್ಷಿತ್ ಎ.ಎಸ್., ಮಿಟ್ಟು ಸೋಮಯ್ಯ, ದರ್ಶನ್ ದೇವಯ್ಯ, ಮಿಥುನ್ ಮೇದಪ್ಪ, ಸುಧಿ ಅಪ್ಪಯ್ಯ, ನಿತಿನ್ ನಂಜಪ್ಪ, ಹರ್ಷಿತ್ ಬಾಳೆಯಡ, ಜೀವನ್ ಬೋಪಣ್ಣ, ಯತೀಶ್, ಪವಿನ್, ಪ್ರಭಾವ್ ಇದ್ದರು.ಕೂಡಿಗೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೇರಿ ವಿವಿಧ ಸರ್ಕಾರಿ ಜಾಗಗಳ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟರು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆವರಣ, ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಗುಮ್ಮನಕೊಲ್ಲಿ ಮುಖ್ಯರಸ್ತೆ ಬದಿ, ವಿನಾಯಕ ಬಡಾವಣೆ ಅಂಗನವಾಡಿ ಆವರಣ, ಬಸವೇಶ್ವರ ಬಡಾವಣೆ ಉದ್ಯಾನವನ, ನಾಗೇಗೌಡ ಬಡಾವಣೆ ಉದ್ಯಾನವನ, ಗೊಂದಿಬಸವನಹಳ್ಳಿ ಹಾಲಿನ ಡೈರಿ ಆವರಣ, ಕಸ ವಿಲೇವಾರಿ ಘಟಕದ ಆವರಣ ಮತ್ತು ಮುಳ್ಳುಸೋಗೆ ಅಂಗನವಾಡಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜ್, ಉಪಾಧ್ಯಕ್ಷೆ ಜಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮನ್, ಕಾರ್ಯದರ್ಶಿ ರಾಮೇಗೌಡ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.ಸೋಮವಾರಪೇಟೆ: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳನ್ನು ನೆಟ್ಟರು. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸಮೀಪದ ಚೌಡ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಸದಸ್ಯೆ ಇಂದಿರಾ ಸೇರಿದಂತೆ ಇತರರು ಹಾಜ ರಿದ್ದರು. ಬೇಳೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬೇಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಜಿ. ಪ್ರಶಾಂತ್ ಬೆನಕ, ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್, ಸದಸ್ಯರುಗಳು ಉಪಸ್ಥಿತರಿದ್ದರು.ಶನಿವಾರಸಂತೆ: ಕೊಡ್ಲಿಪೇಟೆಯ ಪೊಲೀಸ್ ಠಾಣೆ ಬಳಿ ಪರಿಸರ ದಿನದ ಪ್ರಯುಕ್ತ ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ವತಿಯಿಂದ ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ, ಉಪಾಧ್ಯಕ್ಷ ಜಿ.ಬಿ. ಪರಮೇಶ್, ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಟಿ.ಆರ್. ಕೇಶವ, ನರೇಶ್‌ಚಂದ್ರ, ಎಂ.ಆರ್. ಮೂರ್ತಿ ಹಾಗೂ ಕೊಡ್ಲಿಪೇಟೆಯ ಪ್ರಮುಖರು ಉಪಸ್ಥಿತರಿದ್ದರು.