ಕೋವಿಡ್ ಪ್ರಮಾಣದ ಆಧಾರದ ಮೇಲೆ ಲಸಿಕೆ ಹಂಚಿಕೆ

ನವದೆಹಲಿ, ಜೂ. ೮: ತಾ. ೨೧ ರಿಂದ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಲಸಿಕೆ ಪೂರೈಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬಳಿಕ ಕೇಂದ್ರ ಸರ್ಕಾರ ಹೊಸ ಲಸಿಕೆ ನೀತಿಯನ್ನು ಘೋಷಿಸಿದೆ. ತಾ. ೨೧ ರಿಂದ ಹೊಸ ಲಸಿಕೆ ನೀತಿ ಜಾರಿಗೆ ಬರಲಿದ್ದು, ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಲಸಿಕೆ ಉತ್ಪಾದನೆ ಮಾಡುವವರಿಂದ ಶೇ. ೭೫ ರಷ್ಟು ಲಸಿಕೆಗಳನ್ನು ಭಾರತ ಸರ್ಕಾರ ಖರೀದಿಸಿ ಸಂಗ್ರಹಿಸಲಿದೆ. ಈ ರೀತಿ ಸಂಗ್ರಹಿಸಲಾದ ಲಸಿಕೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಇವುಗಳನ್ನು ಸರ್ಕಾರಗಳಿಂದ ಜನತೆಗೆ ಉಚಿತವಾಗಿ ನೀಡಲಾಗುತ್ತದೆ. ತಾ. ೭ ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ತಾ. ೨೧ ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ನೀತಿಯಡಿ ಶೇ. ೨೫ ರಷ್ಟು ಲಸಿಕೆ ಖಾಸಗಿ ವಲಯಕ್ಕೆ ಹಾಗೂ ೧೮ ರ ಮೇಲ್ಪಟ್ಟ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವುದಕ್ಕೆ ಲಭ್ಯವಿರಲಿದೆ. ಲಸಿಕೆ ಡೋಸ್‌ಗಳನ್ನು ಕೇಂದ್ರ ಸರ್ಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಜನಸಂಖ್ಯೆ, ರೋಗದ ಪ್ರಮಾಣ, ಲಸಿಕೆ ಅಭಿಯಾನದ ಪ್ರಗತಿಗಳ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಲಸಿಕೆ ಪೋಲಾಗುವುದೂ ಸಹ ಹಂಚಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರದ ಹೊಸ ಲಸಿಕೆ ನೀತಿಯಲ್ಲಿ ತಿಳಿಸಲಾಗಿದೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ೧.೧೯ ಕೋಟಿ ಲಸಿಕೆಗಳು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದ್ದು ಈವರೆಗೂ ೨೪ ಕೋಟಿ ಲಸಿಕೆ ಡೋಸ್‌ಗಳನ್ನು ಕೇಂದ್ರಾಡಳಿತ/ ರಾಜ್ಯಗಳಿಗೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ನೀಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಇಳಿಮುಖ

ಬೆಂಗಳೂರು, ಜೂ. ೮: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಇಂದು ೯,೮೦೮ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೧೭,೨೮೯ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೭೯ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೨,೦೯೯ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೨,೦೨೮ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೧,೮೭,೧೪೬ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೪೪ ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೨೩,೪೪೯ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೪,೬೦,೧೬೫ಕ್ಕೆ ಏರಿಕೆಯಾಗಿದೆ. ೨,೨೫,೦೦೪ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೩೦,೨೨೪ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೯,೮೦೮ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೭.೫೩ಕ್ಕೆ ಇಳಿದಿದೆ. ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ ೨,೦೨೮, ಬೆಳಗಾವಿಯಲ್ಲಿ ೪೪೩, ಬಳ್ಳಾರಿಯಲ್ಲಿ ೨೧೨, ಚಿಕ್ಕಬಳ್ಳಾಪುರದಲ್ಲಿ ೧೭೩, ಚಿಕ್ಕಮಗಳೂರು ೨೮೭, ದಕ್ಷಿಣ ಕನ್ನಡದಲ್ಲಿ ೫೨೫, ದಾವಣಗೆರೆಯಲ್ಲಿ ೩೮೪, ಹಾಸನದಲ್ಲಿ ೬೫೯, ಮೈಸೂರಿನಲ್ಲಿ ೯೭೪, ಶಿವಮೊಗ್ಗದಲ್ಲಿ ೭೦೩, ತುಮಕೂರಿನಲ್ಲಿ ೫೮೯, ಉಡುಪಿಯಲ್ಲಿ ೨೦೫, ಉತ್ತರ ಕನ್ನಡದಲ್ಲಿ ೧೮೭ ಪ್ರಕರಣಗಳು ವರದಿಯಾಗಿವೆ. ಕಳೆದ ೨೪ ತಾಸಿನಲ್ಲಿ ಸೋಂಕಿನಿAದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ ೪೪, ಗ್ರಾಮಾಂತರದಲ್ಲಿ ೮, ಶಿವಮೊಗ್ಗ ೧೦, ಹಾವೇರಿ ೩, ಧಾರವಾಡದಲ್ಲಿ ೯, ಹಾಸನದಲ್ಲಿ ೯, ಮೈಸೂರಿನಲ್ಲಿ ೧೫ ಪ್ರಕರಣಗಳು ಸೇರಿವೆ.

ಬಿಜೆಪಿ ಹಿರಿಯ ಶಾಸಕ ಸಿ.ಎಂ. ಉದಾಸಿ ನಿಧನ

ಬೆಂಗಳೂರು, ಜೂ. ೮: ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ೮೧ ವರ್ಷದ ಸಿ.ಎಂ. ಉದಾಸಿ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಕ್ತ ಸಂಬAಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಚಿಕಿತ್ಸೆ ಪಡೆಯುತ್ತಿದ್ದರು. ಆರು ಬಾರಿ ಶಾಸಕರಾಗಿ ಗೆದ್ದಿದ್ದ ಉದಾಸಿ ೨೦೧೩ ಮತ್ತು ೨೦೧೮ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ತಾ. ೯ ರಂದು (ಇಂದು) ಹಾವೇರಿಯ ಹಾನಗಲ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಉದಾಸಿ ಪುತ್ರ ಶಿವಕುಮಾರ್ ಉದಾಸಿ ತಿಳಿಸಿದ್ದಾರೆ. ಹಿರಿಯ ಶಾಸಕ ಸಿ.ಎಂ. ಉದಾಸಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

೪೪ ಕೋಟಿ ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಕಾಯ್ದಿರಿಸಿದ ಕೇಂದ್ರ

ನವದೆಹಲಿ, ಜೂ. ೮: ಪ್ರಧಾನಿ ನರೇಂದ್ರ ಮೋದಿ ತಾ. ೨೧ ರಿಂದ ಹೊಸ ಲಸಿಕೆ ನೀತಿ ಜಾರಿಯನ್ನು ಪ್ರಕಟಿಸಿ, ಉಚಿತ ಲಸಿಕೆಯನ್ನು ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತಾ. ೮ ರಂದು ೪೪ ಕೋಟಿ ಲಸಿಕೆ ಡೋಸ್‌ಗಳನ್ನು ಕಾಯ್ದಿರಿಸಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್‌ನ ೪೪ ಕೋಟಿ ಲಸಿಕೆಗಳನ್ನು ಉತ್ಪಾದಕ ಸಂಸ್ಥೆಗಳು ಆಗಸ್ಟ್ನಿಂದ ಡಿಸೆಂಬರ್ ತಿಂಗಳ ನಡುವೆ ಸರಬರಾಜು ಮಾಡಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನಿಗಳ ಹೇಳಿಕೆಯ ಬೆನ್ನಲ್ಲೇ, ರಾಷ್ಟಿçÃಯ ಲಸಿಕೆ ನೀತಿಯ ಮಾರ್ಗಸೂಚಿಗಳಲ್ಲಿ ಬದಲಾವಣೆ ಜಾರಿಗೆ ತರಲಾಗಿದ್ದು, ಕೇಂದ್ರ ಸರ್ಕಾರ ಸೆರಮ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯಾದಿAದ ೨೫ ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್ ಲಸಿಕೆಗಳನ್ನು ಕಾಯ್ದಿರಿಸಿದ್ದರೆ ಭಾರತ್ ಬಯೋಟೆಕ್‌ನಿಂದ ೧೯ ಕೋಟಿ ಡೋಸ್‌ಗಳ ಕೋವ್ಯಾಕ್ಸಿನ್ ಲಸಿಕೆಯನ್ನು ಕಾಯ್ದಿರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಹೆಚ್ಚುವರಿಯಾಗಿ, ಎರಡೂ ಲಸಿಕೆಗಳ ಸಂಗ್ರಹಕ್ಕೆ ಶೇ. ೩೦ ರಷ್ಟು ಮುಂಗಡ ಹಣವನ್ನು ನೀಡಲಾಗಿದೆ.

ಬೆಂಗಳೂರು ತಲುಪಿದ ೨೯ನೇ ಆಕ್ಸಿಜನ್ ಎಕ್ಸ್ಪ್ರೆಸ್

ಬೆಂಗಳೂರು, ಜೂ. ೮: ೨೯ನೇ ಆಕ್ಸಿಜನ್ ಎಕ್ಸ್ಪ್ರೆಸ್ ವಿಶೇಷ ರೈಲು ಇಂದು ಬೆಂಗಳೂರಿಗೆ ಆಗಮಿಸಿದೆ. ೧೨೬.೭ ಮೆಟ್ರಿಕ್ ಟನ್ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್ ಹೊತ್ತ ಈ ಎಕ್ಸ್ಪ್ರೆಸ್ ರೈಲು ಬೆಂಗಳೂರಿನ ವೈಟ್ ಫೀಲ್ಡ್ ಕಂಟೈನರ್ ಡಿಪೋ ತಲುಪಿರುವುದಾಗಿ ಪ್ರಸಾರ ಭಾರತಿ ಟ್ವೀಟ್ ಮಾಡಿದೆ. ಒಡಿಶಾದ ರೂರ್ಕೆಲಾದಿಂದ ನಿನ್ನೆ ಹೊರಟ ಈ ರೈಲು ಒಟ್ಟು ೬ ಕ್ರಯೋಜೆನಿಕ್ ಕಂಟೇನರ್‌ಗಳ ಮೂಲಕ ೧೨೬ ಒಟ್ಟು ೧೨೬.೭ ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ತಂದಿದೆ. ಇದುವರೆಗೆ ರಾಜಧಾನಿ ಬೆಂಗಳೂರಿಗೆ ೨೯ ರೈಲುಗಳ ಮೂಲಕ ೩,೩೪೦.೬೯ ಟನ್ ದ್ರವ ವೈದ್ಯಕೀಯ ಆಮ್ಲಜನಕ ತರಲಾಗಿದೆ. ಈ ಮೂಲಕ ಕೋವಿಡ್-೧೯ ರೋಗಿಗಳಿಗೆ ಅತ್ಯವಶ್ಯಕವಾದ ಪ್ರಾಣವಾಯು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.