ಸೈಬರ್ ಕ್ರೆöÊಂಗೆ ದೂರು ವರ್ಗಾವಣೆ

ಮಡಿಕೇರಿ, ಜೂ. ೮: ೨೦೧೭ನೇ ಸಾಲಿನಲ್ಲಿ ಕಂಡುಬAದ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿನ ರೂ. ೬೯ ಲಕ್ಷ ಹಣ ದುರುಪಯೋಗ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ದೂರು ಸೈಬರ್ ಕ್ರೆöÊಂ ಬ್ರಾಂಚ್‌ಗೆ ವರ್ಗಾವಣೆಗೊಂಡಿದೆ.

ಈ ಹಿಂದೆಯೇ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿತ್ತಾದರೂ, ಹಣದ ಮೊತ್ತ ರೂ. ೨೫ ಲಕ್ಷಕ್ಕಿಂತಲೂ ಹೆಚ್ಚಿಗೆ ಇರುವುದರಿಂದ ಸೈಬರ್ ಕ್ರೆöÊಂಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಸಂಘದ ಸಿಬ್ಬಂದಿಗಳಾದ ವಿನೋದ್ ಹಾಗೂ ವಿನು ಅವರುಗಳ ಮೇಲೆ ಸಂಘದ ಈಗಿನ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ದೂರು ಸಲ್ಲಿಸಿದ್ದಾರೆ.