ಶನಿವಾರಸಂತೆ, ಜೂ. ೭: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೇಪುರ ಗ್ರಾಮದ ಹಾಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ೨ ಸೋಲಾರ್ ದೀಪ ಅಳವಡಿಕೆ ಮಾಡಲಾಗಿದೆ.

ಹಾಡಿಗೆ ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು ಹಾಗೂ ಕಾಡಾನೆ ಹಾವಳಿ ಇದ್ದ ಹಿನ್ನೆಲೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿರುವುದನ್ನು ಅರಿತ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪಂಚಾಯಿತಿ ವತಿಯಿಂದ ಹಾಡಿಗೆ ೨ ಸೋಲಾರ್ ದೀಪಗಳನ್ನು ಅಳವಡಿಸಿ ವಿದ್ಯುತ್ ನೀಡಿರುವುದು ಹಾಡಿ ನಿವಾಸಿಗಳಿಗೆ ಸಂತಸ ತಂದಿದೆ.

ಮುಂದಿನ ದಿನಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಇಂಗುಗುAಡಿ, ಶೌಚಾಲಯ, ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಹಾಡಿಗೆ ಭೇಟಿ ನೀಡಿದ ಪಂಚಾಯಿತಿ ಅಧ್ಯಕ್ಷೆ ಬಿ.ಎನ್. ಕೀರ್ತಿ, ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಕಿಶನ್‌ಕುಮಾರ್, ಕಮಲಮ್ಮ ಹಾಗೂ ಇತರ ಸದಸ್ಯರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸಿ. ಸುರೇಶ್ ತಿಳಿಸಿದ್ದಾರೆ.