ಪೊನ್ನಂಪೇಟೆ, ಜೂ. ೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೫ ವರ್ಷ ಮೇಲ್ಪಟ್ಟ ೧೪೭ ಜನರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ೧೦ ಗಂಟೆ ಯಿಂದ ಸಂಜೆ ೪ ಗಂಟೆ ವರೆಗೆ ಸಾರ್ವಜನಿಕರಿಗೆ ಲಸಿಕೆ ನೀಡಲಾಯಿತು. ತಾಲೂಕು ಕೇಂದ್ರವಾಗಿದ್ದರೂ ಪೊನ್ನಂಪೇಟೆಯಲ್ಲಿ ಲಸಿಕಾ ಕೇಂದ್ರ ತೆರೆಯದಿರುವ ಕಾರಣ ತಾ.೪ ರಂದು ‘ಶಕ್ತಿ'ಯಲ್ಲಿ ‘ತಾಲೂಕು ಕೇಂದ್ರದಲ್ಲೇ ದೊರೆಯದ ಲಸಿಕೆ’ ಎಂಬ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೊನ್ನಂಪೇಟೆಯಲ್ಲಿ ಲಸಿಕೆ ಲಭ್ಯತೆಗೆ ಅನುಸಾರವಾಗಿ ವಾರದಲ್ಲಿ ಎರಡು ದಿನ ಲಸಿಕೆ ನೀಡಲಾಗುವುದು ಎಂದು ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.

ಕಿರಿಯ ಆರೋಗ್ಯ ಸಹಾಯಕಿ ಯರಾದ ಉಷಾರಾಣಿ, ರೂಪ, ಲತಾಶ್ರೀ, ಆಶಾಕಾರ್ಯಕರ್ತೆಯರಾದ ಪ್ರಶಾಂತಿ, ಪೊನ್ನಮ್ಮ, ಯಶೋಧ, ಸರಸ್ವತಿ, ಭವಾನಿ, ನವ್ಯ, ಸುಮ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.

ಈ ಸಂದರ್ಭ ಪೊನ್ನಂಪೇಟೆ ಗ್ರಾ.ಪಂ.ಸದಸ್ಯರಾದ ಮೂಕಳೇರ ಸುಮಿತ ಗಣೇಶ್, ಅಣ್ಣೀರ ಹರೀಶ್, ಮೂಕಳೇರ ಮಧು ಕುಮಾರ್, ಬೊಟ್ಟಂಗಡ ದಶಮಿ,ಕರ್ತಮಾಡ ರಸಿಕ, ಅಮ್ಮತ್ತೀರ ಆರತಿ ಸುರೇಶ್, ಜುನೈದ್,ಮಾಜಿ ಗ್ರಾ.ಪಂ.ಸದಸ್ಯ ಅನಿಸ್ ಇನ್ನಿತರರು ಹಾಜರಿದ್ದರು.