ಗೋಣಿಕೊಪ್ಪಲು, ಜೂ. ೭ :ಕೋವಿಡ್ ಸಮಯ ದಲ್ಲಿ ತಮ್ಮ ಜೀವವನ್ನು ಒತ್ತೆಯಿಟ್ಟು ಮನೆ ಮನೆಗೆ ತೆರಳಿ ಕೊರೊನಾ ಪಾಸಿಟಿವ್ ವ್ಯಕ್ತಿಗಳ ಆರೋಗ್ಯ ಕ್ಷೇಮ ವಿಚಾರಿಸಿ ಔಷಧಿ, ಮಾತ್ರೆಗಳನ್ನು ನೀಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪಂಚಾಯತಿ ವತಿಯಿಂದ ಧನ ಸಹಾಯ ನೀಡಲಾಯಿತು. ಕುಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರು ದೂರ ದೂರದ ಮನೆಗಳಿಗೆ ತೆರಳಿ ಕೋವಿಡ್ ಸೋಂಕಿತ ವ್ಯಕ್ತಿಗಳ ಪ್ರತಿನಿತ್ಯದ ಆರೋಗ್ಯಕ್ಷೇಮ ವಿಚಾರಿಸುವ ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇದನ್ನು ಮನಗಂಡ ಪಂಚಾಯಿÄತಿ ಆಡಳಿತ ಮಂಡಳಿ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಧನ ಸಹಾಯ ನೀಡಲು ನಿರ್ಧಾರ ಕೈಗೊಂಡರು. ಪಂಚಾಯಿತಿ ಅಧ್ಯಕ್ಷ ಟಿ.ಎಂ. ಗಣಪತಿ ಇವರುಗಳಿಗೆ ಚೆಕ್ ವಿತರಿಸಿದರು. ಪಂಚಾಯತಿ ಉಪಾಧ್ಯಕ್ಷೆ ದಿವ್ಯ, ಸದಸ್ಯರಾದ ತೀತಿರ ತೀರ್ಥ, ಜನಾರ್ದನ, ಎಂ.ಶಾAತಿ, ಪಿಡಿಒ ಅನಿಲ್, ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರಾದ ಟಿ.ಪಿ. ಮಂಜುನಾಥ್, ಕೆ.ಪಿ. ದಿನೇಶ್, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.