ಸೋಮವಾರಪೇಟೆ, ಜೂ. ೭: ಇಲ್ಲಿನ ಸ್ಪಂದನ ವಾಟ್ಸಾಪ್ ಗ್ರೂಪ್‌ನಿಂದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸ ಲಾಯಿತು. ಕೊರೊನಾ ಲಾಕ್‌ಡೌನ್ ಸಂದರ್ಭ ಹಗಲಿರುಳೆನ್ನದೇ ಕಾನೂನು ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆಯೊಂದಿಗೆ ದುಡಿಯುತ್ತಿರುವ ೧೦ ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಕಿಟ್ ನೀಡಲಾಯಿತು. ಸ್ಪಂದನ ಗ್ರೂಪ್‌ನ ಅಧ್ಯಕ್ಷ ಅಕ್ಬರ್, ಕಾರ್ಯದರ್ಶಿ ರಫೀಕ್, ಗೌರವಾಧ್ಯಕ್ಷ ಅಶ್ರಫ್, ಖಜಾಂಚಿ ಹನೀಫ್, ಪದಾಧಿಕಾರಿಗಳಾದ ಹ್ಯಾರಿಸ್, ಷರೀಫ್, ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಅವರುಗಳು ಉಪಸ್ಥಿತರಿದ್ದರು.