ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆ ಯಾಗಿ ತಡೆಗಟ್ಟಲು ಬೋರ್ಡೊ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ‍್ರನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪಡಣೆ ಕೈಗೊಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.

ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತು, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪಡಣೆ ಮಾಡಿ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸು ತ್ತಿರುವುದು ಸಾಮಾನ್ಯ ಸಂಗತಿ ಯಾಗಿದೆ. ಮೈಲುತುತ್ತು ಅಂದರೆ ಶುದ್ದ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಘನಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲಿಕ್ಕೆ ಬರುವುದಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೊಂದಿಗೆ ಸುಣ್ಣವನ್ನು ಸೇರಿಸಿ, ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯಾವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೊ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜೊತೆಗೆ ಎಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡು ತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಾಗಲೂ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ.

ಬೋರ್ಡೊ ದ್ರಾವಣದ ಅನುಕೂಲಗಳು: v ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು÷ ಹತೋಟಿ ಮಾಡಬಹುದು. v ಈ ದ್ರಾವಣವನ್ನು ಸಿಂಪಡಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿAದ ಸುಮಾರು ೩೦ ರಿಂದ ೪೫ ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು. v ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು. v ಸಿಂಪಡಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುûಷ್ಪರಿಣಾವiಗಳು ತುಂಬಾ ಕಡಿಮೆ.

ಶೇ. ೧ ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು: ಮೈಲುತುತ್ತ ೧ ಕೆ.ಜಿ., ಸುಣ್ಣ ೧ ಕೆ.ಜಿ., ನೀರು ೧೦೦ ಲೀಟರ್, ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್, ೧೦ ಲೀ. ಸಾಮರ್ಥ್ಯದ ೨ ಪ್ಲಾಸ್ಟಿಕ್ ಬಕೆಟ್, ೧೦೦ ಲೀ. ಸಾಮರ್ಥ್ಯದ ೧ ಪ್ಲಾಸ್ಟಿಕ್ ಡ್ರಮ್/ಬ್ಯಾರಲ್

ತಯಾರಿಕೆ ವಿಧಾನ : v ಒಂದು ಕೆ.ಜಿ. ಮೈಲುತುತ್ತವನ್ನು ೧೦ ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. v ಇನ್ನೊಂದು ೧೦ ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿ ೧ ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು. v ಕರಗಿದ ೧೦ ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು ೮೦ ಲೀ. ನೀರಿರುವ ೧ ಪ್ಲಾಸ್ಟಿಕ್ ಡ್ರಮ್‌ಗೆ ಸುರಿಯಬೇಕು. ನಂತರ ೧೦ ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ sಸ್ವಲ್ಪ-ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಕೆಲವು ಸಂದÀರ್ಭದಲ್ಲಿ ಉತ್ತಮ ಗುಣಮಟ್ಟದ ಸುಣ್ಣವನ್ನು ಉಪಯೋಗಿಸಿದರೆ ೧೦೦ ಲೀಟರ್ ದ್ರಾವಣಕ್ಕೆ ೫೦೦ ಗ್ರಾಂ ಸುಣ್ಣ ಸಾಕಾಗುತ್ತದೆ. ಆದರೆ ಸುಣ್ಣದ ಪ್ರಮಾಣವನ್ನು ರಸಸಾರವನ್ನು ಪರೀಕ್ಷೆ ಮಾಡುತ್ತ ಸುರಿಯಬೇಕು. ಅಂದಾಜಿನ ಮೂಲಕ ಸುಣ್ಣವನ್ನು ಸುರಿಯಬಾರದು. ಸರಿಯಾದ ಶೇ. ೧ ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಬೋರ್ಡೊ ದ್ರಾವಣದ ಪರೀಕ್ಷೆ : v ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆAಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುÄಕ್ತವಾಗಿದ್ದು ಅದನ್ನು ಸಿಂಪಡಣೆ ಮಾಡಿದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆAಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪಡಣೆಗೆೆ ಸೂಕ್ತ ಎಂದು ತಿಳಿಯಬಹುದು. v ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‌ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು. v ಠಿಊ ಮೀಟರ್‌ನ್ನು ಉಪಯೋಗಿಸಿ ರಸಸಾರವನ್ನು ಪರೀಕ್ಷೆ ಮಾಡುವುದು. v ಬೋರ್ಡೊ ದ್ರಾವಣದ ರಸಸಾರ ೮ ರಿಂದ ೯ ಇರುವ ಹಾಗೆ ನೋಡಿಕೊಳ್ಳಬೇಕು.

ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳು: v ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. v ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದ ರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ ೨೫೦ ಗ್ರಾಂ ಬೆಲ್ಲವನ್ನು ೧೦೦ ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು. v ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆನಾಶಕಗಳನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡಬಾರದು. v ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು.v ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು.v ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪೆçà ಸುಣ್ಣವನ್ನು ಉಪಯೋಗಿಸಬೇಕು.v ಸಿಂಪಡಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ಬೆಳೆಗಳು ಹಾಗೂ ಪ್ರಮುಖವಾದ ರೋಗಗಳು :v ಕಾಫಿ- ಕೊಳೆ ರೋಗ, ತುಕ್ಕು ರೋಗ v ಅಡಿಕೆ - ಕೊಳೆರೋಗ, ಸುಳಿಕೊಳೆರೋಗ v ತೆಂಗು -ಸುಳಿಕೊಳೆರೋಗ, ಕಾಂಡದಿAದ ರಸಸೋರುವ ರೋಗ v ಕಾಳು ಮೆಣಸು-ಶೀಘ್ರ ಸೊರಗು ರೋಗ,ಚಿಬ್ಬು ರೋಗ (ಕೊತ್ತು ಉದುರುವುದು)v ಶುಂಠಿ - ಗೆಡ್ಡೆ ಕೊಳೆರೋಗ, ಎಲೆಚುಕ್ಕೆರೋಗ.

ಈ ರೀತಿಯಾಗಿ ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ರೈತರು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಉತ್ತಮ ರೀತಿಯಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕ ವಾಗಿ ನಿರ್ವಹಣೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೦೮೨೭೪-೨೪೭೨೭೪ ಸಂಖ್ಯೆಯನ್ನು ಸಂಪರ್ಕಿಸಿ.

-ಡಾ|| ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ

ಕೃಷಿ ವಿಜ್ಞಾನಕೇಂದ್ರ, ಗೋಣಿಕೊಪ್ಪಲು.