ಮಡಿಕೇರಿ: ಬಾವಲಿ ಗ್ರಾಮದ ಬಿದ್ದಂಡ ಕಾಲೋನಿಯಲ್ಲಿ ಡಿಎಸ್‌ಎಸ್ ವತಿಯಿಂದ ಅಲ್ಲಿನ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಂಘಟನೆ ನೆರವಿಗೆ ಬರಲಿದೆ ಎಂದರು. ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕ್ಲಬ್ ಮಹೇಂದ್ರ ಹಾಗೂ ಇಂಡಿಯನ್ ಬ್ಯಾಂಕ್ ಶಾಖೆ ಮತ್ತು ಟಿ.ಎ. ಬಶೀರ್ ದಾನಿಗಳಿಂದ ಸಂಗ್ರಹಿಸಿದ್ದ ಆಹಾರ ಕಿಟ್‌ಗಳನ್ನು ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧೮ ವಾರ್ಡ್ಗಳಲ್ಲಿ ಸದಸ್ಯರ ಒಪ್ಪಿಗೆಯಂತೆ ಒಟ್ಟು ೧೮೦ ಆಯ್ದ ಫಲಾನುಭವಿಗಳನ್ನು ಗುರುತಿಸಿ ತಾಲೂಕು ಕಚೇರಿ ಎದುರು ಶಾಸಕ ಕೆ.ಜಿ. ಬೋಪಯ್ಯ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭ ತಹಶೀಲ್ದಾರ್ ಯೋಗಾನಂದ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸ್ಟೇಟ್ ಬ್ಯಾಂಕ್ ಇಂಡಿಯಾ ವ್ಯವಸ್ಥಾಪಕ ಮಹಮದ್ ಸುಹಿನ್, ಅರ್ಚನಾ, ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕಿ ಶೀಲಾ ಬಂಡಾರ್‌ಕರ್, ಪಿ.ಎಂ. ಶರೀಫ್ ಹಾಗೂ ಕ್ಲಬ್ ಮಹೇಂದ್ರದ ಪ್ರಮುಖರು, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಎಲ್ಲಾ ವಾರ್ಡ್ಗಳ ಸದಸ್ಯರುಗಳು, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.ಸೋಮವಾರಪೇಟೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ೭ ವರ್ಷಗಳನ್ನು ಪೂರೈಸಿದ ಹಿನ್ನೆಲೆ ಇಲ್ಲಿನ ಜನೌಷಧ್ ಕೇಂದ್ರದ ವತಿಯಿಂದ ಕೊರೊನಾ ವಾರಿಯರ್ಸ್ಗಳಾದ ಪೊಲೀಸ್ ಸಿಬ್ಬಂದಿಗಳಿಗೆ ವಿಟಮಿನ್ ಸಿ ಮಾತ್ರೆ, ಎನ್-೯೫ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಭರತ್ ಕುಮಾರ್, ಜನೌಷಧಿ ಕೇಂದ್ರದ ಮಾಲೀಕ ಮಂಜುನಾಥ್, ಪ್ರಮುಖರಾದ ಮಧು ಕಿಬ್ಬೆಟ್ಟ, ಮೃತ್ಯುಂಜಯ, ಪ.ಪಂ.ಸದಸ್ಯರಾದ ಮಹೇಶ್, ಶುಭಾಕರ್, ಶರತ್, ಸೋಮೇಶ್, ಎಸ್.ಮಹೇಶ್, ವೈಐಎಫ್‌ಎ ಸಂಘಟನೆಯ ಶ್ರೀನಿಧಿ, ಅಭಿಷೇಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.*ಗೋಣಿಕೊಪ್ಪ: ಸ್ವಯಂ ಪ್ರೇರಣ ಬಳಗ, ಗೋಣಿಕೊಪ್ಪ ವತಿಯಿಂದ ಪತ್ರಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಿಹಿ ತಿನಿಸು ಹಾಗೂ ವೈದ್ಯಕೀಯ ಕಿಟ್ ವಿತರಿಸಿದರು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಪತ್ರಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದಿಕ್ ಗುಳಿಗಳನ್ನು ನೀಡಲಾಯಿತು.

ಈ ಸಂದರ್ಭ ಉಪಾಧ್ಯಕ್ಷೆ ಚಿರಿಯಪಂಡ ಲತಾ ಪೂಣಚ್ಚ, ಕಾರ್ಯದರ್ಶಿ ಮೋರ್ಕಂಡ ಮೀನಾ ಗಣಪತಿ, ಸದಸ್ಯೆ ನಿಖಿಲ್ ಮಂದಣ್ಣ ಹಾಜರಿದ್ದರು.ಮಡಿಕೇರಿ: ಕುಶಾಲನಗರ - ಗುಮ್ಮನಕೊಲ್ಲಿಯ ನವೀನ್ ಅವರ ಪತ್ನಿ ಕೊರೊನಾದಿಂದ ಮೃತರಾಗಿದ್ದು ಇವರ ಕುಟುಂಬಕ್ಕೆ ಕುಶಾಲನಗರದ ಬಲಿಜ ಸಂಘದಿAದ ಧನ ಸಹಾಯ ವಿತರಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಡಿ.ಬಿ. ದಯಾನಂದ, ಕಾರ್ಯದರ್ಶಿ ಟಿ.ಎನ್. ಜಯರಾಂ, ಖಜಾಂಚಿ ಟಿ.ಬಿ. ಸತೀಶ್, ಸದಸ್ಯರಾದ ಜಗದೀಶ್ ಹಾಗೂ ಬಾಲಕೃಷ್ಣ ಗುಡ್ಡೆಹೊಸೂರು ಇದ್ದರು.ಮಡಿಕೇರಿ: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಮೂಲಕ ಐಸೋಲೇಷನ್ ಕಿಟ್ ವಿತರಿಸಿದ್ದಾರೆ. ಐಸೋಲೇಷನ್‌ನಲ್ಲಿರುವ ಕುಟುಂಬಗಳಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಹಾಗೂ ಪೊನ್ನಂಪೇಟ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ಅವರ ನೇತೃತ್ವದಲ್ಲಿ ಐಸೋಲೇಷನ್ ಕಿಟ್, ಅಗತ್ಯ ಔಷಧಿಗಳು, ಸ್ಯಾನಿಟೈಸರ್, ಮಾಸ್ಕ್ಗಳನ್ನು ವಿತರಿಸಲಾಯಿತು. ಕಿಟ್‌ನ ಅವಶ್ಯಕತೆ ಇರುವವರು ೯೦೦೮೧೪೨೬೯೩, ೮೦೮೮೯೭೮೮೦೮ ನ್ನು ಸಂಪರ್ಕಿಸಬಹುದಾಗಿದೆ.ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕೋವಿಡ್ ಸೋಂಕಿತರಿಗೆ ಆಹಾರ ಕಿಟ್ ವಿತರಿಸಲಾಯಿತು.

ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಟೌನ್ ವಾರ್ಡ್ನಲ್ಲಿ ಎರಡು ಕುಟುಂಬ, ಕಾಫಿ ಬೋರ್ಡ್ ವಾರ್ಡ್ನಲ್ಲಿ ಒಂದು ಮತ್ತು ಕಂಡಕೆರೆ ವಾರ್ಡಿನಲ್ಲಿ ನಾಲ್ಕು ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಗ್ರಿ, ಸ್ಯಾನಿಟೈಸರ್, ಮನೆಯ ಎಲ್ಲಾ ಕುಟುಂಬ ಸದಸ್ಯರಿಗೆ ಮಾಸ್ಕ್, ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ, ಸದಸ್ಯರಾದ ತೀರ್ಥಕುಮಾರ್, ಮುಳ್ಳಂಡ ಅಂಜನ್ ಮುತ್ತಪ್ಪ, ವಿಮಲಾಕ್ಷಿ, ಕಂಠಿ ಕಾರ್ಯಪ್ಪ, ಪೆರಿಯನ ಉದಯ, ಸಿಂಧೂ, ಪಿ.ಡಿ.ಓ. ನಂದೀಶ್, ಪಂಚಾಯಿತಿ ಸಹ ಕಾರ್ಯದರ್ಶಿ ಚಂದ್ರ, ನೌಕರ ಕಂದಸ್ವಾಮಿ, ಆಶಾ ಕಾರ್ಯಕರ್ತೆ ಸುಮಿತ್ರಾ ಭಾಗವಹಿಸಿದ್ದರು.ಮುಳ್ಳೂರು: ಉದ್ಯಮಿ, ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರು ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಭಾಗದಲ್ಲಿ ಕಡುಬಡವರು ಮತ್ತು ಕೂಲಿ ಕಾರ್ಮಿಕರ ಕುಟುಂಬಗಳನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ೨೨ಕ್ಕೂ ಹೆಚ್ಚು ಆಹಾರ ಕಿಟ್‌ಗಳನ್ನು ವಿತರಿಸಿದರು.

ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿAದ ಮೃತಪಟ್ಟ ಕುಟುಂಬದವರ ಮನೆಗೂ ತೆರಳಿ ಆಹಾರ ಕಿಟ್ ವಿತರಿಸಿದರು.ಮುಳ್ಳೂರು: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊಡ್ಲಿಪೇಟೆ ಭಾಗದಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಮತ್ತು ಕೋವಿಡ್ ಸೋಂಕಿನಿAದ ಮೃತಪಟ್ಟ ಕುಟುಂಬಗಳಿಗೆ ದಿನಸಿ ಮತ್ತು ಅಗತ್ಯ ಪದಾರ್ಥಗಳನ್ನು ಒಳಗೊಂಡ ಆಹಾರ ಕಿಟ್‌ಗಳನ್ನು ಬ್ಯಾಂಕಿನ ಆವರಣದಲ್ಲಿ ವಿತರಿಸಲಾಯಿತು.

ಕಿಟ್ ವಿತರಣೆ ಸಂದರ್ಭ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ, ಉಪಾಧ್ಯಕ್ಷ ಕೆ.ಬಿ. ಸುಬ್ರಮಣ್ಯ ಆಚಾರ್, ನಿರ್ದೇಶಕರಾದ ಕೆ.ಸಿ. ಪ್ರಸನ್ನ, ಬಿ.ಕೆ. ಯತೀಶ್, ಕೆ.ಎಂ.ವಹಾಬ್, ಭಾನುಮತಿ, ರಂಜಿತಾ, ಬಿ.ಪಿ. ಅಶೋಕ್, ಬಿ.ಇ.ರಾಜು, ಕೆ.ವಿ. ಮಲ್ಲೇಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್, ನಿರ್ಗಮಿತ ಸಿ.ಇ.ಓ. ನಾಗರಾಜ್ ಹಾಜರಿದ್ದರು.ಸುಂಟಿಕೊಪ್ಪ: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ೭೫ ಆಹಾರ ಧಾನ್ಯಗಳ ಕಿಟ್‌ಅನ್ನು ಮೈಸೂರಿನ ಸೈಲೆಂಟ್ ಶೋರ್ ರೆಸಾರ್ಟ್ ಮಾಲೀಕ ಹಾಗೂ ಗ್ರಾಮದ ಕಾಫಿ ಬೆಳೆಗಾರ ಜಗನ್ನಾಥ ಶೆಣೈ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ನಾಗಪ್ಪ ಅವರಿಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಆರ್. ಮೋಹನ್, ಜಗನ್ನಾಥ ಶೆಣೈ ಅವರ ಸಂಬAಧಿಗಳಾದ ಹರೀಶ್ ಪೈ, ರವಿಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಶಶಿಕಾಂತ್ ರೈ, ಮಾಜಿ ತಾ.ಪಂ. ಸದಸ್ಯ ಕುಂಜಿಲನ ಮಂಜುನಾಥ್, ಜಗದೀಶ್ ರೈ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಮತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.ಸೋಮವಾರಪೇಟೆ: ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಪಟ್ಟಣದ ಜನತಾ ಕಾಲೋನಿ, ಮಹದೇಶ್ವರ ಬಡಾವಣೆ, ರೇಂಜರ್ ಬ್ಲಾಕ್‌ನ ಬಡ ಕುಟುಂಬಗಳಿಗೆ, ವಯೋವೃದ್ಧರು, ರೋಗಿಗಳಿಗೆ ಭುವನಂ ಫೌಂಡೇಷನ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಪಟ್ಟಣದ ಸಾಮಾಜಿಕ ಕಾರ್ಯಕರ್ತೆ ಎಂ.ಎ. ರುಬೀನಾ ಅವರ ಕೋರಿಕೆ ಮೇರೆ ಈ ವ್ಯಾಪ್ತಿಯ ಬಡ ಕುಟುಂಬಗಳಿಗೆ ಫೌಂಡೇಷನ್‌ನ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ರಾಘವೇಂದ್ರ, ಗೌತಮ್ ಅವರುಗಳು ಪಟ್ಟಣಕ್ಕೆ ಆಗಮಿಸಿ ಬಡ ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಿದರು.

ಕೊರೊನಾ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಸಂಸ್ಥೆಯ ಮೂಲಕ ನೆರವು ಒದಗಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗದಂತೆ ಪ್ರತಿಯೋರ್ವರೂ ಜಾಗೃತಿ ವಹಿಸಬೇಕು. ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಭುವನ್ ಹಾಗೂ ಹರ್ಷಿಕ ಕಿವಿಮಾತು ಹೇಳಿದರು. ಈ ಸಂದರ್ಭ ಎಂ.ಎ. ರುಬೀನಾ ಉಪಸ್ಥಿತರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾ.ಪಂ. ವತಿಯಿಂದ ಗ್ರಾ.ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ. ಸ್ವಚ್ಛತಾ ಸಿಬ್ಬಂದಿಗಳಿಗೆ ಅವಶ್ಯಕ ದಿನಸಿ ವಸ್ತುಗಳ ಕಿಟ್‌ಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಭಾಂಗಣದಲ್ಲಿ ವಿತರಣೆ ಮಾಡಿದರು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತುಂಗಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸದಸ್ಯರು ಹಾಜರಿದ್ದರು.*ವೀರಾಜಪೇಟೆ: ಟ್ರಾಕ್ ಕೋವಿಡ್-೧೯ ಸಂಸ್ಥೆಯ ವತಿಯಿಂದ ನಗರದ ಕೆಲವು ಬಡಾವಣೆಗಳ ಸುಮಾರು ೧೨೫ ಕುಟುಂಬಗಳ ಸದಸ್ಯರಿಗೆ ೨೫ ಸಾವಿರ ರೂಪಾಯಿ ವೆಚ್ಚದಲ್ಲಿ ತರಕಾರಿ ಕಿಟ್ ವಿತರಣೆ ಮಾಡಿದರು.

ನಗರದ ಹರಿಕೇರಿ, ಸುಣ್ಣದ ಬೀದಿ, ಪೌರಕಾರ್ಮಿಕರ ಲೈನ್ ಮನೆಗಳಿಗೆ ಸಂಸ್ಥೆಯ ಸದಸ್ಯರು ಕಿಟ್ ವಿತರಿಸಿದರು. ಸಂಸ್ಥೆಯ ಮುಖಂಡ ಮೊಹಮ್ಮದ್ ರಾಫಿ, ಎಸ್.ಹೆಚ್. ಮತೀನ್, ಸಲೀಂ ಜಿಮ್ಮಿ ಹಾಜರಿದ್ದರು.ಕಡಂಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು ಪೊದವಾಡ ಗ್ರಾಮದಲ್ಲಿ ಕೋವಿಡ್ ಸೋಂಕಿತರಿಗೆ ಆಹಾರ ಕಿಟ್ ವಿತರಿಸಲಾಯಿತು. ಸುಮಾರು ೧೦ ಕುಟುಂಬಗಳನ್ನು ಗುರುತಿಸಿ ಅಗತ್ಯ ದಿನಸಿ ಸಾಮಗ್ರಿಗಳನ್ನು ಪಂಚಾಯಿತಿ ಸದಸ್ಯರಾದ ಕೊಡೀರ ವಿನೋದ್ ನಾಣಯ್ಯ, ಸುಬೀರ್ ಸಿ.ಈ., ಜಕ್ರಿಯ ನೀಡಿದರು. ಈ ಸಂದರ್ಭ ಆಶಾ ಕಾರ್ಯಕರ್ತೆ ಸುಮಿತ್ರ ಉಪಸ್ಥಿತರಿದ್ದರು.*ವೀರಾಜಪೇಟೆ: ವೀರಾಜಪೇಟೆ ಸುಂಕದ ಕಟ್ಟೆಯ ಸಮುದಾಯ ಭವನದಲ್ಲಿ ಆರ್ಥಿಕ ಸ್ಪಂದನ ಸಂಘದಿAದ ಸಂಘದ ಸದಸ್ಯರು ಮತ್ತು ಸಂಕಷ್ಟದಲ್ಲಿದ್ದವರಿಗೆ ಒಟ್ಟು ೪೦ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್, ಪ.ಪಂ. ಮುಖ್ಯಾಧಿಕಾರಿ ಶ್ರೀಧರ್, ನಗರ ಠಾಣಾಧಿಕಾರಿ ಜಗದೀಶ್ ಧೂಳ್‌ಶೆಟ್ಟಿ, ಪ.ಪಂ. ನಾಮ ನಿರ್ದೇಶನ ಸದಸ್ಯ ಕೂತಂಡ ಸಚಿನ್ ಕಿಟ್ ವಿತರಣೆ ಮಾಡಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಅರುಣ್, ಮಹಿಳಾ ಸಂಘದ ಅಧ್ಯಕ್ಷೆ ಲಾಲಿ, ಕಾರ್ಯದರ್ಶಿ ಸುಜಾತ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಕ.ರ.ವೇ. ಆಟೋ ಚಾಲಕರ ಸಂಘದ ಅಧ್ಯಕ್ಷ ಸತೀಶ್ ಹಾಜರಿದ್ದರು.ಮಡಿಕೇರಿ: ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್(ಗ್ರಾಮೀಣ ಕೂಟ)ನ ಕುಶಾಲನಗರ ಶಾಖೆ ವತಿಯಿಂದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು. ಕೋವಿಡ್-೧೯ ನಿಯಂತ್ರಿಸಲು ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರುಗಳ ಸುರಕ್ಷತೆಗಾಗಿ ಸ್ಯಾನಿಟೈಸರ್, ಮಾಸ್ಕ್ಗಳನ್ನು ವಿತರಿಸಲಾಯಿತು. ಜಿಲ್ಲೆಯಲ್ಲಿನ ಎಲ್ಲಾ ಪಂಚಾಯಿತಿಗಳಿಗೂ ವಿತರಿಸಲಾಗುವುದಾಗಿ ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ಇಂದು ‘ಶಕ್ತಿ’ ಕಚೇರಿಗೆ ಭೇಟಿ ನೀಡಿದ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ನಿಂಗೇಗೌಡ, ವಲಯ ವ್ಯವಸ್ಥಾಪಕರಾದ ಸಂದೇಶ್ ಕೆ.ಪಿ., ವಿರೂಪಾಕ್ಷ ಅವರುಗಳು ಜೋನಲ್ ವ್ಯವಸ್ಥಾಪಕ ಲೋಕೇಶ್ ಎಂ.ಕೆ. ಮಾರ್ಗದರ್ಶನದಲ್ಲಿ ಕಚೇರಿಯ ಸಿಬ್ಬಂದಿಗೆ ಉಪಯೋಗವಾಗುವ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.