ಸಿದ್ದಾಪುರ, ಜೂ. ೪: ಕೊರೊನಾ ವೈರಸ್ ಪತ್ತೆಯಾದ ಈರ್ವರು ಬಾಣಂತಿಯರನ್ನು ಕೂಡಿಗೆಯ ಕೊರೊನಾ ಕೇರ್ ಸೆಂಟರಿಗೆ ತಮ್ಮ ಕಾರಿನಲ್ಲಿ ಉಚಿತವಾಗಿ ಕರೆದುಕೊಂಡು ಅವರಿಗೆ ಸಹಾಯ ಮಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಲತೀಫ್ ಮಾನವೀಯತೆ ಮೆರೆದಿದ್ದಾರೆ.

ನೆಲ್ಲಿಹುದಿಕೇರಿ ಗ್ರಾಮದ ನಾಲ್ಕನೇ ವಾರ್ಡಿನಲ್ಲಿ ವಾಸವಿರುವ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಬಾಣಂತಿಯರು ಸೇರಿದಂತೆ ಐದು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಬಗ್ಗೆ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್, ಅಬ್ದುಲ್ ಲತೀಫ್ ಸುಂಟಿಕೊಪ್ಪ ಇವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಪಂದಿಸಿದ ಲತೀಫ್ ತಮ್ಮ ಕಾರಿನಲ್ಲಿ ನೆಲ್ಲಿಹುದಿಕೇರಿಗೆ ಆಗಮಿಸಿದರು. ಪ್ರಕರಣ ಪತ್ತೆಯಾದವರನ್ನು ಕೂಡಿಗೆಯ ಕೊರೊನಾ ಕೇರ್ ಸೆಂಟರ್‌ಗೆ ಕರೆದೊಯ್ದು ಮಾನವೀಯತೆ ಮೆರೆದರು. ಈ ಕಾರ್ಯದ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

- ವಾಸು