ಮಡಿಕೇರಿ, ಜೂ. ೪: ಬಾಲಿವುಡ್ ಸೇರಿದಂತೆ ದಕ್ಷಿಣಭಾರತದ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಕೊಡಗಿನವರಾದ ಸಿನಿಮಾ ತಾರೆ ರಶ್ಮಿಕಾ ಮಂದಣ್ಣ ಬೆಂಗಳೂರ್ ಟೈಮ್ಸ್ ಪ್ರಸ್ತುತಪಡಿಸಿರುವ ಅತ್ಯಂತ ಅಪೇಕ್ಷಣಿಯ ಮಹಿಳೆಯರು ೨೦೨೦ರ ಟಾಪ್ ೩೦ರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಭಾಷೆಯ ಚೌಕಟ್ಟನ್ನು ಮೀರಿ ಅಲ್ಪಾವಧಿಯಲ್ಲೇ ಬಹುಬೇಡಿಕೆಯ ನಟಿಯಾಗಿ ಬೆಳೆದಿರುವ ರಶ್ಮಿಕಾ ಮಂದಣ್ಣ ಕನ್ನಡದೊಂದಿಗೆ, ತಮಿಳು, ತೆಲುಗು ಸೇರಿದಂತೆ ಇದೀಗ ಬಾಲ್ವುಡ್ಗೂ ಮುನ್ನುಗ್ಗಿದ್ದಾರೆ. ಹಿಂದಿ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಅವರೊಂದಿಗೂ ‘ಗುಡ್ಬೈ’ ಸಿನಿಮಾದಲ್ಲಿ ಅವಕಾಶ ಪಡೆದಿರುವ ರಶ್ಮಿಕಾ ಹಲವು ಭಾಷೆಗಳಲ್ಲಿನ ಸಕ್ರಿಯ ನಟಿಯಾಗಿದ್ದಾರೆ. ೨೦೧೪ರ ಟೈಮ್ಸ್ ಫ್ರೆಶ್ ಬೇಸ್ ನ್ಯಾಷನಲ್ ವಿನ್ನರ್ ಕೂಡ ಈಕೆ ಆಗಿದ್ದರು.
ಇದೀಗ ಎರಡನೆಯ ಬಾರಿಗೆ ಅತ್ಯಂತ ಅಪೇಕ್ಷಣೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿರುವ ರಶ್ಮಿಕಾ ‘ಕಿರಿಕ್ ಪಾರ್ಟಿ’ ಕನ್ನಡ ಸಿನಿಮಾದಿಂದ ಆರಂಭಗೊAಡು ಹಲವಷ್ಟು ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನಲ್ಲೂ ಈಕೆ ‘ಬ್ಯುಸಿ’ಯಾಗಿದ್ದಾಳೆ. ಪ್ರಸ್ತುತ ಈಕೆ ಹೈದರಾಬಾದ್ನಲ್ಲಿದ್ದರೂ ಈ ಸಮೀಕ್ಷೆಯಲ್ಲಿ ಕನ್ನಡಿಗರಿಂದ ದೊರೆತಿರುವ ಈ ಪ್ರೋತ್ಸಾಹ ಸಂತಸ ತಂದಿದೆ ಎಂದು ರಶ್ಮಿಕಾ ತಾಯಿ ಸುಮನ್ ಪ್ರತಿಕ್ರಿಯಿಸಿದ್ದಾರೆ. ಕೊಡಗಿನವಾದ ಮತ್ತೋರ್ವ ನಟಿ ಹಾಗೂ ಮಾಡಲಿಂಗ್ ತಾರೆ ಶುಭ್ರಾ ಅಯ್ಯಪ್ಪ ಟಾಪ್ ೩೦ರ ಪಟ್ಟಿಯಲ್ಲಿ ೨೮ನೇ ಸ್ಥಾನ ಪಡೆದಿದ್ದಾರೆ. ಕನ್ನಡದ ಹೆಸರಾಂತ ನಟ ಕೆಜಿಎಫ್ ಚಿತ್ರದ ಸ್ಟಾರ್ ನಾಯಕ ಯಶ್ ಅತ್ಯಂತ ಅಪೇಕ್ಷಣೀಯ ಪುರುಷ - ೨೦೨೦ರ ಟಾಪ್ ೧ ಆಗಿ ಹೊರಹೊಮ್ಮಿದ್ದಾರೆ.