
ಸೋಮವಾರಪೇಟೆ, ಜೂ. ೪: ಕನಸು ಕಂಗಳ ಯುವಕ ಕಾಲೇಜು ದಿನಗಳಲ್ಲಿ ಆಗಸದೆತ್ತರಕ್ಕೆ ಹಾರುತ್ತಿದ್ದ ವಿಮಾನಗಳನ್ನು ನೋಡಿ, ತಾನೂ ಅಂತೆಯೇ ವಿಮಾನದಲ್ಲಿ ಹಾರಬೇಕೆಂಬ ಹಂಬಲ ಹೊಂದಿದ್ದ ಭವಿಷ್ಯದ ಪೈಲಟ್ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದ್ದು,ಕೊಡಗಿನಲ್ಲಿರುವ ಆತನ ಪೋಷಕರಲ್ಲಿ ದುಃಖ ಮಡುಗಟ್ಟಿದೆ.ಸೋಮವಾರಪೇಟೆಯ ಜಂಬೂರು ಗ್ರಾಮ ನಿವಾಸಿ, ಸುಂಟಿಕೊಪ್ಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಪಯ್ಯ ಹಾಗೂ ಮಾದಾಪುರ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೊನ್ನಮ್ಮ ಅವರು ಪುತ್ರ ವಿಯೋಗ ಶೋಕದಲ್ಲಿ ಮುಳುಗಿದ್ದಾರೆ.ಬೋಪಯ್ಯ ಹಾಗೂ ಪೊನ್ನಮ್ಮ ಅವರ ಪುತ್ರ ಶಿಬಿ ಬೋಪಯ್ಯ (೨೩) ಅಹಮದಾಬಾದ್ನ ಏರೋನಾಟಿಕ್ ಸೆಂಟರ್ನಲ್ಲಿ ತರಬೇತಿ ಪಡೆಯುತ್ತಿದ್ದ ಭವಿಷ್ಯದ ಪೈಲಟ್ ಆಗಿದ್ದು,ನಿನ್ನೆ ದಿನ ಸೆಂಟರ್ನ ಸಮೀಪ ವಿರುವ ಕಾಡಿನಲ್ಲಿ ನೇಣಿಗೆಶರಣಾದ
(ಮೊದಲ ಪುಟದಿಂದ) ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೊನ್ನೆಯವರೆಗೂ ಪ್ರತಿ ರಾತ್ರಿ ಊಟದ ನಂತರ ಮನೆಯವರಿಗೆ ವೀಡಿಯೋ ಕಾಲ್ ಮಾಡಿ ಯೋಗ ಕ್ಷೇಮ ವಿಚಾರಿಸುತ್ತಿದ್ದ ಶಿಬಿ ಬೋಪಯ್ಯ ಅವರ ಸಾವಿನ ಸುದ್ದಿ ಇಂದು ಮನೆಯವರಿಗೆ ಬರ ಸಿಡಿಲಿನಂತೆ ಎರಗಿದ್ದು, ಕುಟುಂಬವರ್ಗ ಶೋಕ ಸಾಗರದಲ್ಲಿ ಮುಳುಗಿದೆ. ಗುಜರಾತ್ನ ಏರೋನಾಟಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಅಂತಿಮ ವರ್ಷದ ತರಬೇತಿಯಲ್ಲಿದ್ದ ಶಿಬಿ, ಇನ್ನೇನು ಎರಡು ತಿಂಗಳಿನಲ್ಲಿ ತರಬೇತಿ ಮುಗಿಸಿ ಪೈಲಟ್ ಆಗಿ ಹೊರಹೊಮ್ಮುತ್ತಿದ್ದರು. ಆಗಸ್ಟ್ನಲ್ಲಿ ಪೈಲಟ್ ಆಗಬೇಕಿದ್ದ ಇವರು ಇದೀಗ ಕಾಡಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆಯ ಸುತ್ತಲೂ ಅನುಮಾನದ ಹುತ್ತ ಸೃಷ್ಟಿಯಾಗುವಂತೆ ಮಾಡಿದೆ. ಮೊನ್ನೆಯವರೆಗೂ ಪೋಷಕರೊಂದಿಗೆ ಮಾತುಕತೆ ನಡೆಸುತ್ತಿದ್ದ ಶಿಬಿಯಿಂದ ನಿನ್ನೆಯಿಂದ ಯಾವುದೇ ಕರೆಗಳು ಬರಲಿಲ್ಲ. ಇಂದು ಬೆಳಿಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ನೆಲೆಸಿರುವ ಸಹೋದರಿಯ ಮೊಬೈಲ್ಗೆ ಕರೆ ಬಂದಿದ್ದು, ಅಹಮದಾಬಾದ್ನ ಪೊಲೀಸರು ಮಾತನಾಡಿ, ತಮ್ಮ ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಸಹೋದರಿ ಸೀಮಾ ಬೋಪಯ್ಯ ಹಾಗೂ ಪತಿ ಪೋಷಕರಿಗೆ ವಿಷಯ ಮುಟ್ಟಿಸಿ, ಅಹಮದಾಬಾದ್ಗೆ ತೆರಳಿದ್ದಾರೆ.
ಇತ್ತ ಪುತ್ರನ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದ ಹಿನ್ನೆಲೆ ಪೋಷಕರು ದಿಗ್ಭಾçಂತರಾಗಿದ್ದು, ಮಗನ ಆತ್ಮಹತ್ಯೆಯ ಸುದ್ದಿ ಸುಳ್ಳಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ೫ನೇ ತರಗತಿವರೆಗೆ ಸುಂಟಿಕೊಪ್ಪದ ಸೆಂಟ್ ಮೇರೀಸ್ನಲ್ಲಿ ವ್ಯಾಸಂಗ ಮಾಡಿರುವ ಶಿಬಿ ನಂತರ ಮಡಿಕೇರಿಯ ಸೆಂಟ್ ಮೈಕಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಸುಳ್ಯದ ಚೊಕ್ಕಾಡಿ ಸತ್ಯಸಾಯಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ವ್ಯಾಸಂಗ ಮಾಡಿದ್ದರು. ನಂತರ ಅಹಮದಾಬಾದ್ಗೆ ತೆರಳಿ ಎರೋನಾಟಿಕ್ಸ್ ಇನ್ಸ್ಟಿಟ್ಯೂಟ್ನಲ್ಲಿ ಪೈಲಟ್ ಆಗಲು ತಯಾರಿ ನಡೆಸಿದ್ದರು. ಎಲ್ಲವೂ ಅಂದುಕೊAಡAತೆಯೇ ನಡೆದಿದ್ದರೆ, ಇದೇ ಜೂನ್ ತಿಂಗಳಿನಲ್ಲಿ ತರಬೇತಿ ಮುಗಿದು, ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ ಕೋವಿಡ್ನಿಂದಾಗಿ ರಜೆಗಳು ಇದ್ದುದರಿಂದ ತರಬೇತಿಯ ಅವಧಿ ಆಗಸ್ಟ್ವರೆಗೆ ಮುಂದೂಡಿಕೆಯಾಗಿತ್ತು. ಅಷ್ಟರಲ್ಲಾಗಲೇ ಭವಿಷ್ಯದ ಪೈಲಟ್ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಮಾಹಿತಿ ಲಭಿಸಿದ್ದು, ಘಟನೆಯ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. - ವಿಜಯ್