ಮಡಿಕೇರಿ, ಜೂ. ೪: ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆ ಆರಂಭಗೊAಡ ಚಿತ್ರಣ ಎದುರಾಗಿದೆ. ಇಂದು ಬೆಳಿಗ್ಗೆಯಿಂದ ಬಹುತೇಕ ಜಿಲ್ಲೆಯಾದ್ಯಂತ ತುಂತುರು ಮಳೆ ಸುರಿಯಲಾರಂಭಿಸಿದ್ದು, ನಿಧಾನಗತಿಯಲ್ಲಿ ಮಳೆಗಾಲದ ಸನ್ನಿವೇಶ ಎದುರುಗೊಂಡಿದೆ. ಕೇರಳದ ಕರಾವಳಿ ಪ್ರದೇಶದಲ್ಲಿ ನಿನ್ನೆಯಿಂದ ಮುಂಗಾರು ಆರಂಭಗೊAಡಿದೆ. ಇದಾದ ೨೪ ಗಂಟೆಗಳಲ್ಲಿ ಕೊಡಗಿನ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದೆ.

ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆ ಆರಂಭ ಗೊಂಡಿದ್ದರೆ, ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇತರೆಡೆಗಳಲ್ಲಿ ಇಂದು ಬೆಳಿಗ್ಗೆಯಿಂದ ತುಂತುರು ಮಳೆ ಸುರಿಯಲಾರಂಭಿಸಿದ್ದು, ಅಪರಾಹ್ನದ ವೇಳೆಗೆ ಮಳೆಗಾಲವನ್ನು ನೆನಪಿಸುವ ರೀತಿಯಲ್ಲಿ ಬದಲಾವಣೆ ಕಂಡು ಬಂದಿತು. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಡಿಕೆಯಂತೆ ಸಹಜ ರೀತಿಯ ಮುಂಗಾರು ಕಂಡು ಬಂದಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರವಾದ ಇಂದು ಲಾಕ್‌ಡೌನ್ ಬೆ. ೧೦ರವರೆಗೆ ಸಡಿಲಿಕೆಯಿದ್ದರಿಂದ ತುಂತುರು ಮಳೆಯ ನಡುವೆ ಬಿರುಸಿ ನಿಂದ ಜನರು ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ತರಾತುರಿಯಲ್ಲಿ ಮನೆ ಸೇರಿಕೊಳ್ಳುತ್ತಿದ್ದ ದೃಶ್ಯ ಕಂಡುಬAದಿತು.

ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಾಹ್ನ ನಂತರ ಧಾರಾಕಾರ ಮಳೆ ಸುರಿದಿದೆ. ಈಗಾಗಲೇ ನದಿ

(ಮೊದಲ ಪುಟದಿಂದ) ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಕಂದಾಯ ಇಲಾಖೆ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ ಅಲ್ಲದೆ ಜಿಲ್ಲಾಡಳಿತದ ವತಿಯಿಂದ ಮುಂಜಾಗ್ರತ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಗೋಣಿಕೊಪ್ಪಲು : ವೀರಾಜಪೇಟೆ ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಮುಂಗಾರು ಆರಂಭಗೊAಡಿದೆ. ಮುಂಜಾನೆಯಿAದಲೇ ಮೋಡ ಮುಸುಕಿದ ವಾತಾವರಣವಿತ್ತು. ಆಗಾಗ್ಗೆ ತುಂತುರು ಮಳೆ ಕಾಣಿಸಿಕೊಂಡಿತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಮಳೆ ಜೋರಾಗಿ ಸುರಿದಿದ್ದು, ಮುಂದುವರಿದಿದೆ.

ಚೆಟ್ಟಳ್ಳಿ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿಯೂ ಮಳೆ ಜೋರಾಗಿದೆ. ಗುಡ್ಡೆಹೊಸೂರು, ಪೆರಾಜೆ, ಕುಶಾಲನಗರ ವಿಭಾಗದಲ್ಲೂ ಮುಂಗಾರಿನ ಚಿತ್ರಣ ಕಂಡು ಬಂದಿದೆ.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಮುಂಗಾರಿನ ಮುನ್ಸೂಚನೆ ಕಂಡುಬರುತ್ತಿದೆ. ಆಗಾಗ್ಗೆ ಮೋಡ ಕವಿಯುವ ವಾತಾವರಣ ನಿರ್ಮಾಣವಾಗುತ್ತಿದ್ದು, ಕೆಲವೊಮ್ಮೆ ಸಣ್ಣದಾಗಿ ಮಳೆ ಉದುರುತ್ತಿದೆ. ನಿನ್ನೆ ದಿನ ಗೌಡಳ್ಳಿ ವ್ಯಾಪ್ತಿಯಲ್ಲಿ ೨೦ ಸೆಂಟ್ಸ್ನಷ್ಟು ಮಳೆಯಾಗಿದೆ. ಹವಾಮಾನದಲ್ಲಿ ಬದಲಾವಣೆಯಾಗುತ್ತಿದ್ದು, ಗುಡುಗು, ಮಿಂಚಿನ ಆರ್ಭಟ ಪ್ರಾರಂಭವಾಗಿದೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ತೋಳೂರುಶೆಟ್ಟಳ್ಳಿ, ಬೆಟ್ಟದಳ್ಳಿ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುತ್ತಿದೆ.

ಮುಂಗಾರು ಪ್ರಾರಂಭದ ಮುನ್ಸೂಚನೆ ಕಂಡುಬರುತ್ತಿರುವುದರಿAದ ಕೃಷಿ ಕಾರ್ಯಗಳು ಚುರುಕು ಕಾಣುತ್ತಿವೆ. ಕಾಫಿ ತೋಟಗಳಲ್ಲಿ ಮರ ಕಟಾವು, ಕಾಫಿ ಗಿಡಗಳ ಬುಡ ಬಿಡಿಸುವುದು, ಗೊಬ್ಬರ ಹಾಕುವುದು, ಸ್ಪೆçà ಮಾಡುವ ಕಾರ್ಯ ಪ್ರಗತಿಯಲ್ಲಿದೆ. ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಗೊಬ್ಬರ, ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ.

ವಿದ್ಯುತ್ ಕಂಬ, ಮರ ಧರಶಾಯಿ

ಕೂಡಿಗೆ: ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಈ ವ್ಯಾಪ್ತಿಯಲ್ಲಿ ಅನೇಕ ಮರಗಳು ರಸ್ತೆಗೆ ಉರುಳಿವೆ. ಅಲ್ಲದೆ ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತಗೊಂಡ ಘಟನೆ ನಡೆದಿದೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬಗಳು ಮುರಿದಿದ್ದು, ತಂತಿಗಳು ತುಂಡಾಗಿವೆ.

ಬಸವನತ್ತೂರು ಗ್ರಾಮದ ಗಾಯಿತ್ರಿ ಶೇಖರ್ ಮತ್ತು ಕಾಳಪ್ಪ ಎಂಬವರ ಮನೆ ಸಮೀಪದಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತಗೊಂಡಿದೆ. ಪರಮೇಶಚಾರಿ, ರಾಜಣ್ಣ, ಯೋಗೇಶ್, ಪ್ರಕಾಶ್, ವೆಂಕಟೇಶ ಎಂಬುವರ ಜಮೀನಿಗೆ ಮಳೆಯ ನೀರು ನುಗ್ಗಿ ನೀರಿನಲ್ಲಿ ಜೋಳ ಮತ್ತು ಗೊಬ್ಬರ ತೇಲಿಹೊದ ಘಟನೆ ನೆಡೆದಿದೆ. ಚೆಸ್ಕಾಂ ಇಲಾಖೆಯವರು ಬದಲಿ ವಿದ್ಯುತ್ ಕಂಬಗಳನ್ನು ನೆಡುವುದರ ಮೂಲಕ ತಂತಿಗಳನ್ನು ಅಳವಡಿಸಿ ವಿದ್ಯುತ್ ಪೂರೈಕೆ ಮಾಡಿರುತ್ತಾರೆ.

ಪೊನ್ನಂಪೇಟೆ ಸಾಧಾರಣ ಮಳೆ

ಪೊನ್ನಂಪೇಟೆ : ಪೊನ್ನಂಪೇಟೆ ವ್ಯಾಪಿಯಲ್ಲಿ ಮಧ್ಯಾಹ್ನದ ನಂತರ ಮುಂಗಾರು ಮಳೆ ಪ್ರವೇಶವಾಗಿದ್ದು, ಪೊನ್ನಂಪೇಟೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಬೇಗೂರು ಗ್ರಾಮದಲ್ಲಿ ೬೦ ಸೆಂಟ್, ಕಿರುಗೂರಿನಲ್ಲಿ ೨೫ ಸೆಂಟ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕುಂದ, ಬಿ. ಶೆಟ್ಟಿಗೇರಿ, ಹುದಿಕೇರಿ, ಬಾಳೆಲೆ, ಕಾನೂರು, ಬಲ್ಯಮಂಡೂರು, ಕೋತೂರು ಸೇರಿದಂತೆ ಬಹುತೇಕ ಗ್ರಾಮಗಳಿಗೆ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಇದೆ. ಗಡಿ ಪ್ರದೇಶಗಳಾದ ನಿಟ್ಟೂರು, ಕಾರ್ಮಾಡು ವ್ಯಾಪ್ತಿಯಲ್ಲಿ ಮಾತ್ರ ಮಳೆ ಯಾಗಿಲ್ಲ, ಮೋಡ ಕವಿದ ವಾತಾವರಣ ಇದೆ.