ಮಡಿಕೇರಿ, ಜೂ.೨; ಪ್ರೌಢಾವಸ್ಥೆಗೆ ಕಾಲಿಡು ವಾಗಲೇ ಕಳ್ಳತನಕ್ಕಿಳಿದಿರುವ ಯುವ ಚೋರನೋರ್ವ ಆರೋಗ್ಯ ಇಲಾಖಾ ಧಿಕಾರಿ ಕಚೇರಿಗೆ ನುಗ್ಗಿ ಲ್ಯಾಪ್ಟಾಪ್ ಕಳವು ಮಾಡಿ ಇದೀಗ ಮೂರನೇ ಬಾರಿಗೆ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಮಡಿಕೇರಿಯ ಚೈನ್ಗೇಟ್ ಬಳಿಯ ನಿವಾಸಿ ಸುಮಂತ್ (೧೮) ಎಂಬಾತನೇ ಕಳವು ಪ್ರಕರಣದಲ್ಲಿ ಬಂದಿಯಾದ ಯುವಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ನಿನ್ನೆ ಸಂಜೆ ೪.೧೫ರ ಸಮಯಕ್ಕೆ ನುಗ್ಗಿದ ಸುಮಂತ್ ಅಲ್ಲಿನ ಕ್ಷಯ ರೋಗ ನಿಯಂತ್ರಣಾಧಿಕಾರಿ
(ಮೊದಲ ಪುಟದಿಂದ) ಡಾ.ಆನಂದ್ ಅವರ, ಇಲಾಖೆಗೆ ಸೇರಿದ ಚಾರ್ಜ್ ಮಾಡಲು ಇರಿಸಿದ್ದ ಲ್ಯಾಪ್ಟ್ಯಾಪ್ ಅನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ದೊರೆತ ದೂರಿನ ಮೇರೆಗೆ ತನಿಖೆ ಕೈಗೊಂಡ ಮಡಿಕೇರಿ ನಗರ ಅಪರಾಧ ಪತ್ತೆದಳ ವಿಭಾಗದವರು ಸಿ.ಸಿ. ಕ್ಯಾಮರಾ ಪರಿಶೀಲಿಸಿದಾಗ ಕಳವು ಮಾಡಿದ ಯುವಕನ ಚಹರೆ ಪತ್ತೆಯಾಗಿದೆ. ಹುಡುಕಾಟ ನಡೆಸಿದಾಗ ಇಂದು ಮಧ್ಯಾಹ್ನ ಸುಮಂತ್ ಮಾರುಕಟ್ಟೆ ಬಳಿ ಸಿಕ್ಕಿದ್ದು, ಆತನ ಬಳಿಯಿದ್ದ ಬ್ಯಾಗ್ನಲ್ಲಿ ಲ್ಯಾಪ್ಟಾಪ್ ಸಿಕ್ಕಿದೆ. ಈತನನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಿ ನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಲ್ಯಾಪ್ಟಾಪ್ನಲ್ಲಿ ಕೋವಿಡ್ ಸಂಬAಧಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ವೇತನಗಳ ಕುರಿತ ಅಮೂಲ್ಯ ದಾಖಲಾತಿಗಳಿದ್ದವು.
ಮೊನ್ನೆ ಜೈಲಿನಿಂದ ಬಂದಿದ್ದ
ಕಳವು ಮಾಡಿರುವ ಸುಮಂತ್ ಈಗಾಗಲೇ ಎರಡು ಕಳವು ಪ್ರಕರಣದಲ್ಲಿ ಭಾಗಿಯಾಗಿ ಪ್ರಕರಣ ದಾಖಲಾಗಿದೆ. ತಿಂಗಳ ಹಿಂದೆ ಮಡಿಕೇರಿಯ ಇಂದಿರಾಗಾAಧಿ ವೃತ್ತದ ಬಳಿಯಿರುವ ಅಂಗಡಿಯೊAದರ ಗೋಡೆ ಕೊರೆದು ಹಣ ಕಳವು ಮಾಡಿ ಜೈಲು ಸೇರಿದ್ದಾತ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಅಲ್ಲದೆ, ಈ ಹಿಂದೆಯೂ ಕುಶಾಲನಗರದಲ್ಲೂ ಕಳವು ಪ್ರಕರಣದಲ್ಲಿ ಭಾಗಿಯಾಗಿ ಮೊಕದ್ದಮೆ ಎದುರಿಸುತ್ತಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಮೊದಲೇ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದರಿಂದ ಆತನ ಚಹರೆ ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಸಹಕಾರಿಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಮಡಿಕೇರಿ ಉಪ ವಿಭಾಗದ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಕು. ಅಂತಿಮ, ಕ್ರೈಂ ಸಿಬ್ಬಂದಿಗಳಾದ ದಿನೇಶ್ ಕೆ.ಕೆ, ಹೆಚ್.ಎಸ್. ಶ್ರೀನಿವಾಸ್, ಪ್ರವೀಣ್, ನಾಗರಾಜ್, ಠಾಣಾ ಸಿಬ್ಬಂದಿಗಳಾದ ಅರುಣ್ ಕುಮಾರ್, ಗಣಪತಿ, ದಿವ್ಯಾ, ಭವಾನಿ, ಸೌಮ್ಯ ಹಾಗೂ ಸಿಡಿಆರ್ ಶೆಲ್ನ ಗಿರೀಶ್ ಮತ್ತು ರಾಜೇಶ್ ಪಾಲ್ಗೊಂಡಿದ್ದರು.