ಸೋಮವಾರಪೇಟೆ, ಜೂ. ೨: ಕೋಣಗಳು ಗುದ್ದಾಡಿದ ವಿಚಾರಕ್ಕೆ ಸಂಬAಧಿಸಿದAತೆ ಕೋಣಗಳನ್ನೂ ಮೀರಿಸುವ ಧಾಟಿಯಲ್ಲಿ ವ್ಯಕ್ತಿಯೋರ್ವರ ಮೇಲೆ ತಂದೆ ಮತ್ತು ಮಗ ಮೃಗೀಯ ರೀತಿಯಲ್ಲಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡಿರುವ ಘಟನೆ ಸಮೀಪದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
(ಮೊದಲ ಪುಟದಿಂದ) ಗುಂಬಾರಗಡಿಗೆ ಗ್ರಾಮದಲ್ಲಿ ನಡೆದಿದೆ. ೬೦ರ ಪ್ರಾಯದ ಹಿರಿಯ ನಾಗರಿಕರ ಮೇಲೆ ತಂದೆ ಮತ್ತು ಮಗ ಹಲ್ಲೆ ಮಾಡಿರುವ ಘಟನೆಯನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಹಲ್ಲೆ ಮಾಡುತ್ತಿರುವ ಭಾವಚಿತ್ರಗಳ ಸಹಿತ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ ಮೇರೆ, ಈರ್ವರ ವಿರುದ್ಧ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಕುಂಬಾರಗಡಿಗೆ ಗ್ರಾಮದ ಕೆ.ಎಂ. ಬಿದ್ದಪ್ಪ ಅವರ ಮೇಲೆ ಅದೇ ಗ್ರಾಮದ ಮೇದುರ ಪೂವಯ್ಯ (ಮಣಿ) ಹಾಗೂ ಆತನ ಪುತ್ರ ಗಿರೀಶ್ ಅವರುಗಳು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಬಿದ್ದಪ್ಪ ಅವರು ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಎದುರಾದ ಪೂವಯ್ಯ ಅವರು ತಮ್ಮ ಕೋಣ ಮತ್ತು ಬಿದ್ದಪ್ಪ ಅವರ ಕೋಣ ಗುದ್ದಾಡಿದ ವಿಚಾರಕ್ಕೆ ತಗಾದೆ ತೆಗೆದು, ತಮ್ಮ ಕೈಯಲ್ಲಿದ್ದ ಕತ್ತಿಯ ಹಿಡಿಭಾಗದಿಂದ ಹಲ್ಲೆ ನಡೆಸಿದ್ದಾರೆ. ಆತನ ಮಗ ಗಿರೀಶ್ ಸಹ ಬಿದ್ದಪ್ಪ ಅವರನ್ನು ಕೆಳಗೆ ಬೀಳಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಗಾಯಾಳು ಬಿದ್ದಪ್ಪ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.