*ಗೋಣಿಕೊಪ್ಪ, ಜೂ. ೨: ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜಾಗತಿಕ ಲಾಭರಹಿತ ಉದ್ಯಮಿಗಳ ಸಂಸ್ಥೆ ಬೆಂಗಳೂರು ಶಾಖೆಯ (ಇಟಿಣಡಿeಠಿಡಿeಟಿevಡಿs oಡಿgಚಿಟಿizಚಿಣioಟಿ) ತಿತಿಮತಿ ಆರೋಗ್ಯ ಕೇಂದ್ರಕ್ಕೆ ಲಕ್ಷಕ್ಕೂ ಹೆಚ್ಚು ವಿವಿಧ ವೈದ್ಯಕೀಯ ಉಪಕರಣಗಳನ್ನು ವಿತರಿಸಿತು.

ತಿತಿಮತಿ ಆರೋಗ್ಯ ಕೇಂದ್ರದಲ್ಲಿ ಬೆಲೆ ಬಾಳುವ ವೈದ್ಯಕೀಯ ಉಪಕರಣಗಳಾದ ಬಿಪಿ ತಪಾಸಣೆ ಯಂತ್ರ, ಸ್ಕಿçÃನಿಂಗ್ ಯಂತ್ರ, ಆಕ್ಸಿಜನ್ ಫ್ಲೋ ಮೀಟರ್ ಸೆಟ್, ಪಲ್ಸ್ ಆಕ್ಸಿಮೀಟರ್, ನೆಬುಲೈಸರ್, ಸ್ಯಾನಿಟೈಸರ್, ಗ್ಲೌಸ್, ಪಲ್ಸ್ ಕಿಟ್, ಪಲ್ಸ್ ಸ್ಟಿçಪ್ಸ್, ಮಾಸ್ಕ್, ಥರ್ಮೋಮೀಟರ್ ಸೇರಿದಂತೆ ಹಲವು ಉಪಕರಣಗಳನ್ನು ನೀಡಲಾಯಿತು.

ಬೆಂಗಳೂರು ಶಾಖೆಯ ಪ್ರಮುಖರಾದ ನಂಬುಡುಮಾಡ ನರೇನ್‌ಸುಬ್ಬಯ್ಯ ಅವರ ನೇತೃತ್ವದಲ್ಲಿ ವೈದ್ಯಕೀಯ ಉಪಕರಣಗಳನ್ನು ವಿತರಿಸುವ ಕಾರ್ಯ ನಡೆದಿದೆ.

ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ವೀರಾಜಪೇಟೆ ಸಾರ್ವಜನಿಕ

(ಮೊದಲ ಪುಟದಿಂದ) ಆಸ್ಪತ್ರೆಗೆ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಉಪಕರಣಗಳನ್ನು ನೀಡಲಾಗುತ್ತಿದೆ ಎಂದು ವಿತರಣೆಯ ಸಂದರ್ಭ ಸ್ಥಳೀಯ ಕಾಫಿ ಬೆಳೆಗಾರ ಅಜ್ಜಿಕುಟ್ಟಿರ ಕರುಣ್ ಮಾಹಿತಿ ನೀಡಿದರು.

ತಿತಿಮತಿ ಆರೋಗ್ಯ ಕೇಂದ್ರವು ಈ ವ್ಯಾಪ್ತಿಯ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಕೊರೊನಾ ಕಾಲದಲ್ಲಿಯೂ ಈ ಭಾಗದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಲಸಿಕೆ ಅಭಿಯಾನದಲ್ಲಿ ಉತ್ತಮ ಹೆಜ್ಜೆಯನ್ನು ಇಟ್ಟಿದೆ ಎಂದು ಮನಗಂಡು ಈ ಕೇಂದ್ರಕ್ಕೆ ಸಹಕಾರ ಒದಗಿಸುವಂತೆ ಕಾಫಿ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ ಅವರು ಇಓ ಸಂಸ್ಥೆಯನ್ನು ಸಂಪರ್ಕಿಸಿದರು. ಮನವಿಗೆ ಸ್ಪಂದಿಸಿದ ಸಂಸ್ಥೆ ರೂ. ೧೫ ಲಕ್ಷ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ನೀಡಿದೆ.

ಪಂಚಾಯಿತಿ ಸದಸ್ಯ ಎನ್.ಎನ್. ಅನೂಪ್‌ಕುಮಾರ್, ಕಾಫಿ ಬೆಳೆಗಾರರಾದ ಚೆಪುö್ಪಡೀರ ಮಾಚಯ್ಯ, ಮಿದೇರಿರ ಪ್ರವೀಣ್, ಹಿರಿಯರಾದ ಎಂ.ಎನ್. ಕೃಷ್ಣ, ವೈದ್ಯಾಧಿಕಾರಿ ಹೊಸಮನಿ, ಆಸ್ಪತ್ರೆ ಆಡಳಿತಾಧಿಕಾರಿ ಅರ್ಜುನ್, ಕ್ಷೇತ್ರ ಆರೋಗ್ಯಾಧಿಕಾರಿ ಶಿವಯ್ಯ, ಶುಶ್ರೂಷಕಿ ಸುಮಿತ್ರಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿರಾದ ಮಾದೇವಮ್ಮ, ರಾಜಮ್ಮ, ಲ್ಯಾಬ್ ಟೆಕ್ನಿಷಿಯನ್ ಜಿûÃನತ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.