ವೀರಾಜಪೇಟೆ, ಜೂ. ೨: ಆಸ್ತಿ ವಿಚಾರಕ್ಕೆ ಸಂಬAಧಿಸಿ ದಂತೆ ವೈಷಮ್ಯ ಬುಗಿಲೆದ್ದು ಕುಟುಂಬದ ಸದಸ್ಯರು ಮಾಜಿ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಪ್ರದೇಶ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರು ಗ್ರಾಮದ ನಿವಾಸಿ, ಮಾಜಿ ಸೈನಿಕ ಬಿ.ಎಲ್. ರಾಮಚಂದ್ರ (೬೨)(ಮೊದಲ ಪುಟದಿಂದ) ಕುಟುಂಬ ಸದಸ್ಯರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.ಕಡಂಗಮರೂರು ಗ್ರಾಮದ ಸರ್ವೆ ಸಂಖ್ಯೆ ೨೪೦ ಮತ್ತು ೨೪೧ರಲ್ಲಿ ಬಿ.ಎಲ್. ರಾಮಚಂದ್ರ ಮತ್ತು ಸಹೋದರ ಬಿ.ಎಲ್. ನಾರಾಯಣ ಎಂಬುವವರ ಕುಟುಂಬಗಳು ನೆಲೆಸಿದ್ದು, ಕಾಫಿ ತೋಟದ ಮಧ್ಯ ಮನೆಗೆ ತೆರಳಲು ದಾರಿ ಸಮಸ್ಯೆ ಎದುರಾಗಿ ಎರಡು ಕುಟುಂಬಗಳ ಮಧ್ಯೆ ಕಲಹ ಏರ್ಪಟ್ಟಿತ್ತು. ರಾಮಚಂದ್ರ ಅವರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಕಳೆದ ೨೨ ವರ್ಷಗಳಿಂದ ವೀರಾಜಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಈ ಬಗ್ಗೆ ವ್ಯಾಜ್ಯ ನಡೆಯುತ್ತಿದೆ. ನಿನ್ನೆ ದಿನ ತೋಟದಲ್ಲಿ ಮರದ ಕೊಂಬೆಗಳನ್ನು ತೆರವುಗೊಳಿಸಲು ಕಾರ್ಮಿಕರೊಂದಿಗೆ ತೆರಳಿದ್ದ ಸಂದರ್ಭ ಮರದ ಕೊಂಬೆಯೊAದು ಸಹೋದರನ ತೋಟದ ಕಾಫಿ ಗಿಡದ ಮೇಲೆ ಬಿದ್ದು ಗಿಡಕ್ಕೆ ಹಾನಿಯಾಗಿದೆ. ಇದನ್ನು ನೋಡಿದ ಸಹೋದರ ನಾರಾಯಣ, ಪತ್ನಿ ಲಲಿತ ಹಾಗೂ ಮಗ ಗಿರೀಶ್ ಎಂಬುವವರು ರಾಮಚಂದ್ರರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದ ರಾಮಚಂದ್ರ ಅವರನ್ನು ಕಾಕೋಟುಪರಂಬು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೊವಿಡ್-೧೯ ರ ಆಸ್ಪತ್ರೆಯಾಗಿರುವುದರಿಂದ ಗಾಯಾಳುವನ್ನು ರಾಮನಗರದ ಸಂಬAಧಿಕರ ಮನೆಯಲ್ಲಿರಿಸಲಾಗಿದೆ. ಹಲ್ಲೆ ನಡೆಸಿದ ನಾರಾಯಣ, ಪತ್ನಿ ಹಾಗೂ ಮಗ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾರಾಯಣ, ಪತ್ನಿ ಲಲಿತ, ಗಿರೀಶ್ ಎಂಬುವವರ ಮೇಲೆ ಕೊಲೆಗೆ ಯತ್ನ, ಹಲ್ಲೆ ಮಾಡಿರುವುದು ೭೦೭, ೩೨೪, ೫೦೬ ಐ.ಪಿ.ಸಿ ರೆ/ವಿ ೩೪ ರಂತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.