ಮಡಿಕೇರಿ, ಜೂ. ೩ ನಗರದ ಹಿಂದೂ ರುದ್ರಭೂಮಿಗೆ ಜಿಲ್ಲಾಧಿಕಾರಿ ಸೂಚನೆಯನ್ವಯ ಹೊಸ ರಸ್ತೆ ನಿರ್ಮಾಣ ಪ್ರಾರಂಭವಾಗಿದೆ. ನಗರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಕೋವಿಡ್ ರೋಗಿಗಳ ಅಂತ್ಯಸAಸ್ಕಾರ ನೆರವೇರಿಸ ಲಾಗುತ್ತಿರುವ ಹಿಂದೂ ರುದ್ರಭೂಮಿಗೆ ಕಳೆದ ವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದ ಸಂದರ್ಭ ಇಲ್ಲಿನ ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಅAತೆಯೇ ರುದ್ರಭೂಮಿಗೆ ತುರ್ತು ಅಗತ್ಯವಾದ ೫೦೦ ಮೀಟರ್ ಅಂತರದ ರಸ್ತೆಯ ನಿರ್ಮಾಣ ಕಾರ್ಯ ಗುರುವಾರದಿಂದ ಪ್ರಾರಂಭವಾಗಿದೆ. ನಗರಸಭೆಯ ಪೌರಾಯುಕ್ತ ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಅಂತೆಯೇ ರುದ್ರಭೂಮಿಯಲ್ಲಿ ಅಗತ್ಯವಾಗಿದ್ದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ, ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ಪ್ರಮುಖರಾದ ಸುರೇಶ್ ಮುತ್ತಪ್ಪ, ಚೇತನ್ ಶಾಂತಿ ನಿಕೇತನ ಹಾಜರಿದ್ದರು.