ಮಡಿಕೇರಿ, ಜೂ. ೨: ಒಂದೆಡೆ ಕೊರೊನಾ ಸೋಂಕಿನ ಅಟ್ಟಹಾಸ., ಮತ್ತೊಂದೆಡೆ ಅಲ್ಲಲ್ಲಿ ಡೆಂಗ್ಯೂ, ಇನ್ನಿತರ ಸಾಂಕ್ರಾಮಿಕದ ಭೀತಿ., ಈ ನಡುವೆ ಮಡಿಕೇರಿ ನಗರದ ಜನತೆಗೆ ಇನ್ನೇನು ಕಾಯಿಲೆ ಹರಡುತ್ತದೆಯೋ ಎಂಬ ಆತಂಕ. ಜೊತೆಗೆ ಮಳೆಗಾಲ ಕೂಡಾ ಕಾಲಿಡುತ್ತಿದ್ದು, ಎಲ್ಲಿ ಕಸದ ಗುಡ್ಡ ಜರಿಯುತ್ತದೆಯೋ ಎಂಬ ಗುಡ್ಡದ ಕೆಳಗಿರುವ ನಿವಾಸಿಗಳ ಹೆದರಿಕೆ. ಗುಡ್ಡದ ಮೇಲೆ ಸತ್ತ ಕೋಳಿಗಳು ಹಾಗೂ ಆಸ್ಪತ್ರೆಯ ತ್ಯಾಜ್ಯಗಳ ರಾಶಿ, ವಾಸನೆಯೊಂದಿಗೆ ನೊಣಗಳು ಹಾರಾಡುತ್ತಿದ್ದು, ಹುಳುಗಳು ಹರಿದಾಡುತ್ತಿವೆ..!ಕಳೆದ ೧೫ ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿರುವ ಮಡಿಕೇರಿ ನಗರದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿರುವ ಸ್ಟೋನ್ ಹಿಲ್ ಬಳಿಯ ? ಕುಡೆಕಲ್ ಸಂತೋಷ್ಮಡಿಕೇರಿ, ಜೂ. ೨: ಒಂದೆಡೆ ಕೊರೊನಾ ಸೋಂಕಿನ ಅಟ್ಟಹಾಸ., ಮತ್ತೊಂದೆಡೆ ಅಲ್ಲಲ್ಲಿ ಡೆಂಗ್ಯೂ, ಇನ್ನಿತರ ಸಾಂಕ್ರಾಮಿಕದ ಭೀತಿ., ಈ ನಡುವೆ ಮಡಿಕೇರಿ ನಗರದ ಜನತೆಗೆ ಇನ್ನೇನು ಕಾಯಿಲೆ ಹರಡುತ್ತದೆಯೋ ಎಂಬ ಆತಂಕ. ಜೊತೆಗೆ ಮಳೆಗಾಲ ಕೂಡಾ ಕಾಲಿಡುತ್ತಿದ್ದು, ಎಲ್ಲಿ ಕಸದ ಗುಡ್ಡ ಜರಿಯುತ್ತದೆಯೋ ಎಂಬ ಗುಡ್ಡದ ಕೆಳಗಿರುವ ನಿವಾಸಿಗಳ ಹೆದರಿಕೆ. ಗುಡ್ಡದ ಮೇಲೆ ಸತ್ತ ಕೋಳಿಗಳು ಹಾಗೂ ಆಸ್ಪತ್ರೆಯ ತ್ಯಾಜ್ಯಗಳ ರಾಶಿ, ವಾಸನೆಯೊಂದಿಗೆ ನೊಣಗಳು ಹಾರಾಡುತ್ತಿದ್ದು, ಹುಳುಗಳು ಹರಿದಾಡುತ್ತಿವೆ..!

ಕಳೆದ ೧೫ ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿರುವ ಮಡಿಕೇರಿ ನಗರದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿರುವ ಸ್ಟೋನ್ ಹಿಲ್ ಬಳಿಯ ಕಸ ಸುರಿಯುವ ಪ್ರದೇಶದಲ್ಲಿ ನಗರದ ಜನವಸತಿ ಪ್ರದೇಶಗಳ ಕಸಗಳೊಂದಿಗೆ ಸತ್ತ ಕೋಳಿಗಳನ್ನು ತಂದು ಸುರಿಯಲಾಗಿದ್ದು, ಇದು ಕೊಳೆತು ನಾರುತ್ತಿದೆ. ಜೊತೆಗೆ ಆಸ್ಪತ್ರೆಯ ತ್ಯಾಜ್ಯಗಳನ್ನು ಕೂಡ ತಂದು ಇಲ್ಲೇ ಸುರಿಯಲಾಗಿದ್ದು, ಒಂದು ರೀತಿಯಲ್ಲಿ ಮತ್ತೊಂದು ಅಪಾಯವನ್ನು ಸೃಷ್ಟಿ ಮಾಡಿದಂತಾಗಿದೆ. ಇನ್ನೊಂದು ಬದಿಯಲ್ಲಿ ಮಂಗಳೂರು ರಸ್ತೆ ಬದಿಗೆ ಇರುವ ಜಾಗದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಲಾಗಿದ್ದು, ಮಳೆಗಾಲ ಆರಂಭವಾಗಿ ಈ ಗುಂಡಿಯಲ್ಲಿ ನೀರು ಸಂಗ್ರಹವಾಗಿ ಗುಡ್ಡ ಜರಿದರೂ ಅಚ್ಚರಿಯಿಲ್ಲ..!

ಕೋಳಿಗಳ ರಾಶಿ

ನಗರದ ಕಸ ಹಾಕಲು ಹಾಗೂ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಸಂದರ್ಭ ಸ್ಟೋನ್ ಹಿಲ್ ಬಳಿ ಗುರುತಿಸಲಾದ ಜಾಗದಲ್ಲಿ ಕಸವನ್ನು ತಂದು ಹಾಗೇ ಸುರಿಯಲಾಗುತ್ತಿದೆ.

(ಮೊದಲ ಪುಟದಿಂದ) ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಅವುಗಳಿಂದ ಗೊಬ್ಬರ ತಯಾರಿಸಿ ವಿಲೇವಾರಿ ಮಾಡಲು ಯಂತ್ರಗಳನ್ನು ಇರಿಸಲಾಗಿದೆ ಯಾದರೂ ಅವುಗಳು ತುಕ್ಕು ಹಿಡಿದು ಪಳೆಯುಳಿಕೆಯಂತೆ ಕಾಣುತ್ತಿವೆ. ಹಸಿ ಕಸ, ಪ್ಲಾಸ್ಟಿಕ್ ಸೇರಿದಂತೆ ಎಲ್ಲವನ್ನೂ ಇಲ್ಲಿ ಒಂದೇ ಕಡೆಯಲ್ಲಿ ಸುರಿಯುತ್ತಿರುವದು ಗೋಚರಿಸುತ್ತದೆ. ಇದೀಗ ಮಳೆಗಾಲ ಆರಂಭವಾಗಿ ರುವದರಿಂದ ಹಲವು ವರ್ಷಗಳಿಂದ ಸುರಿಯಲಾಗಿರುವ ಕಸದ ರಾಶಿ ಕೊಳೆತು ನಾರುತ್ತಿದೆ. ಇದರೊಂದಿಗೆ ಇದೀಗ ಸತ್ತ ಕೋಳಿಗಳನ್ನು ಕೂಡ ಇಲ್ಲಿ ತಂದು ಸುರಿಯಲಾಗಿದ್ದು, ಪ್ರದೇಶವಿಡೀ ಗಬ್ಬು ನಾರುತ್ತಿದೆ. ನಗರಸಭೆಯಿಂದ ತೆರೆಯಲಾಗಿರುವ ಗುಂಡಿಯಲ್ಲಿ ಕೂಡ ಕೋಳಿಗಳನ್ನು ಹಾಕಲಾಗಿದ್ದು, ಹುಳುಗಳು ಉತ್ಪತ್ತಿಯಾಗಿ ಹರಿದಾಡುತ್ತಿವೆ. ಈ ಪ್ರದೇಶದಲ್ಲಿ ಮಾಂಸದ ತ್ಯಾಜ್ಯಗಳನ್ನು ಸುರಿಯಬಾರದೆಂಬ ನಿಯಮವಿದ್ದರೂ, ಈ ಹಿಂದೆ ಇದಕ್ಕೆ ಸಾರ್ವಜನಿಕರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ದಂಡ ಕೂಡ ವಿಧಿಸಲಾಗಿತ್ತು. ಆದರೆ, ಇದೀಗ ತ್ಯಾಜ್ಯದ ಬದಲಿಗೆ ಸತ್ತ ಕೋಳಿಗಳನ್ನೇ ತಂದು ಸುರಿಯಲಾಗುತ್ತಿದೆ.

ಆಸ್ಪತ್ರೆ ತ್ಯಾಜ್ಯ

ಸಾಮಾನ್ಯವಾಗಿ ಆಸ್ಪತ್ರೆಗಳಿಗೆ ಸಂಬAಧಿಸಿದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಯೇ ವಿಲೇವಾರಿ ಮಾಡಬೇಕಿದೆ. ಆದರೆ ಇಲ್ಲಿ ಇತರ ಕಸದ ರಾಶಿ ನಡುವೆಯೇ ಆಸ್ಪತ್ರೆಗಳ ಕಸವನ್ನೂ ಕೂಡ ತಂದು ಸುರಿಯಲಾಗಿದೆ. ಕೈಗವಸು, ಸಿರಿಂಜುಗಳು ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯಗಳಿವೆ ಇಲ್ಲಿ. ಇದೀಗ ಕೋವಿಡ್ ಸೋಂಕು ಕೂಡಾ ಇದ್ದು, ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ತ್ಯಾಜ್ಯಗಳನ್ನು ಇಲ್ಲಿ ಸುರಿದಿರುವದು ಅಪಾಯಕಾರಿಯಾಗಿದೆ. ಇಲ್ಲಿ ಸುರಿಯುವ ಕಸದ ರಾಶಿಗಳಿಂದ ಅಸಹಾಯಕ ಗುಜರಿ ಹೆಕ್ಕುವವರು ಕಬ್ಬಿಣ, ಪ್ಲಾಸ್ಟಿಕ್, ಬಾಟಲಿ ಮುಂತಾದ ವುಗಳನ್ನು ಹೆಕ್ಕಿ ಕೊಂಡೊಯ್ದು ಗುಜರಿ ಅಂಗಡಿಗಳಿಗೆ ನೀಡುತ್ತಾರೆ. ಇದರಿಂದಾಗಿ ಅಂತಹ ಅಮಾಯ ಕರಿಗೆ ಅಪಾಯ ತಂದೊಡ್ಡುವ ಸಂಭವವನ್ನು ಅಲ್ಲಗಳೆಯುವಂತಿಲ್ಲ.

ಅಪಾಯದ ಗುಂಡಿಗಳು

ಬೆಟ್ಟದ ಮೇಲಿರುವ ಕಸದ ರಾಶಿಯನ್ನು ನಗರಸಭೆ ವತಿಯಿಂದ ಸಾದ್ಯವಾದಷ್ಟು ಮಟ್ಟಿಗೆ ಜೆಸಿಬಿ ಯಂತ್ರದ ಮುಲಕ ಇಳಿಜಾರು ಪ್ರದೇಶಕ್ಕೆ ತಳ್ಳಿಬಿಡಲಾಗುತ್ತಿದೆ. ಆದರೂ ಪ್ರತಿನಿತ್ಯ ಕಸ ತಂದು ಸುರಿಯುತ್ತಿರುವದರಿಂದ ಮತ್ತೊಂದು ಕಡೆಯಿಂದ ರಾಶಿ ಬೆಳೆಯುತ್ತಾ ಹೋಗುತ್ತದೆ. ಇತ್ತ ಮಂಗಳೂರು ರಸ್ತೆ ಕಡೆಗೆ ಸಾಧ್ಯವಾದಷ್ಟು ಕಸಗಳನ್ನು ತಳ್ಳಿಹಾಕಲಾಗಿದ್ದು, ಇದೀಗ ಎರಡು ಹೊಂಡಗಳನ್ನು ಮಾಡಲಾಗಿದೆ. ಇನ್ನೇನು ಮಳೆಗಾಲ ಆರಂಭವಾಗಲಿದ್ದು ಒಂದು ವೇಳೆ ಇದರಲ್ಲಿ ನೀರು ತುಂಬಿ ಕಸ ಸಹಿತ ಗುಡ್ಡ ಕುಸಿದರೆ ಕೆಳಗಿನ ಪ್ರದೇಶಕ್ಕೆ ಅಪಾಯ ತಪ್ಪಿದಲ್ಲ. ಇಂಗು ಗುಂಡಿಯಿAದಾಗಿ ಗಜಗಿರಿ ಬೆಟ್ಟ ಕುಸಿದಿರುವದು, ಮಂಗಳೂರಿನಲ್ಲಿ ಮಡಿಕೇರಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸುತ್ತಿರುವ ಬಗ್ಗೆ ರಾಜ್ಯ ಪೌರಾಡಳಿತ ಸಚಿವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಚಿವರು ಕೊಡಗಿಗೆ ಬಂದಿದ್ದಾಗ ಸ್ಟೋನ್‌ಹಿಲ್‌ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಎಲ್ಲವೂ ವ್ಯವಸ್ಥಿತವಾಗಿತ್ತು. ಕಸ ವಿಂಗಡಣೆ, ಗೊಬ್ಬರ ತಯಾರಿಕೆಯಲ್ಲಿ ಸಮವಸ್ತç ತೊಟ್ಟ ಸಿಬ್ಬಂದಿಗಳೂ ಇದ್ದರು. ಯಂತ್ರಗಳು ಬಣ್ಣ ಕಂಡು ಕಂಗೊಳಿಸುತ್ತಿದ್ದು. ಆದರೆ, ಸಚಿವರು ಬಂದು ಹೋಗುತ್ತಿರುವಂತೆ ಎಲ್ಲವೂ ಅವರ ಹಿಂದೆಯೇ ಹೋಗಿಬಿಟ್ಟಿದೆ. ಯಂತ್ರಗಳು ಮತ್ತೆ ಮೂಲೆ ಸೇರಿದರೆ, ಅಂದು ಹಾಕಲಾಗಿರುವ ಫಲಕ ಮಾತ್ರ ಕಂಗೊಳಿಸುತ್ತಿವೆ.ಕಸದ ರಾಶಿ ಜರಿದು ಸಂಭವಿಸಿದ ಅನಾಹುತ ಮಾಸದಿರುವ ಮುನ್ನವೇ ಈ ಬೆಟ್ಟದಲ್ಲಿ ಹೊಂಡಗಳನ್ನು ನಿರ್ಮಿಸಿರುವ ಬಗ್ಗೆ ನಾಗರಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಚ್ಚರ ವಹಿಸದಿದ್ದಲ್ಲಿ ಆಪತ್ತು

ಸ್ಟೋನ್ ಹಿಲ್ ಬಳಿ ಕಸ ಸುರಿಯದೇ ಸರಕಾರ ಗುರುತಿಸಿರುವ ಜಾಗದಲ್ಲಿ ಸುರಿಯುವಂತೆ ಹಾಗೂ ಸ್ಟೋನ್ ಹಿಲ್ ಬಳಿಯ ಕಸಗಳನ್ನು ಬೇರೆಡೆಗೆ ಸ್ಥಳಾಂತರಿಸುವAತೆ ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದ್ದರೂ ಈ ಪ್ರಕ್ರಿಯೆಗೆ ಇನ್ನೂ ಚಾಲನೆ ದೊರೆತಿಲ್ಲ. ಇನ್ನೇನು ಮುಂಗಾರು ಪ್ರವೇಶ ಮಾಡಲಿದ್ದು, ಮೂರು ತಿಂಗಳ ಕಾಲ ಯಾವದೇ ಕೆಲಸ ಕಾರ್ಯ ಕೈಗೊಳ್ಳುವದು ಕನಸಿನ ಮಾತು. ಜನಪ್ರತಿನಿಧಿಗಳು, ಜಿಲ್ಲಾಡಳಿತ ಇತ್ತ ಗಮನಹರಿಸಿ, ಎಚ್ಚರ ವಹಿಸದಿದ್ದಲ್ಲಿ ಆಪತ್ತು ಎದುರಿಸಬೇಕಾದ ಸನ್ನಿವೇಶ ಉಂಟಾದರೂ ಅಚ್ಚರಿಯಿಲ್ಲ..!