ಪೊನ್ನಂಪೇಟೆ. ಜೂ. ೩: ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಪೊನ್ನಂಪೇಟೆಯ ಕೆಲವು ಕೋಳಿ ಮಾಂಸದ ಅಂಗಡಿಗಳಲ್ಲಿ ಅಧಿಕ ಬೆಲೆಗೆ ಮಾಂಸ ಮಾರಾಟ ಮಾಡುತಿದ್ದ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ಅವರ ಸಮ್ಮುಖದಲ್ಲಿ ಪೊನ್ನಂಪೇಟೆ ಗ್ರಾ. ಪಂ. ಸಭಾಂಗಣದಲ್ಲಿ ಪೊನ್ನಂಪೇಟೆ ವ್ಯಾಪ್ತಿಯ ಮಾಂಸದ ಅಂಗಡಿ ವರ್ತಕರ ಸಭೆ ಕರೆಯಲಾಗಿತ್ತು. ಈ ಸಂದರ್ಭ ಮಾತನಾಡಿದ ತಹಶೀಲ್ದಾ ರರು ಪತ್ರಿಕೆಯಲ್ಲಿ ಪ್ರಕಟವಾಗುವ ಬೆಲೆಗೆ ಮಾಂಸ ಮಾರಾಟ ಮಾಡಬೇಕು. ತಮ್ಮ ಅಂಗಡಿಗಳ ಮುಂದೆ ಮಾಂಸದ ಬೆಲೆಯನ್ನು ಬರೆದು ತೂಗು ಹಾಕಬೇಕು. ನಿಗದಿತ ಬೆಲೆಗಿಂತ ಅಧಿಕ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಹಾಗೂ ತೂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಅಂತಹ ಅಂಗಡಿಯನ್ನು ಜಪ್ತಿ ಮಾಡಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಗ್ರಾ. ಪಂ. ಆಡಳಿತ ಅಧಿಕಾರಿ ಎಂ. ಕೆ. ದೀನಾ, ಗ್ರಾ. ಪಂ. ಸದಸ್ಯರು, ಸಿಬ್ಬಂದಿಗಳು ಹಾಗೂ ಪೊನ್ನಂಪೇಟೆ ವ್ಯಾಪ್ತಿಯ ಮಾಂಸ ಮಾರಾಟಗಾರರು ಇದ್ದರು.