.jpeg)
ಮಡಿಕೇರಿ, ಮೇ ೩೧: ಸೇನಾ ಜಿಲ್ಲೆ ಖ್ಯಾತಿಯ ಕೊಡಗಿಗೆ ದೇಶದ ರಕ್ಷಣಾಪಡೆಯ ಇತಿಹಾಸದಲ್ಲಿ ಇದೀಗ ಹೊಸತೊಂದು ಹಿರಿಮೆ ದೊರೆತಿದೆ. ಭಾರತೀಯ ಸೇನೆಯಲ್ಲಿ ನೌಕಾ ಪಡೆಯಲ್ಲಿ ರಿಯರ್ ಅಡ್ಮಿರಲ್ ಆಗಿರುವ ಕೊಡಗಿನವರಾದ ಐಚೆಟ್ಟಿರ ಬಿ. ಉತ್ತಯ್ಯ (ವಿಎಸ್ಎಂ) ಅವರು ಇದೀಗ ‘ಅಡ್ಮಿರಲ್ ಸೂಪರಿಂಟೆAಡೆAಟ್ ನೇವಲ್ ಡಾಕ್ಯಾರ್ಡ್ ವಿಶಾಖಪಟ್ಟಣಂ’ ಆಗಿ ನಿಯೋಜಿತರಾಗಿದ್ದಾರೆ.
ರಿಯರ್ ಅಡ್ಮಿರಲ್ ಸ್ಥಾನ ನೌಕಾಪಡೆಯಲ್ಲಿನ ಮೂರನೇಯ ಅತ್ಯುನ್ನತ ಸ್ಥಾನವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಯ್ಯ ಅವರು ರಿಯರ್ ಅಡ್ಮಿರಲ್ ಆಗಿದ್ದಾರೆ. ಭೂಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಅವರುಗಳು ಈತನಕ ದೇಶದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದರೆ, ವಾಯುಪಡೆಯಲ್ಲಿಯೂ ಕೆಲವರು ಏರ್ ಮಾರ್ಷಲ್ ಸ್ಥಾನದಂತಹ ಹುದ್ದೆಯನ್ನು ನಿಭಾಯಿಸಿದ್ದಾರೆ. ನೌಕಾದಳಕ್ಕೆ ಸಂಬAಧಿಸಿದAತೆ ಈ ತನಕ ಕೊಡಗಿನಿಂದ ಅತ್ಯುನ್ನತ ಸ್ಥಾನಕ್ಕೆ ಏರಿದವರು (ಮೂರನೇ ರ್ಯಾಂಕ್) ಐಚೆಟ್ಟಿರ ಬಿ. ಉತ್ತಯ್ಯ ಅವರಾಗಿದ್ದಾರೆ.
ಇದೀಗ ಇವರು ಈ ರ್ಯಾಂಕ್ನಲ್ಲಿಯೇ ಮುಂದುವರಿದಿದ್ದಾರೆ. ಆದರೆ, ಇದರೊಂದಿಗೆ ಅಡ್ಮಿರಲ್ ಸೂಪರಿಂಟೆAಡೆAಟ್
(ಮೊದಲ ಪುಟದಿಂದ) ನೇವಲ್ ಡಾಕ್ಯಾರ್ಡ್ ಆಗಿ ನೇಮಕಗೊಂಡಿರುವದು ಪ್ರತಿಷ್ಠೆಯ ವಿಚಾರವಾಗಿದೆ. ಈ ಸ್ಥಾನದಲ್ಲಿ ಕೆಲಸ ನಿರ್ವಹಿಸಿದವರು ಮಾತ್ರ ಮುಂದಿನ ಬಡ್ತಿಗೆ ಪರಿಗಣಿಸಲ್ಪಡಲಿದ್ದಾರೆ. ದೇಶದಲ್ಲಿ ವಿಶಾಖಪಟ್ಟಣಂ ಹಾಗೂ ಬಾಂಬೆ ಪ್ರಮುಖ ನೌಕಾ ನೆಲೆಯಾಗಿದ್ದು, ಇದು ನೇವಲ್ ಬೇಸ್ ಕೂಡ ಆಗಿದೆ. ತಾಂತ್ರಿಕ ವಿಭಾಗದಲ್ಲಿ ಉತ್ತಯ್ಯ ಅವರು, ಪರಿಣಿತರಾಗಿದ್ದು, ಈ ಹಿಂದೆ ೨೦೧೫ - ೨೦೧೬ರಲ್ಲಿ ಇದೇ ನೆಲೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಇಲ್ಲಿಗೆ ಮತ್ತೆ ಬಡ್ತಿಯೊಂದಿಗೆ ಹೊಸ ಜವಾಬ್ದಾರಿಗೆ ನಿಯೋಜಿತರಾಗಿದ್ದು, ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಉತ್ತಯ್ಯ ಅವರು ಭಾರತೀಯ ನೌಕಾಪಡೆಗೆ ೧೯೮೭ರಲ್ಲಿ ಕಮೀಷನ್ಡ್ ಆಗಿದ್ದರು. ಮೆರೈನ್ ಇಂಜಿನಿಯರಿAಗ್ನಲ್ಲಿ ಬಿ-ಟೆಕ್ ಡಿಗ್ರಿ, ಎಂಟೆಕ್, ಎಂಫಿಲ್ನAತಹ ಡಿಗ್ರಿಗಳನ್ನು ಇವರು ಪಡೆದಿದ್ದಾರೆ. ತಮ್ಮ ೩೩ ವರ್ಷಗಳ ಸೇವೆಯಲ್ಲಿ ನೌಕಾಪಡೆಯಲ್ಲಿ ಹಲವಾರು ಪ್ರಮುಖ ಕರ್ತವ್ಯಗಳನ್ನು ಉತ್ತಯ್ಯ ಅವರು ನಿಭಾಯಿಸಿದ್ದು ಯಶಸ್ವಿ ಕಾರ್ಯಕ್ಷಮತೆ ತೋರಿದ್ದಾರೆ. ಇವರು ಇದೀಗ ಈ ಸ್ಥಾನಕ್ಕೆ ಅಲಂಕರಿಸಿರುವದು ಕೊಡಗಿಗೂ ಹೆಮ್ಮೆಯ ವಿಚಾರವಾಗಿದೆ. ಉತ್ತಯ್ಯ ಅವರು ಮಕ್ಕಂದೂರಿನವರಾದ ಐಚೆಟ್ಟಿರ ದಿ. ಬೆಳ್ಯಪ್ಪ ಹಾಗೂ ಲಲ್ಲ (ತಾಮನೆ: ಚೆಪ್ಪುಡೀರ) ದಂಪತಿಯ ಪುತ್ರರಾಗಿದ್ದಾರೆ. ಇವರ ಪತ್ನಿ ಮನೆಯಪಂಡ ರವಿಮೇದಪ್ಪ ಅವರ ಪುತ್ರಿ ರಮ್ಯ ಅವರಾಗಿದ್ದಾರೆ. ರಿಯರ್ ಅಡ್ಮಿರಲ್ ರ್ಯಾಂಕ್ ಭೂಸೇನೆಯ ಮೇಜರ್ ಜನರಲ್ ಹುದ್ದೆಗೆ ಸರಿಸಮಾನವಾದದ್ದಾಗಿದೆ. ಈತನಕ ಇವರು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. - ಶಶಿ ಸೋಮಯ್ಯ