
ಗೋಣಿಕೊಪ್ಪಲು, ಮೇ ೩೧: ಶತಮಾನಗಳಿಂದ ಅರಣ್ಯವನ್ನೇ ತಮ್ಮ ದೇವರೆಂದು ನಂಬಿರುವ ಕಾಡಿನ ಮಕ್ಕಳು ನಾವೇ ಎಂದು ಹೇಳುವ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಹಾಸು ಪಾಸಿನಲ್ಲಿ ನೆಲೆ ಕಂಡುಕೊAಡಿರುವ ಗಿರಿಜನರು ಇನ್ನೂ ಕೂಡ ಮೌಢ್ಯತೆಯಿಂದ ಹೊರ ಬಾರದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ.ತಮ್ಮ ಹಾಡಿಗಳಿಗೆ ಜನಪ್ರತಿನಿಧಿಗಳಾಗಲಿ,ಅಧಿಕಾರಿಗಳಾಗಲಿ ಅನುಮತಿ ಇಲ್ಲದೆ ಪ್ರವೇಶ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಎಂಬ ನಾಮಫಲಕ ಅಳವಡಿಸಿ ಹೊರಗಿನಿಂದ ಯಾರು ಕೂಡ ಹಾಡಿ ಪ್ರವೇಶ ಮಾಡದಂತೆ ಎಚ್ಚರಿಕೆಯ ನಾಮ ಫಲಕಗಳು, ಬ್ಯಾನರ್ಗಳು ಕಾನೂನು ಬಾಹಿರವಾಗಿ ರಾರಾಜಿಸುತ್ತಿವೆ.!ಅಜ್ಜಯ್ಯನೇ ನಂಗ ದ್ಯಾವರ್.., ಅವನೇ ನಂಗನೆ ನೋಡಿಕೊತ್ತಾನೆ..!’ (ಅಜ್ಜಯ್ಯನೇ ನಮ್ಮ ದೇವರು, ಅವನೇ ಕಾಪಾಡುತ್ತಾನೆ) ‘ಯಾವ ಔಷಧಿ ನಮಗೆ ಬೇಡ, ಲಸಿಕೆ ಅಂತೂ ಬೇಡವೇ ಬೇಡ...’ ಎಂದು ಹಾಡಿಗೆ ಹೋದವರ ಮೇಲೆ ಕಿಡಿ ಕಾರುವ ಇಲ್ಲಿಯ ಮಹಿಳೆಯರು ಇಲ್ಲಿಂದ ಹೊರಡಿ ಎಂದು ಅಧಿಕಾರಿಗಳನ್ನೆ ಗದರಿಸಿ ಕಳುಹಿಸುತ್ತಾರೆ.!ಅಧಿಕಾರಿಗಳಿಗೆ ಇಂತಹ ಸನ್ನಿವೇಶ ಎದುರಾಗಿದ್ದು ನಾಗರಹೊಳೆ ರಾಷ್ಟಿçÃಯ ಉದ್ಯಾನದ ಆಸು ಪಾಸಿನಲ್ಲಿ ವಾಸ ಮಾಡುವ ಗದ್ದೆ ಹಾಡಿ ಹಾಗೂ ಕೆ.ಬಾಡಗ ಪಂಚಾಯಿತಿ ವ್ಯಾಪ್ತಿಯ ಬಾಳೆಗೋವು ಗಿರಿಜನರ ಹಾಡಿಯಲ್ಲಿ. ಸರ್ಕಾರದ ಸುತ್ತೋಲೆಯಂತೆ ಪ್ರತಿಯೋರ್ವ ನಾಗರಿಕನು ಕೊರೊನಾ ಲಸಿಕೆ ಪಡೆಯಬೇಕು, ಇದು ಕಡ್ಡಾಯವು ಕೂಡಾ. ಈ ಬಗ್ಗೆ ಲಸಿಕೆ ನೀಡುವ ಕುರಿತಾಗಿ ಕಂದಾಯ ಅಧಿಕಾರಿಗಳು, ಪಂಚಾಯಿತಿ ಪಿಡಿಓ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಗಿರಿಜನರ ಹಾಡಿಗೆ ಜಾಗ್ರತೆ ಮೂಡಿಸುವ ವಿಚಾರದಲ್ಲಿ ತೆರಳಿದಾಗ ಇಷ್ಟು ಮಂದಿಯನ್ನು ಹಾಡಿಯ ಪ್ರವೇಶಕ್ಕೆ ನಿರಾಕರಿಸಿ ವಾಪಾಸು ಕಳುಹಿಸಿದ್ದಾರೆ.! ಅಧಿಕಾರಿಗಳು ಪರಿ ಪರಿಯಾಗಿ ಮನವಿ ಮಾಡಿಕೊಂಡರೂ ಅಧಿಕಾರಿಗಳ ಮಾತಿಗೆ ಸೊಪ್ಪೆ ಹಾಕಲಿಲ್ಲ.
(ಮೊದಲ ಪುಟದಿಂದ) ಅಲ್ಲದೆ ಹಾಡಿಯ ಪ್ರವೇಶಕ್ಕೂ ನಿರ್ಬಂಧ ಹೇರಿದರು.
ಇದರಿಂದಾಗಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಮರು ಮಾತನಾಡದೇ ಮುಖ್ಯ ರಸ್ತೆಯಲ್ಲಿ ನಿಂತು ಅಲ್ಲಿಂದಲೇ ವಾಪಾಸ್ಸಾಗಿದ್ದಾರೆ.
ಸರ್ಕಾರದ ಸವಲತ್ತುಗಳನ್ನು ಪಡೆಯುವ ಇಲ್ಲಿನ ಜನರು ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದರೇ, ಮುಂದೇನು? ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಪ್ರತಿಯೊAದು ಯೋಜನೆ ಪಡೆಯಲು, ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಇನ್ನಿತರ ಕಚೇರಿಗಳ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಇಲ್ಲಿನ ಗಿರಿಜನ ಮುಖಂಡರು ಈ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಇವರಿಗಾಗಿಯೇ ಗಿರಿಜನ ಕಲ್ಯಾಣ ಅಭಿವೃದ್ಧಿ ಇಲಾಖೆ ಅನುಷ್ಠಾನಕ್ಕೆ ಬಂದಿದೆ. ಎಲ್ಲಾ ಕೆಲಸವು ಈ ಇಲಾಖೆಯ ಮೂಲಕವೇ ಸಾಗುತ್ತದೆ. ಆದರೆ ತಮ್ಮ ಹಾಡಿಯ ಮುಂದೆ ‘ಯಾರಿಗೂ ಪ್ರವೇಶವಿಲ್ಲ. ಹಾಡಿಯ ಯಜಮಾನನ ಅನುಮತಿ ಪಡೆದು ಪ್ರವೇಶ ಮಾಡಬೇಕು’ ಎಂಬ ಫಲಕ ಅಳವಡಿಸಿ ಅಧಿಕಾರಿಗಳಿಗೆ ಬೆದರಿಕೆ ತಂತ್ರ ರೂಪಿಸಿರುವುದು ಇಲ್ಲಿ ಕಾಡುತ್ತಿರುವ ಬಹು ದೊಡ್ಡ ಪ್ರಶ್ನೆಯಾಗಿದೆ. ಕಾನೂನು ಬಾಹಿರ ನಾಮಫಲಕ ಅಳವಡಿಸಲು ಇವರಿಗೆ ಅಧಿಕಾರ ನೀಡಿದವರು ಯಾರು.? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ.ಮನವೊಲಿಸುವ ಪ್ರಯತ್ನ ಮಾಡುತ್ತೇವೆ
ಅರಣ್ಯದ ಹಾಡಿಯಲ್ಲಿ ಇರುವ ಗಿರಿಜನರು ತಮ್ಮ ಹಲವು ಕೆಲಸ ಕಾರ್ಯಗಳಿಗೆ ಪಂಚಾಯಿತಿಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಪಂಚಾಯಿತಿಯೊAದಿಗೆ ಅವಿನಾಭಾವ ಸಂಬAಧವಿದೆ. ಈ ನಿಟ್ಟಿನಲ್ಲಿ ಖುದ್ದಾಗಿ ಅರಣ್ಯದ ಹಾಡಿಯಲ್ಲಿ ಇರುವ ಗಿರಿಜನರಿಗೆ ಕೊರೊನಾ ಲಸಿಕೆ ಹಾಕಿಸುವುದು ಇಲಾಖೆಯ ಜವಾಬ್ದಾರಿ. ಆದರೆ ಹಾಡಿಯಲ್ಲಿ ಯಾರಿಗೂ ಪ್ರವೇಶವಿಲ್ಲ ಎಂಬ ನಾಮಫಲಕ ಅಳವಡಿಸಿರುವುದು ಸರಿಯಲ್ಲ. ಈ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಾಮಫಲಕ ತೆರವುಗೊಳಿಸುವುದು ಉತ್ತಮ. ಅಲ್ಲದೆ ಈಗಾಗಲೇ ಹಾಡಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಲಸಿಕೆ ಪಡೆದಿದ್ದಾರೆ. ಹಾಡಿಯ ಮುಖಂಡರು ತಾವಾಗಿಯೇ ಮುಂದೆ ಬಂದು ಲಸಿಕೆ ಪಡೆಯಬೇಕು, ಇದರಿಂದ ಹಾಡಿಯಲ್ಲಿ ವಾಸ ಮಾಡುವ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಾರೆ ಎಂದು ಮನವಿ ಮಾಡಿದ್ದೇವೆ. ಎಲ್ಲರಲ್ಲಿಯೂ ಜಾಗ್ರತೆ ಮೂಡಿಸಿ ಲಸಿಕೆ ಪಡೆಯಲು ಸರ್ವ ಪ್ರಯತ್ನ ಮಾಡುತ್ತೇವೆ.
-ಕಳ್ಳಿಚಂಡ ಪೂಣಚ್ಚ, ಪಿಡಿಓ, ಕೆ.ಬಾಡಗ ಪಂಚಾಯಿತಿ
