ಮಡಿಕೇರಿ, ಜೂ. ೧: ಪೊಲೀಸ್ ಇಲಾಖೆಯಲ್ಲಿ ವಿವಿಧ ವೃತ್ತಗಳಲ್ಲಿ ವೃತ್ತನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಅಧಿಕಾರಿಗಳನ್ನು ಇಲಾಖೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಈ ತನಕ ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿದ್ದ ಅನೂಪ್ ಮಾದಪ್ಪ ಅವರು ಇದೀಗ ಮಡಿಕೇರಿ ಗ್ರಾಮಾಂತರ ವೃತ್ತಕ್ಕೆ ನಿಯೋಜಿತರಾಗಿದ್ದಾರೆ.
ಈ ಸ್ಥಾನಕ್ಕೆ ದಾವಣೆಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಈ ಹಿಂದೆ ಗೋಣಿಕೊಪ್ಪಲುವಿನಲ್ಲಿದ್ದ ಪಿ.ವಿ. ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿದೆ. ಕುಟ್ಟ ವೃತ್ತ ನಿರೀಕ್ಷಕರಾಗಿದ್ದ ಪರಶಿವಮೂರ್ತಿ ಅವರು ಇಗೀದ ಮೇಲ್ದರ್ಜೆಗೆ ಏರಿಸಲಾಗಿರುವ ಶನಿವಾರಸಂತೆ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.