ಮಡಿಕೇರಿ, ಜೂ.೧: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಡಿಕೇರಿ ಕಚೇರಿಯಲ್ಲಿ ಕಳೆದ ೨೨ ವರ್ಷಗಳಿಂದ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಎಸ್.ಗಣೇಶ್ ಅವರು ಸೋಮವಾರ ವಯೋನಿವೃತ್ತಿ ಹೊಂದಿದ್ದು, ಈ ಹಿನ್ನೆಲೆ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ನಗರದ ವಾರ್ತಾ ಭವನ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸರಳ ಸಮಾರಂಭದಲ್ಲಿ ಪಿ.ಎಸ್.ಗಣೇಶ್ ಅವರಿಗೆ ಶಾಲು, ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಪಿ.ಎಸ್.ಗಣೇಶ್ ಅವರು ಶಿಸ್ತು, ಶ್ರದ್ಧೆ, ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಎಷ್ಟೇ ಒತ್ತಡವಿದ್ದರೂ ಚತುರತೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಸರ್ಕಾರಿ ವಾಹನವನ್ನು ತಮ್ಮ ಕುಟುಂಬದ ವಾಹನದಂತೆ ಗಮನಿಸುತ್ತಿದ್ದರು. ಲಾಗ್ ಬರೆಯುವುದು, ಸಭೆ-ಸಮಾರಂಭ ಬಗ್ಗೆ ಮುಂಚಿತವಾಗಿ ಗಮನಕ್ಕೆ ತರುವುದು, ಹೀಗೆ ಹಲವು ಒಳ್ಳೆಯ ಗುಣ ಹೊಂದಿದ್ದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಸ್.ಗಣೇಶ್ ಅವರು ಕಳೆದ ೨೨ ವರ್ಷಗಳಿಂದ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಹಾಗೂ ಸಹೋದ್ಯೋಗಿ ಮಿತ್ರರ ಸಹಕಾರದಿಂದ ವಾರ್ತಾ ಇಲಾಖೆಯಲ್ಲಿ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ್ದೇನೆ ಎಂದರು.
ಪತ್ರಕರ್ತರಾದ ಮಲ್ಲಿಕಾರ್ಜುನ ಅವರು ಮಾತನಾಡಿ ಪಿ.ಎಸ್.ಗಣೇಶ್ ಅವರು ಪತ್ರಕರ್ತರ ಜೊತೆ ನಿಕಟ ಸಂಪರ್ಕ ಹೊಂದಿದ್ದರು, ಪತ್ರಕರ್ತರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು ಎಂದು ಶ್ಲಾಘಿಸಿದರು. ಪ್ರಥಮ ದರ್ಜೆ ಸಹಾಯಕರಾದ ರಾಜು, ಸಿಬ್ಬಂದಿಗಳಾದ ದೇವಕಿ, ದೇವರಾಜಯ್ಯ, ರಾಷ್ಟಿçÃಯ ಮಾಹಿತಿ ಕೇಂದ್ರ(ಎನ್ಐಸಿ) ಜಿಲ್ಲಾ ಅಧಿಕಾರಿ ಅಜಿತ್, ಸುಯೋಗ್, ಚೇತನ್ ಇತರರು ಇದ್ದರು.