ಮಡಿಕೇರಿ, ಜೂ, ೧: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಪ್ರಭಾಕರ್ ಚಿಕ್ಕಮಗಳೂರಿಗೆ ವರ್ಗಾವಣೆ ಗೊಂಡಿದ್ದಾರೆ.

ಭದ್ರಾ ವನ್ಯಜೀವಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರಭಾಕರ್ ನೇಮಕಗೊಂಡಿದ್ದಾರೆ. ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾವುದೇ ಅಧಿಕಾರಿಯ ನೇಮಕವಾಗಿಲ್ಲ.