ವೀರಾಜಪೇಟೆ, ಮೇ ೩೧: ಕೋವಿಡ್ ಷರತ್ತು ಉಲ್ಲಂಘಿಸಿ ಕೊರೊನಾ ಪರೀಕ್ಷೆ ಮಾಡಿಸದೆ ಅಗತ್ಯ ಸೇವಾ ಅಂಗಡಿಯಲ್ಲಿ ವ್ಯವಹಾರ ನಡೆಸುತ್ತಿದ್ದ ೫ ಮಂದಿ ವರ್ತಕರಿಗೆ ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ತಲಾ ರೂ. ೫೦೦ ದಂಡ ವಿಧಿಸಿ ಕ್ರಮಕೈಗೊಳ್ಳಲಾಗಿದೆ. ಇದೇ ರೀತಿಯಲ್ಲಿ ವರ್ತಕರ ಮೇಲಿನ ದಾಳಿ ಮುಂದುವರೆಯಲಿದೆ ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.