೨೦೨೦ ರಲ್ಲಿ ರಾಷ್ಟçಪತಿ ಪದಕಕ್ಕೆ ಭಾಜನರಾದ ಕೀರ್ತಿ ಇವರದ್ದು. ಕಾರ್ಯಕ್ಷಮತೆ, ನಿಷ್ಠಾವಂತ ಸೇವೆಯನ್ನು ಪರಿಗಣಿಸಿ ೨೦೨೦ರ ಆಗಸ್ಟ್ ೧೫ ಸ್ವಾತಂತ್ರ‍್ಯ ದಿನಾಚರಣೆಯಂದು ಘನವೆತ್ತ ರಾಷ್ಟçಪತಿಗಳ ಪದಕಕ್ಕೆ ಭಾಜನರಾಗಿದ್ದ, ಜನಸ್ನೇಹಿ ಪೊಲೀಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ, ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್‌ರವರು ತಮ್ಮ ಸುದೀರ್ಘ ಸೇವೆಯ ನಂತರ ನಿವೃತ್ತಿಯಾಗುತ್ತಿದ್ದಾರೆ.

ಪ್ರತಿಷ್ಠಿತ ರಾಷ್ಟçಪತಿ ಪೊಲೀಸ್ ಪದಕ್ಕೆ ಗೌರವಕ್ಕೆ ಬಾಜನರಾಗಿದ್ದ ಇವರು ಸಾಮಾನ್ಯ ಜನರೊಂದಿಗೆ ಮುಕ್ತವಾಗಿ ಬೆರೆತು ಜನಮಾನಸದಲ್ಲಿ ಜನಸ್ನೇಹಿ ಪೊಲೀಸ್ ಅಧಿಕಾರಿ ಎಂಬ ಹೆಸರುಗಳಿಸಿದ್ದರು. ದಿವಾಕರ್ ಹಲವು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳ ಎಡೆಮುರಿ ಕಟ್ಟಿದ್ದರು.

ಕಳೆದ ೩೩ ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿರುವ ದಿವಾಕರ್ ಪೊಲೀಸ್ ಇಲಾಖೆಗೆ ೧೯೮೮ ರಲ್ಲಿ ಬೆಂಗಳೂರು ನಗರ ಸಿವಿಲ್ ಪೊಲೀಸ್ ಪೇದೆಯಾಗಿ ಸೇರ್ಪಡೆಗೊಂಡಿದ್ದರು. ಸಿ.ಎನ್. ದಿವಾಕರ್ ೨೦೦೧ರಲ್ಲಿ ಸಿವಿಲ್ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಗೊಂಡು ಶ್ರವಣಬೆಳಗೊಳ ಠಾಣೆಯಿಂದ ಕರ್ತವ್ಯ ಆರಂಭಿಸಿದರು. ನಂತರ ಬಹುತೇಕ ತಮ್ಮ ವೃತ್ತಿ ಜೀವನವನ್ನು ಕೊಡಗಿನಲ್ಲಿ ಕಳೆದರು.

ಕೊಡಗಿನ ಶ್ರೀಮಂಗಲ, ಶನಿವಾರಸಂತೆ, ವೀರಾಜಪೇಟೆ, ಗ್ರಾಮಾಂತರ ಚೆನ್ನರಾಯಪಟ್ಟಣ, ಹೊಳೆನರಸೀಪುರ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಮಡಿಕೇರಿ ಸಂಚಾರಿ ಠಾಣಾಧಿಕಾರಿಯಾಗಿ ೨೦೦೯ ರಲ್ಲಿ ನಿಯೋಜನೆ ಗೊಂಡರು. ಇದೇ ಅವಧಿಯಲ್ಲಿ ವೃತ್ತ ನಿರೀಕ್ಷರಾಗಿ ಬಡ್ತಿ ಪಡೆದು ಕೊಡಗು ಗುಪ್ತದಳಕ್ಕೆ ನೇಮಕಗೊಂಡ ದಿವಾಕರ್ ನಂತರದ ದಿನಗಳಲ್ಲಿ ಮಂಗಳೂರು ನಗರ, ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರ ಕುಟ್ಟ ಪೊಲೀಸ್ ಠಾಣೆ, ಗೋಣಿಕೊಪ್ಪ ಪೊಲೀಸ್ ಠಾಣೆಗಳಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿ ಪ್ರಸ್ತ್ತುತ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಕೊಡಗಿನಲ್ಲಿಯೇ ನಿವೃತ್ತಿ ಹೊಂದುತ್ತಿರುವುದು ವಿಶೇಷವಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ದಿ. ಸಿ. ಎನ್.