ಮಹಾರಾಷ್ಟçದ ಜಿಲ್ಲೆಯಲ್ಲಿ ಮಕ್ಕಳಲ್ಲಿ ಅಧಿಕ ಸೋಂಕು
ಮುAಬೈ, ಮೇ ೩೧: ಮಹಾರಾಷ್ಟçದÀ ಅಹ್ಮದ್ನಗರ ಜಿಲ್ಲೆಯೊಂದರಲ್ಲಿ ಈ ತಿಂಗಳ ಅವಧಿಯಲ್ಲಿ ೮,೦೦೦ಕ್ಕೂ ಹೆಚ್ಚು ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಕಂಡುಬAದಿದೆ. ರಾಜಸ್ಥಾನದ ನಂತರ ಮಹಾರಾಷ್ಟç ಮಕ್ಕಳ ಸೋಂಕು ಪ್ರಕರಣದಲ್ಲಿ ಮುಂದಿದ್ದು, ಸರಕಾರವನ್ನು ಕೆಂಗೆಡಿಸಿದೆ. ೩ನೇ ಅಲೆಯ ಆತಂಕದಲ್ಲಿದ್ದೇವೆ. ಇದರ ಆರ್ಭಟವನ್ನು ತಗ್ಗಿಸಲು ಈಗಿನಿಂದಲೇ ರಕ್ಷಣಾತ್ಮಕ ಕ್ರಮ ಕೈಗೊಂಡಿದ್ದರೂ ಜಿಲ್ಲೆಯೊಂದರಲ್ಲೇ ೮ ಸಾವಿರ ಮಕ್ಕಳಲ್ಲಿ ಧನಾತ್ಮಕ ಪರೀಕ್ಷೆ ನಡೆಸಲಾಗಿದೆ. ಇದು ಆತಂಕಾರಿಕ ಎಂದು ಅಹ್ಮದ್ನಗರ ಜಿಲ್ಲಾ ಮುಖ್ಯಸ್ಥ ರಾಜೇಂದ್ರ ಭೋಸಲೆ ತಿಳಿಸಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಮಹಾರಾಷ್ಟç ಮತ್ತು ಇತರ ರಾಜ್ಯಗಳಲ್ಲಿ ಕೋವಿಡ್ ಮೂರನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾರಾಷ್ಟçದ ಸಾಂಗ್ಲಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಕೋವಿಡ್-೧೯ ಕೇಂದ್ರಗಳನ್ನು ತೆರೆಯಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಇತ್ತು. ಮೂರನೇ ಅಲೆಯ ಸಮಯದಲ್ಲಿ ನಾವು ಅದನ್ನು ತಪ್ಪಿಸಬೇಕಾಗಿದೆ.
ಅನಕ್ಷರ ನೋಂದಣಿ ಬಗ್ಗೆ ಪ್ರಶ್ನಿಸಿದ ನ್ಯಾಯಾಲಯ
ನವದೆಹಲಿ, ಮೇ ೩೧: ಕೋವಿಡ್ -೧೯ ಲಸಿಕೆ ಖರೀದಿ ನೀತಿ ಮತ್ತು ನೈಜ 'ಡಿಜಿಟಲ್ ಇಂಡಿಯಾ' ಪರಿಸ್ಥಿತಿಯನ್ನು ಅರಿತುಕೊಳ್ಳದೆ ಜನರು ಲಸಿಕೆ ಪಡೆಯಲು ಕೋವಿನ್ ಅಪ್ಲಿಕೇಶನ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ಎನ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ವಿಶೇಷ ಪೀಠ, ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ಆಪ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಡಿಜಿಟಲ್ ಇಂಡಿಯಾ ದೇಶದಲ್ಲಿ ಯಾವ ರೀತಿ ಇದೆ, ಹಳ್ಳಿಗಳಿಗೆ ತಲುಪಿದೆಯೇ, ಜನರಿಗೆ ಬಳಸಲು ಸುಲಭವಾಗುತ್ತಿದೆಯೇ ಈ ಬಗ್ಗೆ ಸರ್ಕಾರ ಆಲೋಚಿಸಿದೆಯೇ ಎಂದು ಪ್ರಶ್ನೆ ಮಾಡಿದೆ. ಕೊರೊನಾ ಸೋಂಕು ಇಳಿಮುಖವಾಗುತ್ತಿದೆ, ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ನೀವು ಹೇಳುತ್ತೀರಿ, ಆದರೆ ಕಣ್ಣು-ಕಿವಿ ತೆರೆದಿಟ್ಟು ನೋಡಿ, ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿರುತ್ತೀರಿ, ಗ್ರಾಮಾಂತರ ಪ್ರದೇಶಗಳ ಸ್ಥಿತಿ ಮಾತ್ರ ಭಿನ್ನವಾಗಿದೆ. ಜಾರ್ಖಂಡ್ನ ಒಬ್ಬ ಅನಕ್ಷರಸ್ಥ ಕಾರ್ಮಿಕ, ಕೂಲಿ ಕೆಲಸ ಮಾಡುವವನು ರಾಜಸ್ತಾನದಲ್ಲಿ ಕೋವಿನ್ ಆಪ್ ನಲ್ಲಿ ಹೇಗೆ ದಾಖಲಾತಿ ಮಾಡಿಕೊಳ್ಳುತ್ತಾನೆ? ಡಿಜಿಟಲ್ ಇಂಡಿಯಾದ ಸಮಸ್ಯೆಗಳನ್ನು ನೀವು ಹೇಗೆ ಬಗೆಹರಿಸುತ್ತಿದ್ದೀರಿ ಎಂದು ಹೇಳಿ ಎಂದು ಸುಪ್ರೀಂ ಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನೆ ಮಾಡಿತು. ದೇಶಾದ್ಯಂತ ಏನು ನಡೆಯುತ್ತಿದೆ ಎಂದು ಸ್ವಲ್ಪ ಕಣ್ಣು-ಕಿವಿ ತೆರೆದು ನೋಡಿ, ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನೀತಿ-ನಿರೂಪಣೆಗಳನ್ನು ಬದಲಾಯಿಸುತ್ತಿರಿ. ಇದನ್ನು ೧೫-೨೦ ದಿನಗಳ ಹಿಂದೆಯೇ ಮಾಡಬೇಕಾಗಿತ್ತು ಎಂದರು.
೩೦ ಲಕ್ಷ ರೈತರಿಗೆ ೨೦,೮೧೦ ಕೋಟಿ ರೂ. ಬೆಳೆ ಸಾಲ
ಬೆಂಗಳೂರು, ಮೇ ೩೧: ಕಳೆದ ಸಾಲಿನಲ್ಲಿ ಸರ್ಕಾರ ಹೊಂದಿದ್ದ ಶೇ. ೧೧೪.೭೦ ರೈತರಿಗೆ ಬೆಳೆಸಾಲ ನೀಡುವ ಗುರಿಯನ್ನು ಮೀರಿ ಸಾಧನೆ ಮಾಡಿದ್ದು, ೨೦೨೧-೨೨ರಲ್ಲಿ ೩೦ ಲಕ್ಷ ರೈತರಿಗೆ ೨೦,೮೧೦ ಕೋಟಿ ರೂ. ಬೆಳೆ ಸಾಲ ನೀಡುವ ಗುರಿಯನ್ನು ಬ್ಯಾಂಕ್ಗಳಿಗೆ ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತಾಪಿ ವರ್ಗದವರಿಗೆ ತೊಂದರೆಯಾಗದAತೆ ತಡೆಯಲು ೩೦ ಲಕ್ಷ ರೈತರಿಗೆ ಹೆಚ್ಚಿನ ಸಾಲ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ೨೦೨೦-೨೧ರ ಆರ್ಥಿಕ ವರ್ಷದಲ್ಲಿ ೨೪.೫೦ ಲಕ್ಷ ರೈತರಿಗೆ ೧೫೪೦೦ ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಿಕೆಯ ಗುರಿಯನ್ನು ಹೊಂದಲಾಗಿತ್ತು. ಅಪೆಕ್ಸ್ ಬ್ಯಾಂಕ್ ಹಾಗೂ ೨೧ ಡಿಸಿಸಿ ಬ್ಯಾಂಕ್ ಗಳು ೨೫,೯೩,೯೮೨ ರೈತರಿಗೆ ೧೭೪೯೦ ಕೋಟಿ ರೂಪಾಯಿ ಸಾಲ ನೀಡಿವೆ ಎಂದು ವಿವರಿಸಿದರು. ಸಾಲ ಸೌಲಭ್ಯ ಕುರಿತು ೨೧ ಡಿಸಿಸಿ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ೩೦ ಲಕ್ಷ ರೈತರನ್ನೂ ತಲುಪಬೇಕು, ೨೦೮೧೦ ಕೋಟಿ ರೂ. ಬೆಳೆ ಸಾಲವನ್ನು ನೀಡಬೇಕು ಎಂದು ಸೂಚಿಸಿದ್ದೇನೆ. ಲಾಕ್ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ, ಸಲಹೆ-ಸೂಚನೆಗಳನ್ನು ನೀಡಲಿದ್ದೇನೆ. ಕಳೆದ ಬಾರಿ ೫-೬ ಡಿಸಿಸಿ ಬ್ಯಾಂಕ್ ಗಳು ಶೇ. ೧೦೦ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈ ವೇಳೆ ಅವರಿಗೂ ಸಹ ಗುರಿ ಮುಟ್ಟಲೇಬೇಕು ಎಂದು ಸೂಚನೆಯನ್ನು ನೀಡಿದ್ದಾಗಿ ತಿಳಿಸಿದರು.ಡಿಸಿಸಿ ಬ್ಯಾಂಕ್ಗಳು ತಮಗೆ ನೀಡಿರುವ ಗುರಿಯನ್ನು ತಲುಪಲೇಬೇಕು. ಯಾವುದೇ ಕಾರಣಕ್ಕೂ ಇದರಿಂದ ತಪ್ಪಿಸಿಕೊಳ್ಳಬಾರದು. ರೈತರಿಗೆ ನೂರಕ್ಕೆ ನೂರು ಸಾಲ ಸಿಗಬೇಕು. ೨೧ ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆಯನ್ನೂ ಮಾಡಲಿದ್ದು, ೩೦ ಲಕ್ಷ ರೈತರಿಗೆ ೨೦೮೧೦ ಕೋಟಿ ರೂಪಾಯಿ ಬೆಳೆ ಸಾಲ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದರು.
ದೇಶವನ್ನು ೭೦ ವರ್ಷ ಹಿಂದಕ್ಕೆ ಕೊಂಡೊಯ್ದಿದ್ದೇ ಬಿಜೆಪಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ
ಬೆಂಗಳೂರು, ಮೇ ೩೧: ಕೇಂದ್ರದಲ್ಲಿ ಏಳು ವರ್ಷಗಳ ಆಡಳಿತ ಪೂರೈಸಿರುವ ಬಿಜೆಪಿಯ ಸಾಧನೆ ಶೂನ್ಯ ಎಂದು ಕಿಡಿಕಾರಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಏಳು ವರ್ಷಗಳ ಆಳ್ವಿಕೆಯಲ್ಲಿ ದೇಶವನ್ನು ೭೦ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದೇ ನರೇಂದ್ರ ಮೋದಿಯವರ ಸಾಧನೆ ಎಂದಿದ್ದಾರೆ. ತಮ್ಮ ನಿವಾಸದಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಮೋದಿಯವರ ನೇತೃತ್ವದ ಸರ್ಕಾರಕ್ಕೆ ಏಳು ವರ್ಷ ತುಂಬಿತೆAದು ಖಾಲಿ ಕೊಡ ಹೊತ್ತುಕೊಂಡು ಸಂಭ್ರಮ ಪಟ್ಟಿದ್ದಾರೆ. ದೇಶ ಸೂತಕದ ಮನೆಯಾಗಿದೆ. ಮನೆ ಮನೆಗಳೂ ಕತ್ತಲಾಗಿವೆ. ಪ್ರತಿ ಕಣ್ಣಿನಲ್ಲೂ ಕಣ್ಣೀರಿದೆ. ದೇಶದ ಜನ ಮೋದಿಯವರ ಆಡಳಿತಕ್ಕೆ ೭ ವರ್ಷವಾಯಿತೆಂದು ಸಂಭ್ರಮ ಪಟ್ಟಿಲ್ಲ. ಬದಲಾಗಿ ಶ್ರದ್ಧಾಂಜಲಿ ಅರ್ಪಿಸಿದವರಂತೆ ಶೋಕ ಪಟ್ಟಿದ್ದಾರೆ ಎಂದರು. ದೇಶದ ಪಾಲಿಗೆ ಮೋದಿಯವರ ೭ ವರ್ಷಗಳ ಸಾಧನೆ ಎಂದರೆ ಅಸಂಖ್ಯಾತ ದುರಂತಗಳ ಅವಧಿಯಾಗಿದೆ. ಪಟ್ಟಿ ಮಾಡಿದರೆ ಬಹುಶಃ ನೂರಾರು, ಸಾವಿರಾರು ಸುಳ್ಳುಗಳಿವೆ. ಬಿಜೆಪಿ ಎಂದರೆ ಸುಳ್ಳನ್ನು ಉತ್ಪಾದಿಸುವ ಜಗತ್ತಿನ ಅತಿ ದೊಡ್ಡ ಕೈಗಾರಿಕೆ ಇದ್ದಂತೆ ಎಂದು ಲೇವಡಿ ಮಾಡಿದರು. ೭೦ ವರ್ಷಗಳ ಅವಧಿಯಲ್ಲಿ ದೇಶದ ಜನರು ಕಷ್ಟ ಪಟ್ಟು ಕಟ್ಟಿದ ಅಮೂಲ್ಯವಾದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೇವಲ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ವೇಗವಾಗಿ ಹಿಂದು ಹಿಂದಕ್ಕೆ ಕುಸಿದು ಹೋಗುತ್ತಿದೆ. ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ಕೇವಲ ಸುಳ್ಳು ಘೋಷಣೆ ಎಂಬುದನ್ನು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಾರ ವಿಕಾಸವಾಗಿದೆ? ಎಂದು ಪ್ರಶ್ನಿಸಿದರು. ಸಬ್ ಕಾ ಸಾಥ್ ಅಂಬಾನಿ ಕಾ ವಿಕಾಸ್, ಅದಾನಿ ಕಾ ವಿಕಾಸ್, ಟೋಟಲಿ ಗುಜರಾತ್ ಕಾರ್ಪೊರೇಟ್ ಆದ್ಮಿ ಕಾ ವಿಶ್ವಾಸ್ ಆಗಿದೆ. ಯಾಕೆಂದರೆ ದೇಶದ ಜನ ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ.
ಶಾಲೆಗಳ ಪುನಾರಂಭಕೆ ನಿರ್ದೇಶನ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು, ಮೇ ೩೧: ಕೋವಿಡ್ ೧೯ ಸಾಂಕ್ರಾಮಿಕ ರೋಗದ ಮಧ್ಯೆ ಶಾಲಾ ತರಗತಿಗಳ ಪುನಾರಂಭ ದಿನಾಂಕವನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಇ ಸಂಚಿತ್ ಸಂಜೀವ್ ಕುಮಾರ್ ಅವರ ವಿಭಾಗೀಯ ಪೀಠವು ಈ ವಿಷಯದಲ್ಲಿ ವಾಸ್ತವತೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಕೋವಿಡ್ ೧೯ ಸಾಂಕ್ರಾಮಿಕ ರೋಗವು ಕಡಿಮೆಯಾಗದ ಹೊರತು ಶಾಲೆಗಳ ತೆರೆಯುವ ದಿನಾಂಕದ ಕುರಿತು ತೀರ್ಮಾನಿಸಲು ನಾವು ರಾಜ್ಯ ಸರ್ಕಾರವನ್ನು ಕೇಳಲು ಸಾಧ್ಯವಿಲ್ಲ. ನಾವು ವಾಸ್ತವಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ನಾವು ಏನನ್ನೂ ಊಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ೬ ರಿಂದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡುವಂತೆ ರಾಜ್ಯಕ್ಕೆ ನಿರ್ದೇಶನ ಕೋರಿ ರಾಧಾ ಎಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.