ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿ ರುವ ಆನೇರ ಜಾನಕಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಬರೋಬ್ಬರಿ ೩೩ ವರ್ಷಗಳ ಕಾಲ ಕಾರ್ಯ ನಿರ್ವಹಿ ಸಿದ್ದು, ಇದೀಗ ನಿವೃತ್ತಿಯಾಗಿದ್ದಾರೆ.
ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದ ಮತ್ತಾರಿ ಕಾರ್ಯಪ್ಪ ಸುಬ್ಬಮ್ಮ ದಂಪತಿಗಳ ಪುತ್ರಿ ಜಾನಕಿ ಅವರು ಚೆಟ್ಟಿಮಾನಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಶ್ರೀ ಕಾವೇರಿ ಕಾಲೇಜಿನಲ್ಲಿ, ಹಾಗೂ ಪದವಿಯನ್ನು ಸುಳ್ಯದ ಎನ್.ಎಮ್.ಸಿಯಲ್ಲಿ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಮಂಗಳ ಗಂಗೋತ್ರಿಯಲ್ಲಿ ಪಡೆದವರು. ಆ ಬಳಿಕ ತಾವೇ ಓದಿದ ಶ್ರೀಕಾವೇರಿ ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ನೇಮಕಗೊಂಡವರು. ಅವರ ಬೋಧನಾ ವೈಖರಿ ನನ್ನನ್ನೊಳಗೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು. ಜಾನಕಿ ಮೇಡಂ ಅವರು ತರಗತಿಗೆ ಬಂದರೆAದರೆ ವಿದ್ಯಾರ್ಥಿಗಳಿಗೆಲ್ಲ ಉತ್ಸಾಹದ ಗರಿ ಮೂಡಿದಂತೆ.
ಪ್ರತಿವಾರದಲ್ಲೊಂದು ದಿನ ತರಗತಿಯ ವಿದ್ಯಾರ್ಥಿಗಳ ಮಧ್ಯೆ ರಸಪ್ರಶ್ನೆ ಮತ್ತು ಚರ್ಚಾಸ್ಪರ್ಧೆಗಳನ್ನು ಏರ್ಪಡಿಸಿ, ಜ್ಞಾನವನ್ನು ತುಂಬುತ್ತಿದ್ದ ಅವರು, ಸಾಕಾಲಿಕ ವಿಷಯಗಳನ್ನು ಆರಿಸಿ ಅದರ ಪರ-ವಿರೋಧ ಚರ್ಚೆ ಮಾಡಿಸುವ ಮೂಲಕ ಪ್ರಚಲಿತ ವಿದ್ಯಾಮಾನಗಳ ಕುರಿತು ಹೆಚ್ಚಿನ ಅರಿವು ಮೂಡಿಸುತ್ತಿ ದ್ದರು. ಚಿನ್ನ-ಬೆಳ್ಳಿ, ವಜ್ರ-ವೈಡೂರ್ಯಗಳಿಗಿಂತಲೂ ನನಗೆ ವಿದ್ಯಾರ್ಥಿಗಳೇ ಆಭರಣಗಳು, ನಿಮ್ಮೆಲ್ಲರ ಮುಂದೆ ಅವೆಲ್ಲಾ ನಗಣ್ಯ ಎಂದು ಅವರು ನುಡಿದಾಗ ವಿದ್ಯಾರ್ಥಿಗಳ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಮೂರು ದಶಕಗಳ ಕಾಲ ಸಾವಿರಾರು ವಿದ್ಯಾರ್ಥಿಗಳನ್ನು ಅವರು ಶಿಷ್ಯಂದಿರಾಗಿ ಪಡೆದಿದ್ದಾರೆ ಓದಿದ ಶಾಲೆಯಲ್ಲಿ ಕಲಿಸಿದ ಗುರುಗಳೊಂದಿಗೆ ಮಕ್ಕಳಿಗೆ ಪಾಠ ಕಲಿಸುವ ಭಾಗ್ಯ ಜಾನಕಿ ಅವರಿಗೆ ಲಭಿಸಿದೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಗೆ ಅವರೇ ಸಾಕ್ಷಿ. ಅಮ್ಮನಂತೆ ಮಕ್ಕಳಿಗೆ ಮಮತೆ ನೀಡಿರುವ ಅವರು ನಿವೃತ್ತಿ ಜೀವನಕ್ಕೆ ಕಾಲಿರಿಸಿದ ಈ ಸಂದÀರ್ಭದಲ್ಲಿ ಗುರುಚರಣಕೆ, ನಿತ್ಯ-ಸತ್ಯ ಚೈತನ್ಯ ಕರಣಕೆ ನನ್ನ ನಮನ.
-ಶಿರಿನ್ ವಿಶ್ವನಾಥ್, ಮೈಸೂರು.