ಸುAಟಿಕೊಪ್ಪ, ಜೂ. ೧: ಕೋವಿಡ್ ಸೋಂಕಿಗೆ ಒಳಗಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ವರ್ಷಕ್ಕಿಂತ ಈ ವರ್ಷ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ೧೭೪ ಕೋವಿಡ್ ಪಾಸಿಟಿವ್ ಪ್ರಕರಣದಲ್ಲಿ ೯೧ ಮಂದಿ ಸುಂಟಿಕೊಪ್ಪ, ಜೂ. ೧: ಕೋವಿಡ್ ಸೋಂಕಿಗೆ ಒಳಗಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ವರ್ಷಕ್ಕಿಂತ ಈ ವರ್ಷ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ೧೭೪ ಕೋವಿಡ್ ಪಾಸಿಟಿವ್ ಪ್ರಕರಣದಲ್ಲಿ ೯೧ ಮಂದಿ ಸೊಪ್ಪುಗಳನ್ನು ರೋಗಿಗಳಿಗೆ ನೀಡಲಾಗುತ್ತದೆ. ದಾಖಲಾದ ಸೋಂಕಿತ ಹಾರೈಕೆಗೆ ೪ ಮಂದಿ ರೋಗಿಗಳಿಗೆ ಓರ್ವ ದಾದಿಯರನ್ನು ನೇಮಕಗೊಳಿಸಲಾಗಿದೆ ಎಂದರು.
ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಕೋವಿಡ್ ಪ್ರಕರಣದೊಂದಿಗೆ ಮಳೆಗಾಲವು ಆಗಮಿಸುತ್ತಿದ್ದು, ಟಾಸ್ಕ್ ಫೋರ್ಸ್ ಸಮಿತಿಯ ಜವಾಬ್ದಾರಿ ಹೆಚ್ಚಿದೆ ಎಂದರು.
ಸುAಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯರರ ಕೊರತೆ, ಆ್ಯಂಬ್ಯುಲೆನ್ಸ್, ಜೀಪ್ ಹಳೆಯದಾಗಿದ್ದು ಬದಲಾಯಿಸಬೇಕೆಂದು ಶಾಸಕರ ಗಮನ ಸಳೆಯಲಾಯಿತು.
ಡಿವೈಎಸ್ಪಿ ಶೈಲೆಂದ್ರ, ವೈದ್ಯಾಧಿಕಾರಿ ಜೀವನ್ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ನೋಡಲ್ ಅಧಿಕಾರಿ ಕೆ.ಟಿ. ದರ್ಶಿನಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕೋವಿಡ್ ಪಾಸಿಟಿವ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನಿತ್, ಕಂದಾಯ ಇಲಾಖೆಯ ಉಪತಹಶೀಲ್ದಾರ್ ಕೆ. ಶುಭ, ಕಂದಾಯ ಪರಿವೀಕ್ಷಕರಾದ ಶಿವಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಿಡಿಓ ವೇಣುಗೋಪಾಲ್ ಮತ್ತಿತರರು ಇದ್ದರು.