ಮಡಿಕೇರಿ, ಮೇ ೩೦: ಪಟ್ಟಣದ ಪುಟಾಣಿ ನಗರ ಹಾಗೂ ಮುತ್ತಪ್ಪ ದೇವಾಲಯ ಸಮೀಪ ಜೂಜಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ಮಾಡಿ ಒಟ್ಟು ೧೮ ಮಂದಿಯನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಡಿಕೇರಿ ನಗರ ಠಾಣಾಧಿಕಾರಿ ಅಂತಿಮ ಗೌಡ ನೇತೃತ್ವದ ತಂಡ ಜೂಜಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿದ್ದಾರೆ.
೨ ಕಡೆಗಳಲ್ಲಿ ತಲಾ ೮ ಮಂದಿ ಜೂಜಾಡುತ್ತಿದ್ದರು. ಒಟ್ಟು ೭೯೮೦ ನಗದು ವಶಪಡಿಸಿಕೊಳ್ಳಲಾಗಿದೆ.