ವೀರಾಜಪೇಟೆ, ಮೇ ೩೦: ಕಾಣೆಯಾಗಿದ್ದ ಕೇರಳ ಮೂಲದ ಕಾರ್ಮಿಕ ನೇಣಿಗೆ ಶರಣಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮಾನಂದವಾಡಿ ತಾಲೂಕಿನ ವಾಂತೋಡ್ ಪಾಲೇರಿ ನಿವಾಸಿ ಜೋಸೆಫ್ ಎನ್.ಸಿ. (೫೨) ನೇಣಿಗೆ ಶರಣಾದ ವ್ಯಕ್ತಿ.
ಜೀವನದಲ್ಲಿ ಜಿಗುಪ್ಸೆಗೊಂಡು ಜೋಸೆಫ್ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲ ಗ್ರಾಮದ ಪುಷ್ಪ ತಿಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಮೃತ ಜೋಸೆಫ್ ಒಂದು ತಿಂಗಳ ಹಿಂದೆ ಸೇರಿ ತೋಟದಲ್ಲಿ ಕೆಲಸ ಮಾಡುತ್ತಿದ್ದ. ತಾ ೧೪ ರಂದು ತೋಟದ ಮಾಲೀಕರಿಗೆ ಕೆಲಸಕ್ಕೆ ಇಂದು ಬರುವುದಿಲ್ಲವೆಂದು ಹೇಳಿ ತೆರಳಿದ್ದ, ಹಲವು ದಿನಗಳು ಕಳೆದರು ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ತಾ. ೨೮ ರಂದು ತೋಟದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರೊಬ್ಬರಿಗೆ ತೋಟದಲ್ಲಿ ದುರ್ವಾಸನೆ ಬಂದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮರದ ಕೊಂಬೆಯೊAದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಜೋಸೆಫ್ನ ಕೊಳೆತ ಮೃತದೇಹ ಪತ್ತೆಯಾಗಿದೆ.
ತೋಟದ ಮಾಲೀಕರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಕೆ.ಕೆ.ಎಸ್