ಮಡಿಕೇರಿ, ಮೇ ೩೦: ತಾ. ೨೮ ರಂದು ಮಡಿಕೇರಿಯ ಆರ್ಮಿ ಕ್ಯಾಂಟೀನ್ ಬಳಿ ವರದಿಗೆ ತೆರಳಿದ್ದ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರ್ತಿ ಪ್ರಜ್ಞಾ ಜಿ. ಆರ್.ಅವರ ಮೇಲೆ ವ್ಯಕ್ತಿಯೊಬ್ಬರು ದೈಹಿಕ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡ ಘಟನೆಗೆ ಸಂಬAಧಿಸಿದAತೆ ಮಡಿಕೇರಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಮಹಿಳಾ ಎಸ್ಐ ಅಚ್ಚಮ್ಮ ಹಾಗೂ ಸಿಬ್ಬಂದಿ ಕುಶಾಲನಗರದ ವ್ಯಕ್ತಿಯನ್ನು ಪತ್ತೆಹಚ್ಚಿ ತಾ. ೨೯ ರಂದು ಠಾಣೆಗೆ ಕರೆಸಿದ್ದರು. ವಿಚಾರಣೆಯ ಬಳಿಕ ಆ ವ್ಯಕ್ತಿ ಪ್ರಜ್ಞಾ ಅವರಲ್ಲಿ ನಿನ್ನೆಯ ಘಟನೆಗೆ ಕ್ಷಮೆಯಾಚಿಸಿ ಮುಂದೆAದೂ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಮಾಜಿ ಸೈನಿಕರ ಮೇಲಿನ ಗೌರವದಿಂದ ಪ್ರಕರಣಕ್ಕೆ ಇತಿಶ್ರೀ ಹಾಡಿ, ಮುಂದುವರಿಸದೇ ಇರಲು ಪುಕಾರುದಾರ ತೀರ್ಮಾನಿಸಿದರು. ಮಹಿಳಾ ಪೊಲೀಸ್ ಠಾಣೆಯ ಎಸ್ಐ ಅಚ್ಚಮ್ಮ ಹಾಗೂ ಸಿಬ್ಬಂದಿ ವರ್ಗದ ತುರ್ತು ಕ್ರಮಕ್ಕೆ ದೂರದಾರ ಅಭಿನಂದಿಸಿದ್ದಾರೆ.