ಮಡಿಕೇರಿ, ಮೇ ೨೯: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಎರಡು ರಾಜಕೀಯ ಪಕ್ಷಗಳ ಸಮಿತಿಗಳು ರಾಜ್ಯಮಟ್ಟದಿಂದ ವಿಸರ್ಜಿಸಲ್ಪಟ್ಟಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಜಿಲ್ಲಾ ಸಮಿತಿಗಳು ಇನ್ನು ಪುನರ್‌ರಚನೆಗೊಳ್ಳಬೇಕಿದೆ. ರಾಜ ಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ವಿದ್ಯಮಾನ ಕಂಡು ಬಂದಿದೆ.ಪ್ರಸಕ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಅಧ್ಯಕ್ಷರುಗಳು ಮಾತ್ರ ಅಧಿಕಾರದಲ್ಲಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಜೆಡಿಎಸ್ ಪಕ್ಷವು ಈ ಹಿಂದೆ ಅಸ್ತಿತ್ವದಲ್ಲಿದ್ದ ಜಿಲ್ಲಾ ಸಮಿತಿಯನ್ನು ವಿಸರ್ಜಿಸಿದ್ದು, ಈ ಪಕ್ಷದ ಅಧ್ಯಕ್ಷರಾಗಿರುವ ಕೆ.ಎಂ. ಗಣೇಶ್ ಅವರು ಸದ್ಯಕ್ಕೆ ಮುಂದುವರಿ ದಿದ್ದಾರೆ. ಇದೀಗ ಈ ತನಕ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಕೆ.ಕೆ. ಮಂಜುನಾಥ್ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ನಿನ್ನೆ ಕೊಡಗು ಜಿಲ್ಲೆಗೆ ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸುವದರೊಂದಿಗೆ ಈ ತನಕ ಇದ್ದ ಜಿಲ್ಲಾ ಸಮಿತಿಯು ವಿಸರ್ಜಿಸಲ್ಪಟ್ಟಿದೆ.

ತೀತಿರ ಧರ್ಮಜ ಉತ್ತಪ್ಪ ಅವರು ಕಾಂಗ್ರೆಸ್‌ನ ನೂತನ ಕಾರ್ಯಾ ಧ್ಯಕ್ಷರಾಗಿ ನೇಮಕ ಗೊಂಡಿದ್ದು, ಮುಂದಿನ ಆದೇಶದ ತನಕ ಇವರು ನೂತನ ಸಾರಥಿಯಾಗಲಿದ್ದಾರೆ. ಈ ಎರಡು ಪಕ್ಷಗಳ ನೂತನ ಜಿಲ್ಲಾ ಸಮಿತಿಯ ರಚನೆ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದ್ದು, ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ.

ಪಕ್ಷವನ್ನು ಪುನರ್ ಸಂಘಟಿಸುವ ನಿಟ್ಟಿನಲ್ಲಿ ಜೆಡಿಎಸ್‌ನಲ್ಲಿ ಈ ಹಿಂದೆ ಕೆಲವು ಬೆಳವಣಿಗೆಗಳು ನಡೆದಿದ್ದು, ರಾಜ್ಯದ ಪ್ರಮುಖರೂ ಕೊಡಗಿಗೆ ಆಗಮಿಸಿದ್ದರು. ಆದರೆ ಈ ತನಕವೂ ನೂತನ ಸಮಿತಿ ರಚನೆ ನಡೆಯದೆ ಕೇವಲ ಜಿಲ್ಲಾ ಅಧ್ಯಕ್ಷ ಕೆ.ಎಂ. ಗಣೇಶ್ ಅವರು ಮಾತ್ರ ಏಕಾಂಗಿಯಾಗಿ ಈ ಪಕ್ಷದಲ್ಲಿದ್ದಾರೆ. ರಾಜ್ಯ ಸಮಿತಿಯಿಂದ ತಮ್ಮನ್ನು ಅಧ್ಯಕ್ಷರಾಗಿ ಮುಂದು ವರಿಯುವಂತೆ ತಿಳಿಸಲಾಗಿದೆ. ಆದರೆ ಇನ್ನು ಯಾರಾದರೂ ಸಮರ್ಥರು ಇದ್ದಲ್ಲಿ ಅವರನ್ನು ಆಯ್ಕೆ ಮಾಡಲಿ, ತಾವು ರಾಜ್ಯ ಸಮಿತಿಯಲ್ಲಿ ಕಾರ್ಯನಿರ್ವ ಹಿಸುವದಾಗಿ ವರಿಷ್ಠರಿಗೆ ತಿಳಿಸಿರುವದಾಗಿ ಗಣೇಶ್ ಅವರು ‘ಶಕ್ತಿ’ಗೆ ಪ್ರತಿಕ್ರಿಯಿಸಿದರು. ಆದರೆ ಸದ್ಯದಲ್ಲಿ ಅಂತಿಮ ತೀರ್ಮಾನ ವಾಗಲಿದ್ದು, ತ್ವರಿತವಾಗಿ ನೂತನ ಸಮಿತಿಯೂ ರಚನೆಗೊಳ್ಳಲಿದೆ ಎಂಬದಾಗಿ ಗಣೇಶ್ ಆಶಾಭಾವನೆ ವ್ಯಕ್ತಪಡಿಸಿದರು.

ಸದ್ಯದಲ್ಲಿ ಕಾಂಗ್ರೆಸ್ ಪುನರ್‌ರಚನೆ

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಸದ್ಯದಲ್ಲಿ ೮ ರಿಂದ ೧೧ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕಾತಿ ಯಾಗಬೇಕಿದೆ. ಈ ತನಕ ಕಾರ್ಯಾಧ್ಯಕ್ಷರಾಗಿ ಮುಂದುವರಿ ಯಲು ರಾಜ್ಯ ವರಿಷ್ಠರು ಧರ್ಮಜ ಉತ್ತಪ್ಪ ಅವರಿಗೆ ಸೂಚನೆ ನೀಡಿದ್ದು, ಇತರ ಜಿಲ್ಲೆಗಳ ನೇಮಕ ಸಂದರ್ಭ ಈ ಸ್ಥಾನವನ್ನು ಇವರಿಗೆ ಮತ್ತೆ ಅಧಿಕೃತಗೊಳಿಸಲಿದೆ ಎಂದು ಹೇಳಲಾಗಿದೆ. ಸದ್ಯದ ಮಟ್ಟಿಗೆ ಈ ತನಕ ಇದ್ದ ಜಿಲ್ಲಾ ಸಮಿತಿಯನ್ನು ಪೂರ್ಣವಾಗಿ ವಿಸರ್ಜಿಸಲಾಗಿದ್ದು, ಪುನರ್ ನೇಮಕದ ಜವಾಬ್ದಾರಿಯನ್ನು ಧರ್ಮಜ ಉತ್ತಪ್ಪ ಅವರಿಗೆ ನೀಡಲಾಗಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಧರ್ಮಜ ಉತ್ತಪ್ಪ ಅವರು ಸದ್ಯದಲ್ಲಿ ಆದಷ್ಟು ತ್ವರಿತವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇರಿದಂತೆ ಬ್ಲಾಕ್ ಹಾಗೂ ಮುಂಚೂಣಿ ಘಟಕಗಳನ್ನು ರಚಿಸಲಿರುವದಾಗಿ ತಿಳಿಸಿದ್ದಾರೆ. ನೂತನ ಸಮಿತಿಗೆ ಸಂಬAಧಿಸಿದAತೆ ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗರು, ಎಂಎಲ್‌ಸಿ ಸೇರಿ ದಂತೆ ಪ್ರಮುಖರು ಗಳನ್ನು ಒಳಗೊಂ ಡಂತಹ ಕೋರ್ ಕಮಿಟಿಯನ್ನು ಮಾಡಿಕೊಂಡು ಇವರೆಲ್ಲರ ಅಭಿಪ್ರಾಯದಂತೆ ನೂತನ ಸಮಿತಿ ರಚನೆ ಪಕ್ಷ ಸಂಘಟನೆಗೆ ಮುಂದಾಗಲಿರುವದಾಗಿ ಧರ್ಮಜ ಉತ್ತಪ್ಪ ಅವರು ತಿಳಿಸಿದ್ದಾರೆ. ಪಕ್ಷದ ಸಂಘಟನೆ - ನೂತನ ಸಮಿತಿ ರಚನೆಯೊಂದಿಗೆ ಮುಂದೆ ಎದುರಾಗಲಿರುವ ಜಿ.ಪಂ. - ತಾ.ಪಂ. ಚುನಾವಣೆ ಎದುರಿಸಲು ಸಜ್ಜಾಗುವ ದಾಗಿ ಧರ್ಮಜ ಹೇಳಿದ್ದಾರೆ.

ಕೊಡಗಿನಲ್ಲಿ ಸದ್ಯದ ಮಟ್ಟಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇವುಗಳೊಂದಿಗೆ ಎಸ್‌ಡಿಪಿಐ ಬೆಳವಣಿಗೆ ಕಾಣುತ್ತಿರುವ ರಾಜಕೀಯ ಪಕ್ಷಗಳಾಗಿವೆ. ಜಿಲ್ಲೆಯ ಅಭಿವೃದ್ಧಿ, ಪರ - ವಿರೋಧ ಮತ್ತಿತರ ವಿಚಾರಗಳಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಪಾತ್ರವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ್ದಾಗಿದೆ. ಇದೀಗ ಬಿಜೆಪಿ ಹಾಗೂ ಎಸ್‌ಡಿಪಿಐ ಪಕ್ಷಗಳು ಮಾತ್ರ ಪ್ರಮುಖ ಪಕ್ಷಗಳಾಗಿ ಇದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂದಿನ ದಿನಗಳಲ್ಲಷ್ಟೆ ಪೂರ್ಣ ಪ್ರಮಾಣದಲ್ಲಿ ಪುನರ್‌ರಚನೆಗೊಳ್ಳಬೇಕಾಗಿರುವದು ಸದ್ಯಕ್ಕೆ ಕೊಡಗಿನ ರಾಜಕೀಯ ವಿದ್ಯಮಾನವಾಗಿದೆ.- ಶಶಿ ಸೋಮಯ್ಯ