ಮಡಿಕೇರಿ, ಮೇ ೨೯: ಸಂಪಾಜೆ ವಲಯದ ದಬ್ಬಡ್ಕ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾಗಿದ್ದ ರಕ್ಷಿತ್ ಎಂಬವರನ್ನು ಅಮಾನತುಗೊಳಿಸಲಾಗಿದೆ.ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಯಾಗಿರುವ ತಖತ್ ಸಿಂಗ್ ರಣಾವತ್ ಅವರು ಈ ಕುರಿತು ನಿನ್ನೆ ದಿನ ಲಿಖಿತ ಆದೇಶ ಹೊರಡಿಸಿದ್ದಾರೆ. ಲಾರಿ ಚಾಲಕರಿಂದ ಲಂಚ ಪಡೆದ ಸಂದರ್ಭ ಚಾಲಕರೇ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಬಳಿಕ ಸಂಪಾಜೆ ವಲಯ ಅರಣ್ಯಾಧಿಕಾರಿ ಈ ಪ್ರಕರಣದ ಬಗ್ಗೆ ತನಿಖೆ ಮಾಡಿ ಸಿಸಿಎಫ್ ಅವರಿಗೆ ವರದಿ ನೀಡಿದ್ದರು.
ವಿವರ ಈ ಕೆಳಗಿನಂತಿದೆ:ಸAಪಾಜೆ ವಲಯದ ದಬ್ಬಡ್ಕ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾದ ರಕ್ಷಿತ್ ಅವರನ್ನು ತಾ.೨೪.೫.೨೦೨೧ರಂದು ತನಿಖಾ ಠಾಣೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದ ಸಮಯದಲ್ಲಿ ವಾಹನಗಳನ್ನು ತಪಾಸಣೆ ನಡೆಸದೆ ಕಾನೂನು ಬಾಹಿರವಾಗಿ ಮರಮುಟ್ಟು ಹಾಗೂ ಇತರ ಅರಣ್ಯ ಉತ್ಪನ್ನಗಳನ್ನು ಕಳ್ಳ ಸಾಗಾಣಿಕೆಯಾಗದಂತೆ ತಟೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟು ಟಿಂಬರ್/ ಮರಮುಟ್ಟು ವಾಹನಗಳನ್ನು ತನಿಖಾ ಠಾಣೆಯಲ್ಲಿ ಸರಿಯಾಗಿ ಪರಿಶೀಲನೆ ನಡೆಸದೆ ಇರುವುದು ಕಂಡು ಬಂದಿರುತ್ತದೆ.
‘‘ಅಲ್ಲದೆ ಮೇ ೨೪ರ ರಾತ್ರಿ ಟಿಂಬರ್ ಸಾಗಿಸುತ್ತಿದ್ದ ವಾಹನ ಚಾಲಕರಿಂದ ಮೂಲ ದಾಖಲಾತಿಗಳ ಪ್ರತಿ ಇಲ್ಲದೆ ಇರುವುದು ಕಂಡುಬAದರೂ ಸಹ ಕ್ರಮಕೈಗೊಳ್ಳಲಿಲ್ಲ. ವಾಹನವನ್ನು ಕಳುಹಿಸಲು ಹಣಕ್ಕೆ ಬೇಡಿಕೆ ಇಟ್ಟು ವಾಹನ ಚಾಲಕರಿಂದ ಹಣ ಪಡೆಯುತ್ತಿರುವ ದೃಶ್ಯವನ್ನು ಸದರಿ ವಾಹನದ ಚಾಲಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುತ್ತಾರೆ. ಈ ವೀಡಿಯೋದ ಬಗ್ಗೆ ಅಧಿಕಾರಿ ರಕ್ಷಿತ್ ಅವರಿಗೆ ವಲಯ ಅರಣ್ಯಾಧಿಕಾರಿ ಅವರಿಂದ ನೋಟೀಸ್ ಜಾರಿಮಾಡಲಾಗಿತ್ತು. ಅವರು ಸಾರ್ವಜನಿಕ ವಲಯದಲ್ಲಿ ಇಲಾಖೆಯ ವರ್ಚಸ್ಸಿಗೆ ಧಕ್ಕೆ ತರುವಂತಿದ್ದು, ಇತರ ಸಿಬ್ಬಂದಿಗಳ ಕಾರ್ಯ ವೈಖರಿಯ ಮೇಲೆ ಪರಿಣಾಮ ಬೀರುವುದರಿಂದ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು ೧೯೬೬ರ ಪ್ರಕಾರ ಇವರ ಕರ್ತವ್ಯ ಲೋಪ, ನಿರ್ಲಕ್ಷö್ಯತೆ, ನಂಬಿಕೆ ದ್ರೋಹ ಹಾಗೂ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿರುವುದು ಕಂಡುಬAದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’’ ಎಂದು ಕೋರಿ ಪ್ರಸ್ತಾವನೆಯನ್ನು ಈ ಕಚೇರಿಗೆ ಸಲ್ಲಿಸಿದ್ದರು.
ಅದರಂತೆ ‘‘ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ’’ ಹುದ್ದೆಯ ನೇಮಕಾತಿ ಪ್ರಾಧಿಕಾರ ಅವರಿಗೆ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಸಂಪಾಜೆ ವಲಯ, ಅರಣ್ಯಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ವರದಿ ಹಾಗೂ ಶಿಫಾರಸ್ಸಿನಂತೆ ರಕ್ಷಿತ್ ಅವರ ವಿರುದ್ಧ ಕ್ರಮ
(ಮೊದಲ ಪುಟದಿಂದ) ಕೈಗೊಳ್ಳಲಾಗಿದೆ. ಅವರು ಸರ್ಕಾರದ ಕರ್ತವ್ಯದಲ್ಲಿ ನಿರ್ಲಕ್ಷö್ಯತೆ, ಬೇಜವಾಬ್ದಾರಿತನ, ಉದಾಸೀನತೆ ತೋರಿರುವುದು ಕಂಡು ಬಂದಿದೆ. ಕರ್ನಾಟಕ ನಾಗರೀಕ ಸೇವಾ ನಿಯಮ ೧೯೫೮ ಮತ್ತು ಕರ್ನಾಟಕ ಸೇವಾ ನಿಯಮ (ನಡತೆ) ನಿಯಮಾವಳಿ ೧೯೬೬ರ ನಿಯಮಗಳ ಉಲ್ಲಂಘನೆಯAತೆ ನಿಯಮಾನುಸಾರ ಸದರಿ ಆರೋಪದ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಲು ಅನುಕೂಲವಾಗುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸುವ ಬಗ್ಗೆ ಈ ಕೆಳಕಂಡAತೆ ಆದೇಶಿಸಲಾಗಿದೆ.
ರಕ್ಷಿತ್ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತಿನಲ್ಲಿಡಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಅವರು ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿ ೧೯೫೭ರ ಮೇರೆಗೆ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ವಲಯ ಅರಣ್ಯಾಧಿಕಾರಿಯವರ ಕಚೇರಿಯನ್ನು ಕೇಂದ್ರಸ್ಥಾನವಾಗಿ ನಿಗದಿಪಡಿಸಿದ್ದು, ಅನುಮತಿಯಿಲ್ಲದೇ ಕೇಂದ್ರಸ್ಥಾನವನ್ನು ಬಿಡಬಾರದಾಗಿ ಸೂಚಿಸಿದೆ. ಪ್ರತಿನಿತ್ಯ ಕುಶಾಲನಗರ ವಲಯ ಅರಣ್ಯಾಧಿಕಾರಿ ಅವರ ಕಚೇರಿಯಲ್ಲಿ ಸಹಿ ಮಾಡಲು ಆದೇಶಿಸಿದೆ.