ಮಡಿಕೇರಿ, ಮೇ ೨೮: ನಗರದ ಆರ್ಮಿ ಕ್ಯಾಂಟೀನ್‌ನಿAದ ಮದ್ಯ ಖರೀದಿಸಲು ನೂರಾರು ಮಂದಿ ಇಂದು ರಸ್ತೆಯಲ್ಲಿ ಸಾಲಿನಲ್ಲಿ ನಿಂತಿದ್ದು, ಇದನ್ನು ವರದಿ ಮಾಡಲು ತೆರಳಿದ್ದ ಮಹಿಳಾ ಪತ್ರಕರ್ತೆಯ ಮೊಬೈಲ್ ಕಸಿದು, ಹಲ್ಲೆಗೆ ವ್ಯಕ್ತಿಯೊಬ್ಬ ಮುಂದಾದ ಘಟನೆ ನಡೆದಿದ್ದು, ಸ್ಥಳದಲ್ಲಿ ಪೊಲೀಸ್ ಸಹಾಯಕ ಠಾಣಾಧಿಕಾರಿ ಇದ್ದರೂ, ಅಸಹಾಯಕರಂತೆ ಇದ್ದು, ಪತ್ರಕರ್ತಳನ್ನೇ ನಿಂದಿಸಿದ ವೀಡಿಯೋ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಖಂಡನೆ ವ್ಯಕ್ತಗೊಂಡಿದ್ದು, ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಗೃಹಸಚಿವರಿಗೆ ಮನವಿ ಸಲ್ಲಿಸಿದೆ.ಮಡಿಕೇರಿ ಆರ್ಮಿ ಕ್ಯಾಂಟೀನ್‌ನಲ್ಲಿ ಇಂದು ಸದಸ್ಯರಿಗೆ ಕಾರ್ಡ್ ಆಧಾರದಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡಲಾಗಿತ್ತು. ನಿನ್ನೆ ಮಧ್ಯರಾತ್ರಿ ೧.೩೦ಕ್ಕೇ ಬಂದು ಹಲವು ಗ್ರಾಹಕರು ಸ್ಥಳ ಮೀಸಲಿಟ್ಟಿದ್ದರು. ಬೆಳಿಗ್ಗೆ ೬ ಗಂಟೆ ವೇಳೆಗೆ ಸುಮಾರು ಸಾವಿರದಷ್ಟು ಗ್ರಾಹಕರು ಸುಮಾರು ೧ ಕಿ.ಮೀ.ನಷ್ಟು ಸರತಿ ಸಾಲಿನಲ್ಲಿ ನಿಂತಿದ್ದರು.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕ್ಯಾಂಟೀನ್ ವ್ಯವಸ್ಥಾಪಕ ಮುಂಡ್ಯೋಳAಡ ಸುಬ್ಬಯ್ಯ, ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅಂತಿಮ, ನಗರಸಭಾ ಸದಸ್ಯ ಅರುಣ್ ಶೆಟ್ಟಿ ಹಾಗೂ ಇತರರು ಶ್ರಮಿಸುತ್ತಿದ್ದರು. ಇದನ್ನು ವರದಿ ಮಾಡಲು ತೆರಳಿದ್ದ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರ್ತಿ ಜಿ.ಆರ್. ಪ್ರಜ್ಞಾ ಹಾಗೂ ‘ಶಕ್ತಿ’ ವರದಿಗಾರಿಕೆಗೆ ಜಿ.ಆರ್. ಪ್ರಜ್ವಲ್ ತೆರಳಿ ಫೋಟೋ ಹಾಗೂ ವೀಡಿಯೋ ಮಾಡುತ್ತಿದ್ದರು. ಈ ಸಂದರ್ಭ ಆರ್ಮಿ ಕ್ಯಾಂಟೀನ್‌ನ ಸಿಬ್ಬಂದಿ ಕುಟ್ಟಪ್ಪ ಎಂಬವರು ಇಬ್ಬರೂ ವರದಿಗಾರರನ್ನು ಬೆದರಿಸಿ ಜಾಗ ಖಾಲಿ ಮಾಡುವಂತೆ ಎಚ್ಚರಿಸಿದರು. ಎ.ಎಸ್.ಐ. ದಯಾನಂದ ಕೂಡಾ ವರದಿಗಾರರನ್ನು ಏಕವಚನದಲ್ಲಿ ಬೈದು ಸ್ಥಳ ಖಾಲಿ ಮಾಡುವಂತೆ ಹೇಳಿ ಪ್ರಜ್ವಲ್ ಅವರನ್ನು ದೈಹಿಕವಾಗಿ ತಳ್ಳಿ ಹಾಕಿದರು. ಇವರಿಬ್ಬರ ಮಾತಿನಿಂದ ಪ್ರಚೋದನೆಗೆ ಒಳಗಾದ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರನೆ ಬಂದು ಪ್ರಜ್ಞಾ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿ ಮೊಬೈಲ್ ಅನ್ನು ಕಿತ್ತು ಬಿಸಾಕಿದನÀಲ್ಲದೆ, ಮಹಿಳಾ ಪತ್ರಕರ್ತೆಯ ಕೈ ಹಿಡಿದು ಎಳೆದಾಡಿದ. ಆ ಸಂದರ್ಭದಲ್ಲಿ ಅಲ್ಲಿಯೇ ನಿಂತಿದ್ದ ಎಎಸ್‌ಐ ಹಲ್ಲೆಕೋರನ ಬೆಂಬಲಕ್ಕೆ ನಿಂತು, ವರದಿಗಾರ್ತಿಯನ್ನೇ ಕೆಟ್ಟದಾಗಿ ನಿಂದಿಸಿದರು.

(ಮೊದಲ ಪುಟದಿಂದ) ಸ್ಥಳಕ್ಕೆ ಧಾವಿಸಿದ ಮೇಜರ್ ಬಿ.ಎ. ನಂಜಪ್ಪ ಅವರು ಪ್ರಜ್ಞಾ ಅವರ ರಕ್ಷಣೆಗೆ ಧಾವಿಸಿ ಅವರ ಮೇಲೆ ಹೆಚ್ಚಿನ ಹಲ್ಲೆಯಾಗದಂತೆ ತಡೆದರು. ಮೊಬೈಲ್ ಅನ್ನು ಕಸಿಯುವ ತನಕವೂ ಧೈರ್ಯದಿಂದ ರೆಕಾರ್ಡ್ ಮಾಡಿದ ಪ್ರಜ್ಞಾ ಅದನ್ನು ವೈರಲ್ ಮಾಡಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಹಾಗೂ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಅವರ ಗಮನಕ್ಕೆ ತಂದರು.

ಸವಿತಾ ರೈ, ಎ.ಆರ್. ಕುಟ್ಟಪ್ಪ, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್, ಚಿತ್ತಾರ ಪ್ರತಿನಿಧಿ ಸಂತೋಷ್ ಇವರುಗಳು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದರು. ಆ ಸಂದರ್ಭ ದೂರವಾಣಿಯಲ್ಲಿ ‘ಶಕ್ತಿ’ ಸಂಪಾದಕರನ್ನು ಸಂಪರ್ಕಿಸಿದ ಡಾ. ಮೇಜರ್ ಕುಶ್ವಂತ್ ಕೋಳಿಬೈಲು ಅವರು ತಾನು ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕ ಜೊತೆಯಿದ್ದು, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಮಾತುಕತೆಗೆ ಆಹ್ವಾನಿಸಿದರು. ವ್ಯವಸ್ಥಾಪಕರ ಕಚೇರಿಯಲ್ಲಿ ಮಾತುಕತೆ ನಡೆದು ಮಧ್ಯಾಹ್ನ ೧೨ ಗಂಟೆಗೆ ಮತ್ತೆ ಸಭೆ ಸೇರಿತು. ಮಾಜೀ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಚಿಂಗಪ್ಪ ಅವರ ನೇತೃತ್ವದಲ್ಲಿ, ಕ್ಯಾಂಟೀನ್ ಸಿಬ್ಬಂದಿ ಕುಟ್ಟಪ್ಪ ಇಂದಿನ ಘಟನೆಗೆ ಪ್ರಜ್ಞಾ ಅವರಲ್ಲಿ ಕ್ಷಮೆಯಾಚಿಸಿದರು.

ಪತ್ರಕರ್ತರ ತಂಡ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಅವರನ್ನು ಭೇಟಿ ಮಾಡಿತು. ಸಿಐ ಅನೂಪ್ ಮಾದಪ್ಪ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಪೊಲೀಸ್ ಹಾಗೂ ಮಾಧ್ಯಮದವರು ಸಮಾಜದ ಏಳಿಗೆಗಾಗಿ ಒಗ್ಗಟ್ಟಿನಿಂದ ದುಡಿಯುತ್ತಿದ್ದು, ಇಂದಿನ ಘಟನೆಯನ್ನು ಮರೆತು ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುವ ಬಯಕೆಯನ್ನು ಇಬ್ಬರೂ ಅಧಿಕಾರಿಗಳು ವ್ಯಕ್ತಪಡಿಸಿದ್ದನ್ನು ಪತ್ರಕರ್ತರ ತಂಡ ಸ್ವೀಕರಿಸಿತು. ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಲು ಮುಂದಾದುದನ್ನು ಅಧಿಕಾರಿಗಳು ಖಂಡಿಸಿದರು.

ಪ್ರಜ್ಞಾ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಜ್ಞಾ ಅವರು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಗೆ ದೂರಿತ್ತಿದ್ದು, ಮೊಬೈಲ್‌ನಲ್ಲಿ ಸಿಕ್ಕಿದ್ದ ಆತನ ಭಾವಚಿತ್ರವನ್ನು ಪತ್ತೆಗಾಗಿ ನೀಡಿದ್ದಾರೆ.

ಖಂಡನೆ

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಹಾಗೂ ಈ ಎರಡೂ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೀದರ್, ಹಾವೇರಿ, ಯಾದಗಿರಿ, ಉಡುಪಿ, ಬೆಂಗಳೂರು ನಗರ, ಬಾಗಲಕೋಟೆ, ಬೆಂಗಳೂರು (ಮೊದಲ ಪುಟದಿಂದ) ಸ್ಥಳಕ್ಕೆ ಧಾವಿಸಿದ ಮೇಜರ್ ಬಿ.ಎ. ನಂಜಪ್ಪ ಅವರು ಪ್ರಜ್ಞಾ ಅವರ ರಕ್ಷಣೆಗೆ ಧಾವಿಸಿ ಅವರ ಮೇಲೆ ಹೆಚ್ಚಿನ ಹಲ್ಲೆಯಾಗದಂತೆ ತಡೆದರು. ಮೊಬೈಲ್ ಅನ್ನು ಕಸಿಯುವ ತನಕವೂ ಧೈರ್ಯದಿಂದ ರೆಕಾರ್ಡ್ ಮಾಡಿದ ಪ್ರಜ್ಞಾ ಅದನ್ನು ವೈರಲ್ ಮಾಡಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಹಾಗೂ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಅವರ ಗಮನಕ್ಕೆ ತಂದರು.

ಸವಿತಾ ರೈ, ಎ.ಆರ್. ಕುಟ್ಟಪ್ಪ, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್, ಚಿತ್ತಾರ ಪ್ರತಿನಿಧಿ ಸಂತೋಷ್ ಇವರುಗಳು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದರು. ಆ ಸಂದರ್ಭ ದೂರವಾಣಿಯಲ್ಲಿ ‘ಶಕ್ತಿ’ ಸಂಪಾದಕರನ್ನು ಸಂಪರ್ಕಿಸಿದ ಡಾ. ಮೇಜರ್ ಕುಶ್ವಂತ್ ಕೋಳಿಬೈಲು ಅವರು ತಾನು ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕ ಜೊತೆಯಿದ್ದು, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಮಾತುಕತೆಗೆ ಆಹ್ವಾನಿಸಿದರು. ವ್ಯವಸ್ಥಾಪಕರ ಕಚೇರಿಯಲ್ಲಿ ಮಾತುಕತೆ ನಡೆದು ಮಧ್ಯಾಹ್ನ ೧೨ ಗಂಟೆಗೆ ಮತ್ತೆ ಸಭೆ ಸೇರಿತು. ಮಾಜೀ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಚಿಂಗಪ್ಪ ಅವರ ನೇತೃತ್ವದಲ್ಲಿ, ಕ್ಯಾಂಟೀನ್ ಸಿಬ್ಬಂದಿ ಕುಟ್ಟಪ್ಪ ಇಂದಿನ ಘಟನೆಗೆ ಪ್ರಜ್ಞಾ ಅವರಲ್ಲಿ ಕ್ಷಮೆಯಾಚಿಸಿದರು.

ಪತ್ರಕರ್ತರ ತಂಡ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಅವರನ್ನು ಭೇಟಿ ಮಾಡಿತು. ಸಿಐ ಅನೂಪ್ ಮಾದಪ್ಪ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಪೊಲೀಸ್ ಹಾಗೂ ಮಾಧ್ಯಮದವರು ಸಮಾಜದ ಏಳಿಗೆಗಾಗಿ ಒಗ್ಗಟ್ಟಿನಿಂದ ದುಡಿಯುತ್ತಿದ್ದು, ಇಂದಿನ ಘಟನೆಯನ್ನು ಮರೆತು ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುವ ಬಯಕೆಯನ್ನು ಇಬ್ಬರೂ ಅಧಿಕಾರಿಗಳು ವ್ಯಕ್ತಪಡಿಸಿದ್ದನ್ನು ಪತ್ರಕರ್ತರ ತಂಡ ಸ್ವೀಕರಿಸಿತು. ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಲು ಮುಂದಾದುದನ್ನು ಅಧಿಕಾರಿಗಳು ಖಂಡಿಸಿದರು.

ಪ್ರಜ್ಞಾ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಜ್ಞಾ ಅವರು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಗೆ ದೂರಿತ್ತಿದ್ದು, ಮೊಬೈಲ್‌ನಲ್ಲಿ ಸಿಕ್ಕಿದ್ದ ಆತನ ಭಾವಚಿತ್ರವನ್ನು ಪತ್ತೆಗಾಗಿ ನೀಡಿದ್ದಾರೆ.

ಖಂಡನೆ

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಹಾಗೂ ಈ ಎರಡೂ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೀದರ್, ಹಾವೇರಿ, ಯಾದಗಿರಿ, ಉಡುಪಿ, ಬೆಂಗಳೂರು ನಗರ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಸೋಮವಾರಪೇಟೆ, ಸುಂಟಿಕೊಪ್ಪ, ಶಿರಸಿ, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ ಹಾಗೂ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘವು ಘಟನೆಯನ್ನು ಖಂಡಿಸಿದೆ. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಎ.ಕೆ. ನವೀನ್, ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಡಿ. ದಯಾನಂದ, ಮಾನವ ಹಕ್ಕುಗಳ ಜನಾಂದೋಲನ ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ, ಮಡಿಕೇರಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರುಗಳು ಕೂಡ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ. ಗ್ರೀನ್ ಸಿಟಿ ಫೋರಂನ ಸದಸ್ಯೆಯಾಗಿರುವ ಪ್ರಜ್ಞಾ ಅವರ ಮೇಲೆ ನಡೆದ ಹಲ್ಲೆಯನ್ನು ಸಂಸ್ಥೆಯ ಅಧ್ಯಕ್ಷ ಚೇಯಂಡ ಸತ್ಯ ಖಂಡಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೊರೊನಾದಂತಹ ಸಂದರ್ಭವನ್ನು ಪೊಲೀಸರು ದುರುಪಯೋಗಪಡಿಸಿಕೊಂಡು ಇಂತಹ ಕಿರುಕುಳ ನೀಡುತ್ತಿದ್ದು, ಇಂತಹ ಘಟನೆಗಳು ನಡೆದಾಗ ಪ್ರತಿಭಟನೆ ನಡೆಸುವುದು ಅಗತ್ಯವೆಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ವಿ.ಎಂ. ಮನು ಶೆಣೈ ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತರನ್ನು ಗದರಿಸುವಷ್ಟು ಪೊಲೀಸರಿಗೇಕೆ ಅಲ್ಲಿ ಆತಂಕವಿತ್ತು ಎಂದು ಪ್ರಶ್ನಿಸಿರುವ ಮಡಿಕೇರಿ ತಿರಿಬೊಳ್‌ಚ ಕೊಡವ ಸಂಘದ ಅಧ್ಯಕ್ಷೆ ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕೆAದು ಹೇಳಿದ್ದಾರೆ.