ಕಣಿವೆ, ಮೇ ೨೮: ಕಳೆದ ಕೆಲವು ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಉತ್ತಮವಾದ ಮಳೆ ಸುರಿದು ಭೂಮಿಯನ್ನು ಹಿತವಾಗಿ ಹದಗೊಳಿಸಿದ್ದರಿಂದ ಸಂತಸಗೊAಡ ಕೃಷಿಕರು ಅಲ್ಪಾವಧಿ ಬೆಳೆಯಾದ ಮುಸುಕಿನ ಜೋಳದ ಬಿತ್ತನೆಗೆ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ.
ಅರೆ ನೀರಾವರಿ ಪ್ರದೇಶದ ಕೃಷಿಕರು ವರುಣನನ್ನು ನಂಬಿ ಜೋಳದ ಬಿತ್ತನೆ ಮಾಡಿದ್ದಾರೆ. ನೀರಾವರಿ ಸೌಲಭ್ಯ ಹೊಂದಿರುವವರು ನಿಶ್ಚಿಂತೆಯಿAದ ಬಿತ್ತನೆ ಮಾಡುತ್ತಿದ್ದಾರೆ.
ದುಬಾರಿ ಖರ್ಚು: ಒಂದು ಎಕರೆ ಹೊಲದಲ್ಲಿ ಜೋಳ ಬೆಳೆಯಲು ಕನಿಷ್ಟ ಎಂದರೂ ರೂ. ೨೩ ರಿಂದ ೨೫ ಸಾವಿರ ಖರ್ಚು ತಗಲುತ್ತದೆ. ಒಂದು ಎಕರೆ ಜಮೀನಿನಲ್ಲಿ ಗರಿಷ್ಠ ೩೦ ಕ್ವಿಂಟಾಲ್ ಫಸಲು ಬಂದರೂ ಕೂಡ ಕ್ವಿಂಟಾಲ್ ಒಂದಕ್ಕೆ ಅಂದಿನ ಮಾರುಕಟ್ಟೆ ದರ ರೂ. ೧೩೦೦ ಇದ್ದರೂ ರೂ. ೩೫ ರಿಂದ ೩೯ ಸಾವಿರ ಸಿಗುತ್ತದೆ. ಇದರಲ್ಲಿ ಖರ್ಚು ಕಳೆದರೆ ಕೇವಲ ೧೨ ರಿಂದ ರಿಂದ ೧೫ ಸಾವಿರ ಲಾಭ ಸಿಗುತ್ತದೆ. ಇದರಲ್ಲಿ ನಮ್ಮ ಜೀವನ, ಮಕ್ಕಳ ಓದು, ಆಸ್ಪತ್ರೆ ಖರ್ಚು ಅದು ಇದು ಅಂತಾ ಖರ್ಚು ಇದ್ದೇ ಇರುತ್ತದೆ. ಇಂತಹದ್ದರಲ್ಲಿ ರೈತರು ಹೇಗೆ ಬದುಕಬೇಕು ಹೇಳಿ ಎನ್ನುತ್ತಾರೆ ಅನೇಕ ಕೃಷಿಕರು.
ಒಂದು ಎಕರೆ ಹೊಲದಲ್ಲಿ ಬಿತ್ತನೆ ಮಾಡಲು ಭೂಮಿ ಉಳುಮೆ ಮಾಡಿ ಬಿತ್ತನೆ ಮಣ್ಣನ್ನು ಅಣಿಗೊಳಿಸಲು ಎರಡು ಗಂಟೆ ಅವಧಿಯ ಟ್ರಾö್ಯಕ್ಟರ್ ಡಿಸ್ಕ್ ಹಾಕಿಸಲು ರೂ. ೨೨೦೦, ಮಣ್ಣು ಹುಡಿಗೊಳಿಸಲು ರೋಟ್ರಿ ಮಾಡಲು ರೂ. ೫೦೦, ಒಂದು ಎಕರೆ ಹೊಲದಲ್ಲಿ ಬಿತ್ತನೆ ಮಾಡುವ ತಲಾ ೫ ಕೆ.ಜಿ. ತೂಕದ ಎರಡು ಬ್ಯಾಗ್ ಬೀಜಕ್ಕೆ ರೂ. ೨೮೦೦, ಒಂದು ಚೀಲ ರಾಸಾಯನಿಕ ಗೊಬ್ಬರಕ್ಕೆ ೧೨೦೦, ಜೋಳದ ಬಿತ್ತನೆ ದಿನ ಜೋಳ ಕಣಿವೆ, ಮೇ ೨೮: ಕಳೆದ ಕೆಲವು ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಉತ್ತಮವಾದ ಮಳೆ ಸುರಿದು ಭೂಮಿಯನ್ನು ಹಿತವಾಗಿ ಹದಗೊಳಿಸಿದ್ದರಿಂದ ಸಂತಸಗೊAಡ ಕೃಷಿಕರು ಅಲ್ಪಾವಧಿ ಬೆಳೆಯಾದ ಮುಸುಕಿನ ಜೋಳದ ಬಿತ್ತನೆಗೆ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ.
ಅರೆ ನೀರಾವರಿ ಪ್ರದೇಶದ ಕೃಷಿಕರು ವರುಣನನ್ನು ನಂಬಿ ಜೋಳದ ಬಿತ್ತನೆ ಮಾಡಿದ್ದಾರೆ. ನೀರಾವರಿ ಸೌಲಭ್ಯ ಹೊಂದಿರುವವರು ನಿಶ್ಚಿಂತೆಯಿAದ ಬಿತ್ತನೆ ಮಾಡುತ್ತಿದ್ದಾರೆ.
ದುಬಾರಿ ಖರ್ಚು: ಒಂದು ಎಕರೆ ಹೊಲದಲ್ಲಿ ಜೋಳ ಬೆಳೆಯಲು ಕನಿಷ್ಟ ಎಂದರೂ ರೂ. ೨೩ ರಿಂದ ೨೫ ಸಾವಿರ ಖರ್ಚು ತಗಲುತ್ತದೆ. ಒಂದು ಎಕರೆ ಜಮೀನಿನಲ್ಲಿ ಗರಿಷ್ಠ ೩೦ ಕ್ವಿಂಟಾಲ್ ಫಸಲು ಬಂದರೂ ಕೂಡ ಕ್ವಿಂಟಾಲ್ ಒಂದಕ್ಕೆ ಅಂದಿನ ಮಾರುಕಟ್ಟೆ ದರ ರೂ. ೧೩೦೦ ಇದ್ದರೂ ರೂ. ೩೫ ರಿಂದ ೩೯ ಸಾವಿರ ಸಿಗುತ್ತದೆ. ಇದರಲ್ಲಿ ಖರ್ಚು ಕಳೆದರೆ ಕೇವಲ ೧೨ ರಿಂದ ರಿಂದ ೧೫ ಸಾವಿರ ಲಾಭ ಸಿಗುತ್ತದೆ. ಇದರಲ್ಲಿ ನಮ್ಮ ಜೀವನ, ಮಕ್ಕಳ ಓದು, ಆಸ್ಪತ್ರೆ ಖರ್ಚು ಅದು ಇದು ಅಂತಾ ಖರ್ಚು ಇದ್ದೇ ಇರುತ್ತದೆ. ಇಂತಹದ್ದರಲ್ಲಿ ರೈತರು ಹೇಗೆ ಬದುಕಬೇಕು ಹೇಳಿ ಎನ್ನುತ್ತಾರೆ ಅನೇಕ ಕೃಷಿಕರು.
ಒಂದು ಎಕರೆ ಹೊಲದಲ್ಲಿ ಬಿತ್ತನೆ ಮಾಡಲು ಭೂಮಿ ಉಳುಮೆ ಮಾಡಿ ಬಿತ್ತನೆ ಮಣ್ಣನ್ನು ಅಣಿಗೊಳಿಸಲು ಎರಡು ಗಂಟೆ ಅವಧಿಯ ಟ್ರಾö್ಯಕ್ಟರ್ ಡಿಸ್ಕ್ ಹಾಕಿಸಲು ರೂ. ೨೨೦೦, ಮಣ್ಣು ಹುಡಿಗೊಳಿಸಲು ರೋಟ್ರಿ ಮಾಡಲು ರೂ. ೫೦೦, ಒಂದು ಎಕರೆ ಹೊಲದಲ್ಲಿ ಬಿತ್ತನೆ ಮಾಡುವ ತಲಾ ೫ ಕೆ.ಜಿ. ತೂಕದ ಎರಡು ಬ್ಯಾಗ್ ಬೀಜಕ್ಕೆ ರೂ. ೨೮೦೦, ಒಂದು ಚೀಲ ರಾಸಾಯನಿಕ ಗೊಬ್ಬರಕ್ಕೆ ೧೨೦೦, ಜೋಳದ ಬಿತ್ತನೆ ದಿನ ಜೋಳ (ಮೊದಲ ಪುಟದಿಂದ) ಮನೆಯ ಕಣಕ್ಕೆ ಸಾಗಿಸಲು ೧೦೦೦ ರೂ, ಜೋಳವನ್ನು ಸೆಲ್ಲಿಂಗ್ ಮಾಡಿಸಲು ೨೫೦೦ ರೂ ಹೀಗೆ ತುಂಬಾ ಖರ್ಚು ಬಾಧಿಸುತ್ತದೆ ಎನ್ನುವ ಜೋಳದ ಕೃಷಿಕ ಚಿಕ್ಕಹೊಸೂರಿನ ಸಿ.ಎಂ. ಮಂಜುನಾಥ್, ಬಿ. ಶಿವಣ್ಣ, ಸದಾಶಿವ, ಸೋಮಣ್ಣ ಮೊದಲಾದವರು ಕೃಷಿಕರಾದ ನಾವು ಯಾವ ಬೆಳೆ ಬೆಳೆದರೂ ಬೆಲೆಯಂತೂ ಸಿಗಲ್ಲ. ಏನೋ ಅಪ್ಪ ಮಾಡಿದ ಆಸ್ತಿ ಪಾಳು ಬಿಡಬೇಕಲ್ಲ ಅಂತಾ ಮಾಡಬೇಕು. ಏನು (ಮೊದಲ ಪುಟದಿಂದ) ಮನೆಯ ಕಣಕ್ಕೆ ಸಾಗಿಸಲು ೧೦೦೦ ರೂ, ಜೋಳವನ್ನು ಸೆಲ್ಲಿಂಗ್ ಮಾಡಿಸಲು ೨೫೦೦ ರೂ ಹೀಗೆ ತುಂಬಾ ಖರ್ಚು ಬಾಧಿಸುತ್ತದೆ ಎನ್ನುವ ಜೋಳದ ಕೃಷಿಕ ಚಿಕ್ಕಹೊಸೂರಿನ ಸಿ.ಎಂ. ಮಂಜುನಾಥ್, ಬಿ. ಶಿವಣ್ಣ, ಸದಾಶಿವ, ಸೋಮಣ್ಣ ಮೊದಲಾದವರು ಕೃಷಿಕರಾದ ನಾವು ಯಾವ ಬೆಳೆ ಬೆಳೆದರೂ ಬೆಲೆಯಂತೂ ಸಿಗಲ್ಲ. ಏನೋ ಅಪ್ಪ ಮಾಡಿದ ಆಸ್ತಿ ಪಾಳು ಬಿಡಬೇಕಲ್ಲ ಅಂತಾ ಮಾಡಬೇಕು. ಏನು ಅಧಿಕಾರಿಗಳಿಂದ ಆಗುತ್ತಿಲ್ಲ ಎನ್ನುತ್ತಾರೆ ಅನೇಕ ರೈತರು.
ಒಟ್ಟಾರೆ ಬೇರೆ ಬೇರೆ ಉದ್ಯೋಗ ಹಾಗೂ ಉದ್ಯಮ ಮಾಡಿಕೊಂಡು ಕುಳಿತೇ ತಿನ್ನುವ ಶೇ. ೯೩ ದೇಶವಾಸಿಗಳಿಗೆ ಈ ಕೇವಲ ಶೇ. ೭ ರಷ್ಟಿರುವ ಅನ್ನದಾತರು ರಾತ್ರಿ ಹಗಲೆನ್ನದೇ ಬೆವರಿನೋಪಾದಿಯಲ್ಲಿ ರಕ್ತ ಬಸಿದು ಬೆಳೆವ ಬೆಳೆಗಳಿಗೆ ಸಂದರ್ಭಾನುಸಾರ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಇಲ್ಲದಿರುವುದು ಮಾತ್ರ ವಿಪರ್ಯಾಸವೇ ಸರಿ...!
-ಕೆ.ಎಸ್. ಮೂರ್ತಿ