ಮಡಿಕೇರಿ, ಮೇ ೨೮: ಅಗತ್ಯ ವಸ್ತು ಮಾರಾಟದ ಅಂಗಡಿಗಳನ್ನು ತೆರೆಯಲು ವಾರದ ಮೂರು ದಿನಗಳು ಅನುಮತಿ ನೀಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಅಂಗಡಿ ತೆರೆಯುವ ವರ್ತಕರು ಹಾಗೂ ಕೆಲಸಗಾರರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಪಡೆದಿರಬೇಕೆಂಬ ನಿಯಮವಿದ್ದರೂ, ವರದಿ ಪಡೆಯದ ವರ್ತಕರ ಅಂಗಡಿಗಳನ್ನು ಮುಚ್ಚಿಸಿ ನಗರಸಭೆ ಕ್ರಮಕೈಗೊಂಡಿದೆ.
ಪೌರಾಯುಕ್ತ ರಾಮದಾಸ್ ಮತ್ತು ಸಿಬ್ಬಂದಿಗಳ ತಂಡ ಪರಿಶೀಲನೆ ನಡೆಸಿ ಕೋವಿಡ್ ವರದಿ ಪಡೆಯದ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಮೆಡಿಕಲ್ ಶಾಪ್,
(ಮೊದಲ ಪುಟದಿಂದ) ತರಕಾರಿ, ದಿನಸಿ ಅಂಗಡಿ ಸೇರಿದಂತೆ ೧೦ ಮಳಿಗೆಗಳನ್ನು ಮುಚ್ಚಿಸಿದ್ದು, ಮುಂದಿನ ಸೋಮವಾರ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಪಡೆದು ಅಂಗಡಿ ತೆರೆಯಬೇಕು ಎಂದು ಎಚ್ಚರಿಸಿದ್ದಾರೆ. ಈ ನಡುವೆ ಅಧಿಕಾರಿಗಳ ಜೊತೆ ವರ್ತಕರು ಅಂಗಡಿ ಮುಚ್ಚುವ ವಿಚಾರಕ್ಕೆ ಸಂಬAಧಿಸಿದAತೆ ವಾಗ್ವಾದ ನಡೆಸಿದರು.
ಪೌರಾಯುಕ್ತ ರಾಮದಾಸ್ ಅವರು ನಗರದಲ್ಲಿ ಸಂಚರಿಸಿ ವರ್ತಕರ ನೆಗೆಟಿವ್ ವರದಿಯನ್ನು ಪರಿಶೀಲನೆ ಮಾಡಿದರು.
ಅಂಗಡಿ ಮಾಲೀಕನಿಗೆ ದಂಡ
*ವೀರಾಜಪೇಟೆ : ವೀರಾಜಪೇಟೆ ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಹೋಲ್ ಸೇಲ್ ಅಂಗಡಿ ಮಾಲೀಕನೊಬ್ಬ ೧೩೦ ರೂಪಾಯಿಗೆ ಮಾರಾಟ ಮಾಡಬೇಕಾದ ಗುಟ್ಕಾವನ್ನು ೨೦೦ ರೂಪಾಯಿಗೆ ಮಾರಾಟ ಮಾಡುತ್ತಿದ್ದದ್ದು ಕಂಡುಬAದಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಿದ ಕೋವಿಡ್ ಕಾರ್ಯಾಚರಣೆ ಅಧಿಕಾರಿಗಳಾದ ಪ್ರದೀಪ್ ಹಾಗೂ ಸುನೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಐದು ಸಾವಿರ ದಂಡ ವಿಧಿಸಿದ ಘಟನೆ ವೀರಾಜಪೇಟೆಯಲ್ಲಿ ನಡೆದಿದೆ.