ಮಡಿಕೇರಿ, ಮೇ ೨೮ : ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೊನಾ ಸೋಂಕಿನ ಸದ್ಯದ ಸ್ಥಿತಿಗತಿಗಳು ಮತ್ತು ಸೋಂಕು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ವಾಲ್ನೂರು, ಕಂಬಿಬಾಣೆ, ಕೆದಕಲ್, ಮದೆನಾಡು, ಸಂಪಾಜೆ, ಚೆಂಬು, ಪೆರಾಜೆ, ಕೊಡಗರಹಳ್ಳಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳೊಡನೆ ಚರ್ಚಿಸಿ ಸೂಕ್ತ ಸೂಚನೆಗಳನ್ನು ನೀಡಿದರು.