ವೀರಾಜಪೇಟೆ, ಮೇ ೨೮: ಮಡಿಕೇರಿಯ ಕೋಟೆಯ ಅರಮನೆ, ಪ್ರಾಚೀನ ಕಾಲದ ಗದ್ದುಗೆಯ ಸ್ಮಾರಕದ ಸಂರಕ್ಷಣೆಗೆ ಕಾಮಗಾರಿ ವಿಳಂಬವಾಗುತ್ತಿರುವುದರಿAದ ಮುಂದಿನ ೧೫ ದಿನಗಳೊಳಗೆ ಪ್ರಮಾಣಪತ್ರ ಹಾಗೂ ವಿವರವಾದ ವರದಿಯನ್ನು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ಸಲ್ಲಿಸುವಂತೆ ಮುಖ್ಯ ನ್ಯಾಯಾಧೀಶÀ ಅಭಯ್ ಶ್ರೀನಿವಾಸ್ ಓಕ ಅವರು ಇಂದು ಆದೇಶಿಸಿದ್ದಾರೆ.

ಉಚ್ಚ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಭಾಗೀಯ ಪೀಠದ ಮುಂದೆ ರಿಟ್ ಅರ್ಜಿಯ ವಿವಾದದ ವಿಚಾರಣೆ ಬಂದಾಗ ಮಡಿಕೇರಿಯ ಕೋಟೆ ಗದ್ದುಗೆ ಸಂರಕ್ಷಣೆಗಾಗಿ ರಿಟ್ ಅರ್ಜಿ ಸಲ್ಲಿಸಿದ ನಿವೃತ್ತ ಐ.ಎ.ಎಸ್. ಅಧಿಕಾರಿ ಜೆ.ಎಸ್. ಶಿವರುದ್ರಪ್ಪ ಪರವಾಗಿ ವಾದ ಮಂಡಿಸಿದ ವಕೀಲ ಎನ್. ರವೀಂದ್ರ ಕಾಮತ್ ಅವರು ಕೋಟೆ ಗದ್ದುಗೆ ರಕ್ಷಣೆಗಾಗಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಸರಕಾರ ರೂ. ೧೦ ಕೋಟಿ ೨೮ ಲಕ್ಷ ಬಿಡುಗಡೆ ಮಾಡಿದೆ. ಆದರೆ ಇನ್ನು ಟೆಂಡರ್ ಆಗಿಲ್ಲ. ಕಾಮಗಾರಿಯೂ ಆರಂಭವಾಗಿಲ್ಲ. ಇದೇ ರೀತಿ ಮುಂದುವರೆದರೆ ಶಿಥಿಲಗೊಂಡಿರುವ ಅರಮನೆ ಗದ್ದುಗೆಗೆ ಹಾನಿಯಾಗುವ ಸಾಧ್ಯತೆ ಇದೆ. ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲು ಆದೇಶ ನೀಡುವಂತೆ ವಿಭಾಗೀಯ ಪೀಠವನ್ನು ಕೋರಿದರು.

ಪುರಾತತ್ವ ಇಲಾಖೆಯ ವಕೀಲ ಮಧುಕರ್ ದೇಶಪಾಂಡೆ ಅವರು ಇಲಾಖೆಯ ಆಡಳಿತಾತ್ಮಕವಾದ ಸಮಸ್ಯೆಯಿಂದ ಟೆಂಡರ್ ಕರೆಯಲು ವಿಳಂಬವಾಗಿದೆ. ಕಾಮಗಾರಿ ಟೆಂಡರ್ ಕರೆಯಲು ಎಲ್ಲ ಸಿದ್ಧತೆ ನಡೆದಿದೆ. ಮಳೆಗಾಲದ ಮುನ್ನವೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸ ಲಾಗುವುದು. ನ್ಯಾಯಾಲಯದ ಆದೇಶದಂತೆ ಕೋಟೆ ಹಾಗೂ ಗದ್ದುಗೆ ಸ್ಮಾರಕ ಕಟ್ಟಡಗಳನ್ನು ರಕ್ಷಿಸಲಾಗುವುದು. ಮುಂದಿನ ೧೫ ದಿನಗಳೊಳಗೆ ಇಲಾಖೆಯಿಂದ ಪ್ರಮಾಣ ಪತ್ರ, ಕಾಮಗಾರಿಯ ಪೂರ್ಣ ವರದಿಯನ್ನು ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸರಕಾರದ ಪರ ವಕೀಲ ವಿಜಯ ಕುಮಾರ್ ಪಾಟೀಲ್ ಅವರು ವಾದ ಮಂಡಿಸಿ ಮಡಿಕೇರಿ ಕೋಟೆ ಹಾಗೂ ಗದ್ದುಗೆಯ ರಕ್ಷಣೆ ಕೋವಿಡ್-೧೯ ಪರಿಸ್ಥಿತಿಯಿಂದ ವಿಳಂಬವಾಗಿದೆ. ಮಡಿಕೇರಿಯ ತಾಲೂಕು ತಹಶೀಲ್ದಾರ್ ಸೋಂಕಿನಿAದ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವುದರಿಂದ ಗದ್ದುಗೆಯ ಸರ್ವೆ ಕಾರ್ಯ ತಡವಾಗಿದೆ. ಮುಂದಿನ ೨ ವಾರದೊಳಗೆ ಗದ್ದುಗೆಯ ಅತಿಕ್ರಮಿತ ಜಾಗದ ಸರ್ವೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಕೋಟೆ ಅರಮನೆ, ಗದ್ದುಗೆಯ ಸ್ಮಾರಕಗಳ ಸಂರಕ್ಷಣೆಗೆ ಸರಕಾರವು ಎಲ್ಲ ಕಾರ್ಯಗಳನ್ನು ಕೈಗೊಂಡಿದೆ ಎಂದರು.

ಕೊಡಗು ಜಿಲ್ಲಾಧಿಕಾರಿ ಅವರು ಕೋಟೆ ಅರಮನೆ ಗದ್ದುಗೆಯ ರಕ್ಷಣೆಗೆ ಸಂಬAಧಿಸಿದAತೆ ಯಥಾಸ್ಥಿತಿಯನ್ನು ಪರಿಶೀಲಿಸಿ ಶೀಘ್ರ ಕಾಮಗಾರಿಗಾಗಿ ಆರಂಭಕ್ಕೆ ಪುರಾತತ್ವ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ನ್ಯಾಯಾಲಯ ಆದೇಶಿಸಿ ವಿವಾದದ ವಿಚಾರಣೆಯನ್ನು ಜೂನ್ ೧೬ಕ್ಕೆ ಮುಂದೂಡಿದೆ.