ಮಡಿಕೇರಿ, ಮೇ ೨೭: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರೊಬ್ಬರ ನಗದು ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಆಸ್ಪತ್ರೆಯ ಸಿಬ್ಬಂದಿಯನ್ನು ಪತ್ತೆಹಚ್ಚುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮದೆನಾಡು ಗ್ರಾಮದ ನಿವಾಸಿ, ಕೋವಿಡ್ ಆಸ್ಪತ್ರೆಯ ಡಿ ದರ್ಜೆ ಮಹಿಳಾ ಸಿಬ್ಬಂದಿ ದಿಲ್ಶಾದ್ (೪೫) ಕಳ್ಳತನ ಪ್ರಕರಣದ ಆರೋಪಿ.
ತಾ. ೯ ರಂದು ಕೊರೊನಾ ಸೋಂಕಿಗೆ ಒಳಪಟ್ಟ ಕೂಡಿಗೆ ಗ್ರಾಮದ ರಜನಿಕಾಂತ್ ಎಂಬವರು ತಾ. ೨೩ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತಾ. ೨೦ ರ ಬೆಳಗಿನ ಜಾವ ಬೆಳಿಗ್ಗೆ ಸುಮಾರು ೪ ಗಂಟೆ ವೇಳೆಯಲ್ಲಿ ಸೋಂಕಿತನ ಜೇಬಿನಿಂದ ಹಣ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಬಳಿಕ ಕುಟುಂಬಸ್ಥರು ನೀಡಿದ ದೂರಿನನ್ವಯ ತನಿಖೆ ನಡೆಸಿ, ಆರೋಪಿಯನ್ನು
ವೀರಾಜಪೇಟೆ, ಮೇ ೨೭: ಎಲ್ಲಡೆ ಕೊರೊನಾ ಸೋಂಕು ಗಾಳಿಯ ವೇಗಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಸರ್ಕಾರವು ಸೋಂಕು ತಡೆಗಟ್ಟಲು ಕಠಿಣ ಕ್ರಮಗಳನ್ನು ತಂದರೂ ಸಾರ್ವಜನಿಕರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬAದ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.
ವೀರಾಜಪೇಟೆ ನಗರದ ಶಿವಕೇರಿ ವ್ಯಾಪ್ತಿಯ ಪಟ್ಟಣ ಪಂಚಾಯಿತಿಯ ಪಂಪ್ಹೌಸ್ ಬಳಿ ಸುಮಾರು ೭-೮ ಮಂದಿ ಯುವಕರು ವಾಹನ ನಿಲ್ಲಿಸಿಕೊಂಡು ಮಾತನಾಡುತ್ತಿರುವುದು ಕಂಡುಬAದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ನಗರ ಪಿ.ಎಸ್.ಐ. ಜಗದೀಶ್ ಧೂಳ್ಶೆಟ್ಟಿ ಅವರು ದಾಳಿ ನಡೆಸಿದ್ದಾರೆ. ಸ್ಥಳದಲ್ಲಿದ್ದ ಯುವಕರ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಯುವಕರ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಯಮಗಳನ್ನು ಗಾಳಿಗೆ ತೂರಿ ವೀರಾಜಪೇಟೆ ನಗರದ ಜೈನರ ಬೀದಿಯಲ್ಲಿರುವ ಜಿಮ್ ತೆರೆದು ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಹೆಚ್.ಎಸ್. ಬೋಜಪ್ಪ ಅವರು ತರಬೇತುದಾರ ಲಕ್ಷಿö್ಮÃಶ್ ಎಂಬವನ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ೫೧ (ಬಿ) ೨೬೯ ಐ.ಪಿ.ಸಿ. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರ ನಿರ್ದೇಶನದಲ್ಲಿ ಪಿ.ಎಸ್.ಐ. ಜಗದೀಶ್ ಧೂಳಶೆಟ್ಟಿ, ಅಪರಾಧ ವಿಭಾಗದ ಪಿ.ಎಸ್.ಐ. ಹೆಚ್.ಎಸ್. ಬೋಜಪ್ಪ, ಸಿಬ್ಬಂದಿಗಳಾದ ಗಿರೀಶ್ ಟಿ.ಎಸ್., ಮುನೀರ್, ಮುಸ್ತಫ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ಕೆ.ಕೆ.ಎಸ್. ವೀರಾಜಪೇಟೆ