ರಾಜ್ಯಕ್ಕೆ ಇಂದು ಮತ್ತೆ ೫೧೯೦ ವಯಲ್ಸ್ ಎಂಫೊಟೆರಿಸಿನ್ ಚುಚ್ಚುಮದ್ದು
ನವದೆಹಲಿ, ಮೇ ೨೭: ಕಪ್ಪು ಶಿಲೀಂಧ್ರದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಇಂದು ಕರ್ನಾಟಕಕ್ಕೆ ಹೆಚ್ಚುವರಿಯಾಗಿ ೫೧೯೦ ವಯಲ್ಸ್ ಎಂಫೊಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿದ ಸಚಿವರು ರಾಜ್ಯಕ್ಕೆ ನಿನ್ನೆಯ ತನಕ ಅಂದರೆ ೨೬ ಮೇ ೨೦೨೧ ರವರೆಗೆ ೫೧೮೦ ವಯಲ್ಸ್ ಎಂಫೊಟೆರಿಸಿನ್-ಬಿ ರಾಜ್ಯಕ್ಕೆ ಹಂಚಿಕೆ ಮಾಡಲಾಗಿತ್ತು. ಇಂದು ರಾಜ್ಯದ ಬೇಡಿಕೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ ೫೧೯೦ ವಯಲ್ಸ್ ನೀಡಲಾಗಿದೆ. ಇಲ್ಲಿಯ ತನಕ ರಾಜ್ಯಕ್ಕೆ ಒಟ್ಟು ೧೦೩೭೦ ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಯಿತು ಎಂದರು. ಇದಲ್ಲದೆ, ರಾಜ್ಯಕ್ಕೆ ಇದುವರೆಗೆ ಕೊರೊನಾ ಚಿಕಿತ್ಸೆಗಾಗಿ ಒಟ್ಟು ೧೪,೨೫,೦೦೦ ವಯಲ್ಸ್ ಡೆಮ್ಡೆಸಿವಿರ್ ಹಂಚಿಕೆ ಮಾಡಲಾಗಿದೆ. ಹಾಗೆಯೇ ರಾಜ್ಯಕ್ಕೆ ೧೩೯೩೫ ವಯಲ್ಸ್ ಟೊಸಿಲಿಜುಮಾಬ್ ಚುಚ್ಚುಮದ್ದನ್ನು ಸಹ ವಿತರಿಸಲಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.
ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟಕ್ಕೆ ನಕಾರ
ಬೆಂಗಳೂರು, ಮೇ ೨೭: ಸರ್ಕಾರ ಈ ಹಿಂದೆ ಜಿಂದಾಲ್ ಸಂಸ್ಥೆಗೆ ಜಮೀನು ಮಾರಾಟ ಮಾಡುವ ನಿರ್ಧಾರಕ್ಕೆ ಗುರುವಾರದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡದೆ ಆ ಕುರಿತ ಪ್ರಸ್ತಾವನೆಯನ್ನು ತಳ್ಳಿಹಾಕಿದೆ. ಈ ಸಂಬAಧ ಸಚಿವ ಸಂಪುಟ ಸಭೆಯ ಬಳಿಕ ಗೃಹ ಹಾಗೂ ಕಾನೂನು ಖಾತೆಗಳ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ, ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ಜಿಂದಾಲ್ ಕಂಪೆನಿಗೆ ಜಮೀನು ಮಾರಾಟದ ಪ್ರಸ್ತಾವಕ್ಕೆ ಈ ಸಂಪುಟ ಸಭೆ ಅನುಮೋದನೆ ನೀಡಿಲ್ಲ ಎಂದರು. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೊಮ್ಮಾಯಿ, ಜಿಂದಾಲ್ಗೆ ಜಮೀನು ನೀಡುವ ಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ಗೊತ್ತಿಲ್ಲ. ಜಿಂದಾಲ್ ಕುರಿತು ಹೈ ಕೋರ್ಟ್ನಲ್ಲಿ ಪಿಐಎಲ್ ಇದೆ. ಸುಪ್ರೀಂ ಕೋರ್ಟ್ನಲ್ಲಿಯೂ ಪ್ರಕರಣ ಇದೆ. ಅಂದು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಈಗ ಪಿಐಎಲ್ ಆಧಾರದಲ್ಲಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್ ಏನು ತೀರ್ಪು ನೀಡುತ್ತದೆ ನೋಡಿ ಮುಂದೆ ತೀರ್ಮಾನ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಲಾಕ್ಡೌನ್ ವಿಸ್ತರಣೆ ಶೇ. ೩೬ ರಷ್ಟು ಮಾತ್ರ ಪರಿಣಾಮಕಾರಿ
ಬೆಂಗಳೂರು, ಮೇ ೨೭: ರಾಜ್ಯದಲ್ಲಿ ಕೋವಿಡ್-೧೯ ಕರ್ಫ್ಯೂ ವಿಸ್ತರಣೆ ಮಾಡಿರುವುದು ಶೇ. ೩೬ ರಷ್ಟು ಮಾತ್ರ ಪರಿಣಾಮಕಾರಿಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಮೇ ೧೦-೨೪ ರಂದು ಲಾಕ್ಡೌನ್ನಲ್ಲಿ ಶೇ. ೮೦ ರಷ್ಟು ಪರಿಣಾಮಕಾರಿಯಾಗಿತ್ತು. ಆದರೆ ಮೇ ೧೯ ರಂದು ವಿಸ್ತರಣೆ ಮಾಡಿದ ಬಳಿಕ ಪರಿಣಾಮಕಾರಿತ್ವ ಶೇ. ೩೬ ರಷ್ಟು ಮಾತ್ರ ಇದೆ, ಕೋವಿಡ್-೧೯ ತಡೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಐಐಎಸ್ಸಿಯ ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ವಿಭಾಗದ ತಂಡ ಹೇಳಿದೆ. ಮೂರು ಬೇರೆ ಬೇರೆ ಸನ್ನಿವೇಶಗಳು ನಿರೀಕ್ಷಿಸಲಾಗಿದ್ದ ಪೈಕಿ ಮೇ ೨೫ ವರೆಗಿನ ವಾಸ್ತವದಲ್ಲಿ ದೃಢಪಟ್ಟಿರುವ ಪ್ರಕರಣಗಳು ಏರಿಕೆ ಕಂಡಿವೆ. ಲಾಕ್ಡೌನ್ ಇಲ್ಲದ ಅತ್ಯಂತ ಕೆಟ್ಟ ಸಂದರ್ಭದಲ್ಲಿ ೨೪.೨೮ ಲಕ್ಷ ಪ್ರಕರಣಗಳನ್ನು ನಿರೀಕ್ಷಿಸಲಾಗಿತ್ತು, ಶೇ. ೫೦ ರಷ್ಟು ಲಾಕ್ಡೌನ್ನಲ್ಲಿ ೨೪.೨೧ ಲಕ್ಷ ಇತ್ತು. ಪೂರ್ತಿ ಪರಿಣಾಮಕಾರಿ ಸಂದರ್ಭದಲ್ಲಿ ೨೪.೦೪ ಲಕ್ಷ ಇತ್ತು. ಆದರೆ ಒಟ್ಟು ದೃಢಪಟ್ಟ ಪ್ರಕರಣಗಳು ೨೪.೭೨ ಲಕ್ಷ ಪ್ರಕರಣಗಳು ತೀರಾ ಕೆಟ್ಟ ಪರಿಸ್ಥಿತಿಯ ನಿರೀಕ್ಷೆಗಿಂತಲೂ ಹೆಚ್ಚಾಗಿತ್ತು. ಇದು ಸಕ್ರಿಯ ಪ್ರಕರಣಗಳಷ್ಟೇ ಇದೆ ಎಂದು ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ವಿಭಾಗದ ನಿರ್ದೇಶಕ ಪ್ರೊಫೆಸರ್ ಸಶಿಕುಮಾರ್ ಗಣೇಶನ್ ಹೇಳಿದ್ದಾರೆ. ಆದರೆ ಲಾಕ್ಡೌನ್ ಪರಿಣಾಮಕಾರಿಯಾಗಿಲ್ಲ ಎಂಬ ಕಾರಣವನ್ನು ನೀಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ಶಶಿಕುಮಾರ್ ಗಣೇಶನ್ ಅಭಿಪ್ರಾಯಪಟ್ಟಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ ಮತ್ತಿಬ್ಬರ ಬಂಧನ
ಬೆAಗಳೂರು, ಮೇ ೨೭: ಕೋವಿಡ್ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬAಧಿಸಿದAತೆ ಇತ್ತೀಚೆಗೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನ ಬಂಧನವಾದ ಬೆನ್ನಲ್ಲೇ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವರುಣ್ ಹಾಗೂ ಯಶವಂತ ಕುಮಾರ್ ಬಂಧಿತ ಆರೋಪಿಗಳು. ಸುದ್ದಿಗಾರರೊಂದಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬAಧಿಸಿದAತೆ ಈವರೆಗೆ ೧೦ ಜನರನ್ನು ಬಂಧಿಸಲಾಗಿದ್ದು, ನಿನ್ನೆ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದರು.